Education scholarship : ಇಂಜಿನಿಯರಿಂಗ್ (engineering) ಅಥವಾ ಮೆಡಿಕಲ್ (Medical) ವಿದ್ಯಾಭ್ಯಾಸ ಮಾಡುವುದಾದರೆ ಖರ್ಚು ಸ್ವಲ್ಪ ಜಾಸ್ತಿ ಇರಬಹುದು, ಯಾಕೆಂದರೆ ಕಾಲೇಜ್ ನಿಂದ ಹಿಡಿದು ನಾಲ್ಕು ವರ್ಷಗಳ ಶಿಕ್ಷಣ ಮುಗಿಸುವಷ್ಟರಲ್ಲಿ ಸಾಕಷ್ಟು ಹಣ ಖರ್ಚಾಗುತ್ತದೆ
ಹಾಗಾಗಿ ನೀವು ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದಿದ್ದರೆ ನೀವು ಟ್ಯಾಲೆಂಟ್ ಹೊಂದಿದ್ದರೆ, ಚಿಂತೆ ಬೇಡ ಬೇರೆ ಬೇರೆ ರೀತಿಯ ಸ್ಕಾಲರ್ಶಿಪ್ ಪಡೆದುಕೊಂಡೆ ಅಧ್ಯಯನ ಮುಂದುವರಿಸಬಹುದು
ಹೀಗೆ ಸದ್ಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಮೆಜಾನ್ ನಿಂದ 50 ಸಾವಿರ ರೂಪಾಯಿಗಳ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಅದುವೇ ಅಮೆಜಾನ್ ಫ್ಯೂಚರ್ ಇಂಜಿನಿಯರಿಂಗ್ ಸ್ಕಾಲರ್ಶಿಪ್ 2023 (Amazon future engineering scholarship 2023)
ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 75,000 ಸ್ಕಾಲರ್ಶಿಪ್, ಇದು ಕೋಲ್ಗೇಟ್ ಸಂಸ್ಥೆಯ ಕೊಡುಗೆ
ಪ್ರತಿ ವರ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೀಡಲಾಗುವ ಅಮೆಜಾನ್ (Amazon) ಮತ್ತು ಫೌಂಡೇಷನ್ ಫಾರ್ ಎಕ್ಸಲೆನ್ಸ್ ಎಜ್‌ಜಿಒ (Foundation for Excellence) ವತಿಯಿಂದ ಸ್ಕಾಲರ್ಶಿಪ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿರಬೇಕು. ಅದರಲ್ಲೂ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡುತ್ತಿರುವವರಿಗೆ ಸ್ಕಾಲರ್ಶಿಪ್ ನೀಡುವುದು ಮಾತ್ರವಲ್ಲದೆ ಟ್ರೈನಿಂಗ್ ಕೂಡ ಅಮೆಜಾನ್ ನಲ್ಲಿ ಪಡೆಯಬಹುದಾಗಿದೆ.
Amazon future engineering scholarship ಪಡೆಯಲು ಬೇಕಾಗಿರುವ ಅರ್ಹತೆಗಳು
*ವಿದ್ಯಾರ್ಥಿಯು ಭಾರತೀಯ ನಾಗರಿಕನಾದದ್ದು ಭಾರತದಲ್ಲಿ ಶಿಕ್ಷಣ ಪಡೆಯುತ್ತಿರಬೇಕು.
*202324ನೇ ಸಾಲಿನಲ್ಲಿ ಬಿಇ ಅಥವಾ ಬಿ ಟೆಕ್ (BE/ BTech) ಮೊದಲ ವರ್ಷಕ್ಕೆ ಸೇರ್ಪಡೆಗೊಂಡಿರಬೇಕು.
Engineering in computer science ಅಥವಾ ತತ್ಸಮಾನ ವೃತ್ತಿಪರ ಕೋರ್ಸ್ ಮಾಡುತ್ತಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ಮೀರಬಾರದು
ಅಮೆಜಾನ್ ಸ್ಕಾಲರ್ಶಿಪ್ ನ ಪ್ರಯೋಜನ ಅಂದ್ರೆ ಪ್ರತಿ ವರ್ಷ 50,000ಗಳನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುವುದು. ಮೊದಲ ವರ್ಷ ಲ್ಯಾಪ್ಟಾಪ್ ಕೂಡ ವಿತರಣೆ ಮಾಡಲಾಗುತ್ತದೆ. ಅಮೆಜಾನ್ ನಲ್ಲಿ ಇಂಟರ್ನ್ಶಿಪ್ ಮಾಡಲು ಕೂಡ ಅವಕಾಶವಿದೆ.
ಮನೆ ಇಲ್ಲದವರು ಸ್ವಂತ ಮನೆ ಕಟ್ಟಿಕೊಳ್ಳಲು ಸಾಲ ಮತ್ತು ಸಹಾಯಧನ! ಅರ್ಜಿ ಆಹ್ವಾನ
Amazon future engineering scholarship ಪಡೆಯಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಬಿ ಇ ಅಥವಾ ಬಿ ಟೆಕ್ ಅಧ್ಯಯನ ಮಾಡುತ್ತಿರುವುದಕ್ಕೆ ಕಾಲೇಜಿನಿಂದ ದೃಢೀಕರಣ ಪತ್ರ ಅಥವಾ ರೆಸಿಪ್ಟ್
ದ್ವಿತೀಯ ಪಿಯುಸಿಯ ಅಂಕಪಟ್ಟಿ
ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರ
ವಿದ್ಯಾರ್ಥಿಯ ಇತ್ತೀಚಿನ ಫೋಟೋಗಳು
ಕಾಲೇಜು ಖರ್ಚು ವೆಚ್ಚಗಳ ಬಗ್ಗೆ ವಿವರ
ಇಂತಹವರ ಯುಪಿಐ ಐಡಿ ಬಂದ್! ಫೋನ್ ಪೇ, ಗೂಗಲ್ ಪೇ ಯಾವುದೂ ವರ್ಕ್ ಆಗೋಲ್ಲ
Amazon future engineering scholarship ಪಡೆಯಲು ಸಲ್ಲಿಸುವುದು ಹೇಗೆ?
https://www.buddy4study.com/page/amazon-future-engineer-scholarship ಈ ವೆಬ್ ಸೈಟ್ ನಲ್ಲಿ ಅಮೆಜಾನ್ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ. ಸಲ್ಲಿಸಲು ಕೊನೆಯ ದಿನಾಂಕ 2023 ಡಿಸೆಂಬರ್ 31.
Such students get 50,000 Education scholarship every year, Apply Today
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.