ಇಂತಹ ಮಹಿಳೆಯರಿಗೆ ಸಿಗಲಿದೆ ₹11,000 ರೂಪಾಯಿ, ಶೇಕಡ 90% ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತಿಲ್ಲ!
ಪಿಎಮ್ ಮಾತೃತ್ವ ವಂದನಾ ಯೋಜನೆ (PMMVY) ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ಆಗಿದ್ದು, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ.
ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಹಾಯ ಆಗಬೇಕು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಇರಬೇಕು ಎಂದು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಗರ್ಭಿಣಿ ಮಹಿಳೆಯರಿಗೆ ಸಹಾಯ ಮಾಡುವುದಕ್ಕಾಗಿ ಕೂಡ ಕೇಂದ್ರ ಸರ್ಕಾರ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಒಂದು ಯೋಜನೆಯ ಮೂಲಕ ಗರ್ಭಿಣಿ ಮಹಿಳೆಯರು ಅವರ ಆರೋಗ್ಯ ಮತ್ತು ಮಗುವಿನ ಆರೋವ್ಯವನ್ನು ಚೆನ್ನಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತದೆ.
ಪಿಎಮ್ ಮಾತೃತ್ವ ವಂದನಾ ಯೋಜನೆ (PMMVY) ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ಆಗಿದ್ದು, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ.
ಈ ಒಂದು ಯೋಜನೆಯ ಅನುಸಾರ ಗರ್ಭಿಣಿಯರು ಅವರ ಆರೋಗ್ಯವನ್ನು ಸುಧಾರಿಸಿಕೊಂಡು, ಮಗುವಿನ ಆಗಬಹುದಾದ ರಕ್ತಹೀನತೆ, ಪೌಷ್ಟಿಕ ಆಹಾರದ ಕೊರತೆ ಇದ್ಯಾವುದು ಆಗದ ಹಾಗೆ ನೋಡಿಕೊಳ್ಳಬಹುದು. ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ ಮಗುವಿಗೆ ಬರುವ ಆರೋಗ್ಯ ಸಮಸ್ಯೆಯನ್ನು ತಡೆಗಟ್ಟಬಹುದು.
ಕೇವಲ 5 ನಿಮಿಷದಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿರೋ ಫೋನ್ ನಂಬರ್ ಚೇಂಜ್ ಮಾಡಿ! ಸುಲಭ ವಿಧಾನ
ಬಡತನದಲ್ಲಿ ಇರುವ ಮಹಿಳೆಯರು ಮಗುವಿನ ಆರೋಗ್ಯಕ್ಕೆ ಅಥವಾ ಗರ್ಭಿಣಿಯಾದ ತಮ್ಮ ಆರೋಗ್ಯಕ್ಕೆ ಹೆಚ್ಚು ಹಣ ಖರ್ಚು ಮಾಡಲು ಆಗುವುದಿಲ್ಲ, ಅಂಥವರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ಸಹಾಯ ಆಗಲಿದೆ.
ಮಹಿಳೆ ಮೊದಲನೇ ಸಾರಿ ಮತ್ತು ಎರಡನೇ ಸಾರಿ ಗರ್ಭಿಣಿ ಆದಾಗ ಪಿಎಮ್ ಮಾತೃತ್ವ ವಂದನಾ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದರಲ್ಲಿ ಒಟ್ಟು 11,000 ರೂಪಾಯಿ ಹಣವನ್ನು ಕೂಡ ಪಡೆದುಕೊಳ್ಳಬಹುದು. .
ಮಹಿಳೆ ಮೊದಲ ಮಗುವಿನ ಗರ್ಭಿಣಿ ಆದಾಗ ಮೊದಲು ₹1000 ಕೊಡಲಾಗುತ್ತದೆ, 6 ತಿಂಗಳ ನಂತರ ₹2000 ಕೊಡಲಾಗುತ್ತದೆ, ಮಗು ಹುಟ್ಟಿದ ನಂತರ ₹2000 ಕೊಡಲಾಗುತ್ತದೆ. ಈ 5000 ರೂಪಾಯಿಯ ಮೊತ್ತವನ್ನು ಡಿಬಿಟಿ ಮೂಲಕ ಗರ್ಭಿಣಿ ಮಹಿಳೆಯ ಬ್ಯಾಂಕ್ ಖಾತೆಗೆ (Bank Account) ವರ್ಗಾವಣೆ ಮಾಡಲಾಗುತ್ತದೆ.
ಎರಡನೇ ಮಗುವಿಗೆ ಗರ್ಭಿಣಿ ಆದಾಯ ₹6000 ಸಿಗುತ್ತದೆ. ಹೀಗೆ ಒಟ್ಟಾರೆಯಾಗಿ ಕೇಂದ್ರ ಸರ್ಕಾರದ ಕಡೆಯಿಂದ ₹11,000 ರೂಪಾಯಿ ಸಹಾಯ ಗರ್ಭಿಣಿ ಮಹಿಳೆಯರಿಗೆ ಸಿಗುತ್ತದೆ.
ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಬಂಪರ್ ಕೊಡುಗೆ! ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಭಾರೀ ಬಡ್ಡಿ
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:
*ಫಿಲ್ ಮಾಡಿರುವ ಅಪ್ಲಿಕೇಶನ್ ಫಾರ್ಮ್
*ತಾಯಿ ಮತ್ತು ಮಗುವಿಗೆ ವ್ಯಾಕ್ಸಿನೇಷನ್ ಹಾಕಿಸಿರುವ ಕಾಪಿ
*ತಾಯಿಯ ಆಧಾರ್ ಕಾರ್ಡ್
*ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ರೇಷನ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಇಶ್ರಮ್ ಕಾರ್ಡ್
*ನರೇಗಾ ಕಾರ್ಡ್
*ಆಯುಶ್ಮಾನ್ ಕಾರ್ಡ್
ಈ ಬ್ಯಾಂಕ್ ಗಳಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಅತಿಹೆಚ್ಚು ಬಡ್ಡಿ! ಇದು ಹಣ ಡಬಲ್ ಆಗೋ ಚಾನ್ಸ್!
ಈ ಎಲ್ಲಾ ದಾಖಲೆಗಳ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆದು, ಸರ್ಕಾರದಿಂದ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
Such women will get 11,000 rupees, 90 Percent people do not know about this scheme