ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿಗಲಿದೆ 36,000 ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ
Education Scholarship : ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ವಿದ್ಯಾರ್ಥಿಗಳಿಗೆ ಪಿಎಂ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ಸಿಗುತ್ತೆ 36,000
Education Scholarship : ಪ್ರಸ್ತುತ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (pm Narendra Modi ji) ನೇತೃತ್ವದ ಎನ್ಡಿಎ ಸರ್ಕಾರವು ರೈತರು, ಉದ್ಯಮಿಗಳು, ವ್ಯಾಪಾರಿಗಳು ಹೀಗೆ ಎಲ್ಲರ ಕಲ್ಯಾಣಕ್ಕಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ.
ಕೇಂದ್ರ ಸರ್ಕಾರವು (central government) ಶಿಕ್ಷಣಕ್ಕೆ ಪ್ರಥಮ ಆದ್ಯತೆ (importance to education) ನೀಡಿದ್ದು, ಹೊಸ ವರ್ಷದಿಂದ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ (student scholarship) ನೀಡಲು ಮುಂದಾಗಿದೆ.
ಹಾಗಾದರೆ ಈ ವಿದ್ಯಾರ್ಥಿ ವೇತನ ಯಾರಿಗೆ ಸಿಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಏನೇನು ದಾಖಲಾತಿಗಳು ಬೇಕು ಎನ್ನುವುದನ್ನು ಈಗ ನೋಡೋಣ.
18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನಿಯಮದಲ್ಲಿ ಭಾರೀ ಬದಲಾವಣೆ!
ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನದಲ್ಲಿ ಸಿಗುತ್ತದೆ 36,000 ರೂ.!
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ (2nd PUC) ಯಲ್ಲಿ ಶೇ.6೦ಕ್ಕಿಂತ ಅಧಿಕ ಅಂಕ ಪಡೆದವರು ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆಯುತ್ತಾರೆ. ಎಂಬಿಬಿಎಸ್, ಬಿಡಿಎಸ್, ಬಿಟೆಕ್ ವಿದ್ಯಾಭ್ಯಾಸ ಮಾಡುವವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರತಿ ವರ್ಷ 36,000 ರೂ. ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಜನವರಿ 1 ರಿಂದ ಅರ್ಜಿ ಸಲ್ಲಿಕಾ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜನೆವರಿ 5 ರಂದು ಮುಕ್ತಾಯಗೊಳ್ಳಲಿದೆ. ಈ ನಿಗದಿತ ಸಮಯದಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆಯ ಅಧಿಕೃತ ವೆಬ್ಸೈಟ್ಗೆ (official website) https://www.ksb.gov.in/ ಭೇಟಿ ನೀಡಬೇಕು. ಅಲ್ಲಿ ನಿಮಗೆ ಅರ್ಜಿ ಫಾರಂ ಕಾಣುತ್ತದೆ. ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
ಈ ಪೋಸ್ಟ್ ಆಫೀಸ್ ಹೂಡಿಕೆಯಲ್ಲಿ ಸಿಗುತ್ತೆ ಪ್ರತಿ ತಿಂಗಳು 9250 ರೂಪಾಯಿ; ಇಂದೇ ಆರಂಭಿಸಿ
ನಂತರ ಅಲ್ಲಿ ಕೇಳಲಾದ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ (upload your documents) ಮಾಡಬೇಕು. ನಿಮ್ಮ ಅರ್ಜಿ ಸರಿ ಇದ್ದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಿ ಮಾಹಿತಿ ಪಡೆದು ನಿಮಗೆ ಸೌಲಭ್ಯ ನೀಡುತ್ತಾರೆ.
ಬೇಕಾಗುವ ದಾಖಲೆಗಳು (needed documents)
ಆಧಾರ್ ಕಾರ್ಡ್, ಇತ್ತಿಚಿನ ಭಾವಚಿತ್ರ, ವಿಳಾಸ ದೃಢೀಕರಣ ದಾಖಲೆಗಳು, ಬ್ಯಾಂಕ್ ಪಾಸ್ಬುಕ್, ಪಿಯುಸಿ ಅಂಕಪಟ್ಟಿ, ಮೊಬೈಲ್ ನಂಬರ್ ನೀಡಬೇಕಾಗುತ್ತದೆ.
ಇಷ್ಟು ದಿನಗಳ ಕಾಲ ಉನ್ನತ ವಿದ್ಯಾಭ್ಯಾಸ ಬಡವರ ಪಾಲಿಗೆ ಗಗನ ಕುಸುಮವಾಗಿತ್ತು. ಎಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಕಾಲೇಜಿನ ಫೀಸ್ ತುಂಬಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು.
37 ವರ್ಷಗಳ ಹಿಂದೆ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು ಗೊತ್ತಾ? ಇಲ್ಲಿದೆ ವೈರಲ್ ಆದ ಹಳೆಯ ಬಿಲ್
ಆದರೆ ಇನ್ಮುಂದೆ ಆ ರೀತಿ ಮಾಡುವ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರವು ಬಡವರು ಸಹ ಉನ್ನತ ಶಿಕ್ಷಣ (higher education for poor people) ಪಡೆಯಬೇಕು. ಅವರೂ ಸಹ ಜೀವನದಲ್ಲಿ ಅಭಿವೃದ್ಧಿ ಹೊಂದಿ ಸಮಾಜದಲ್ಲಿ ಒಂದು ಉತ್ತಮ ಹೆಸರು ಗಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆ ಜಾರಿಗೆ ತಂದಿದೆ.
ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆ ಲಾಭ ಪಡೆದುಕೊಂಡು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಬಹುದಾಗಿದೆ.
ಸ್ವಂತ ಮನೆ ಕಟ್ಟಿಕೊಳ್ಳಲು ಮಹಿಳೆಯರಿಗೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಹೋಂ ಲೋನ್
Such students will get 36,000 Education scholarship from the government