ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 75,000 ಸ್ಕಾಲರ್ಶಿಪ್, ಇದು ಕೋಲ್ಗೇಟ್ ಸಂಸ್ಥೆಯ ಕೊಡುಗೆ

Story Highlights

ದೀಗ ಬ್ಯಾಚುಲರ್ ಆಫ್ ಡೆಂಟಲ್ (bachelor of dental surgery) ಸರ್ಜರಿ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡಲು ಕೋಲ್ಗೇಟ್ ಮುಂದಾಗಿದೆ.

Education Scholarship : ಭಾರತದಲ್ಲಿ ಅತಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿರುವ ಕೋಲ್ ಗೇಟ್ (Colgate) ಇದೀಗ ವಿದ್ಯಾರ್ಥಿ ವೇತನ (scholarship) ನೀಡಲು ಮುಂದಾಗಿದೆ. ಇದೀಗ ಬ್ಯಾಚುಲರ್ ಆಫ್ ಡೆಂಟಲ್ (bachelor of dental surgery) ಸರ್ಜರಿ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡಲು ಕೋಲ್ಗೇಟ್ ಮುಂದಾಗಿದೆ.

ಕೆಲವರಿಗೆ ಶಿಕ್ಷಣ ಪಡೆಯಬೇಕು ಎನ್ನುವ ಆಸೆ ಇರುತ್ತೆ. ಇನ್ನು ಕೆಲವರು ಉನ್ನತ ಶಿಕ್ಷಣ (Higher Education) ಪಡೆದುಕೊಳ್ಳಲು ಪರದಾಡುತ್ತಾರೆ. ಟ್ಯಾಲೆಂಟ್ ಇದ್ರು ಹಣ ಇಲ್ಲ ಎನ್ನುವ ಕಾರಣಕ್ಕೆ ಹಲವರಿಗೆ ಮುಂದಿನ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ

ಮನೆ ಇಲ್ಲದವರು ಸ್ವಂತ ಮನೆ ಕಟ್ಟಿಕೊಳ್ಳಲು ಸಾಲ ಮತ್ತು ಸಹಾಯಧನ! ಅರ್ಜಿ ಆಹ್ವಾನ

ಆದರೆ ಇದೀಗ ಟ್ಯಾಲೆಂಟ್ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅರ್ಹ ವಿದ್ಯಾರ್ಥಿಗಳಿಗೆ ಕೋಲ್ಗೇಟ್ ಪಾಮೋಲಿವ್ ಲಿಮಿಟೆಡ್ ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಆರಂಭಿಸಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ ಮಾಡಲಾಗುವುದು.

ದೇಶದ ಯಾವುದೇ ಪ್ರಮುಖ ವಿಶ್ವವಿದ್ಯಾಲಯದಿಂದ ಅಥವಾ ಶಿಕ್ಷಣ ಸಂಸ್ಥೆಯಿಂದ ಡೆಂಟಲ್ ಸರ್ಜರಿ ಕೋರ್ಸ್ (dental surgery Course) ಓದುತ್ತಿರುವವರಿಗೆ ಈ ಸ್ಕಾಲರ್ಶಿಪ್ ಲಭ್ಯವಾಗುತ್ತದೆ.

ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ಸ್ಕಾಲರ್ಶಿಪ್ ಪ್ರೋಗ್ರಾಮ್ 2023! (Colgate keep India smiling scholarship program 2023)

ದೇಶದಲ್ಲಿ ವಾಸಿಸುವ ಜನರ ಹಲ್ಲು ಗಟ್ಟಿಯಾಗಿಸುವುದು ಮಾತ್ರವಲ್ಲದೆ ಇದೀಗ ಕೋಲ್ಗೇಟ್ ಶಿಕ್ಷಣ ಪಡೆದುಕೊಳ್ಳುವ ವಿದ್ಯಾರ್ಥಿಗಳ ಮುಖದಲ್ಲಿಯೂ ಮಂದಹಾಸ ಮೂಡಿಸುತ್ತಿದೆ, ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಯಾರಿಗೆ ಅರ್ಹತೆ ಇದೆ ಅರ್ಜಿ ಸಲ್ಲಿಸುವುದು ಹೇಗೆ ಮೊದಲಾದ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇಂತಹವರ ಯುಪಿಐ ಐಡಿ ಬಂದ್! ಫೋನ್ ಪೇ, ಗೂಗಲ್ ಪೇ ಯಾವುದೂ ವರ್ಕ್ ಆಗೋಲ್ಲ

ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಹತೆಗಳು! (Eligibilities)

Education scholarshipದೇಶದ ಯಾವುದೇ ರಾಜ್ಯದ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು

ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಎಲ್ಲಿ ಯಾವುದೇ ವರ್ಷದ ಕೋರ್ಸಿನಲ್ಲಿ ಓದುತ್ತಿರಬೇಕು (ಮೊದಲ ವರ್ಷವಾಗಿದ್ದರು ಸರಿ ಕೊನೆಯ ಸೆಮಿಸ್ಟರ್ ಆಗಿದ್ದರು ಸರಿ ಅರ್ಜಿ ಸಲ್ಲಿಸಬಹುದು)

ಸೈನ್ಸ್ ವಿಭಾಗದಲ್ಲಿ ದ್ವಿತೀಯ ಪಿಯುಸಿ 60% ನಷ್ಟು ಅಂಕ ಪಡೆದು ತೇರ್ಗಡೆ ಹೊಂದಿರಬೇಕು.

ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು

ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ಮೀರಿದವರು ಅರ್ಜಿ ಸಲ್ಲಿಸುವಂತಿಲ್ಲ.

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ನಿಯಮ! ಪಾಲಿಸದಿದ್ದರೆ ಸಬ್ಸಿಡಿ ಬಂದ್

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು (documents)

ವಿದ್ಯಾರ್ಥಿಯ ಆಧಾರ್ ಕಾರ್ಡ್ (Aadhaar card)

ಮೊಬೈಲ್ ಸಂಖ್ಯೆ

ವಿದ್ಯಾರ್ಥಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಸೆಕೆಂಡ್ ಪಿಯುಸಿ ಮಾರ್ಕ್ಸ್ ಕಾರ್ಡ್

ಬಿಡಿಸ್ ಕೋರ್ಸ್ಗೆ ಪ್ರವೇಶ ಪಡೆದಿರುವುದರ ದಾಖಲೆ/ಫ್ರೀ ರಿಸೀಪ್ಟ್

ಬ್ಯಾಂಕ್ ಪಾಸ್ ಬುಕ್ ಪ್ರತಿ

ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ

ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ ? (How to apply for scholarship)

https://www.buddy4study.com/page/colgate-keep-india-smiling-scholarship-program ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗ ವೆಬ್ ಪೇಜ್ ನಲ್ಲಿ ಸ್ಕ್ರೋಲ್ (scroll down) ಮಾಡಿದ್ರೆ ಅಪ್ಲೈ ನೌ (apply now) ಎನ್ನುವ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಷನ್ ಆದ ನಂತರ ಅರ್ಜಿ ಹಾಕಲು ಅವಕಾಶವಿರುತ್ತದೆ.

ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟ ವ್ಯಕ್ತಿ ಮೃತಪಟ್ಟರೆ ಆ ಹಣ ಯಾರಿಗೆ ಸೇರಬೇಕು?

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ! (Last date for apply)

ಕೋಲ್ಗೇಟ್ ನೀಡುತ್ತಿರುವ ವಿದ್ಯಾರ್ಥಿವೇತನದ ಮೊತ್ತ 75,000 ಹಾಗೂ ಅರ್ಜಿ ಸಲ್ಲಿಸಲು ಜನವರಿ 31, 2024ರ ವರೆಗೆ ಅವಕಾಶವಿದೆ.

Such students will get 75,000 scholarship, offered by Colgate

Related Stories