ಇಂತಹ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ! ಕೇಂದ್ರದ ಬಂಪರ್ ಯೋಜನೆ

Loan Scheme : ಕೇಂದ್ರ ಮಹಿಳಾ ಅಭಿವೃದ್ಧಿ ನಿಗಮದಿಂದ ಈ ಒಂದು ಹೊಸ ಯೋಜನೆ ಬಿಡುಗಡೆ ಆಗಿದ್ದು ವಿಶೇಷವಾಗಿ ಮಹಿಳೆಯರ ಸಬಲೀಕರಣವನ್ನು ಪ್ರೋತ್ಸಾಹಿಸುವ ಸಲುವಾಗಿ ಜಾರಿಗೆ ತರಲಾಗಿದೆ.

ದೇಶದಲ್ಲಿ ವಾಸಿಸುವ ಬಡ ಮಹಿಳೆಯರು ಯಾವುದೇ ಗ್ಯಾರಂಟಿಯನ್ನು ಕೊಡದೆ ಇದ್ದರೂ ಕೂಡ ಬಡ್ಡಿ ರಹಿತ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ (Loan) ಸೌಲಭ್ಯ ನೀಡಬಹುದಾದ ಯೋಜನೆ ಆಗಿದ್ದು ಮಹಿಳೆಯರು ಸುಲಭವಾಗಿ ತಮ್ಮದೇ ಆಗಿರುವ ಸ್ವಂತ ಉದ್ಯಮ (Own Business) ಆರಂಭಿಸಲು ಸಹಕಾರಿಯಾಗಿದೆ.

ಗ್ಯಾಸ್ ಸಿಲಿಂಡರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

ಪ್ರಧಾನ ಮಂತ್ರಿ ಉದ್ಯೋಗಿನಿ ಯೋಜನೆ?

ವಿಶೇಷವಾಗಿ ಮಹಿಳೆಯರಿಗೆ ಬಿಡುಗಡೆ ಮಾಡಲಾಗಿರುವ ಯೋಜನೆ ಇದಾಗಿದೆ. ಉದ್ಯೋಗಿನಿ ಯೋಜನೆಯ ಅರ್ಜಿ ಸಲ್ಲಿಸುವವರ ಯಾವುದೇ ಬ್ಯಾಗ್ರೌಂಡ್ ಕೇಳುವುದಿಲ್ಲ. ಯಾವುದೇ ರೀತಿಯ ಅಡಮಾನವು ಇಡಬೇಕಾಗಿಲ್ಲ. ಆದ್ರೂ ಬಡ್ಡಿ ರಹಿತ ಮೂರು ಲಕ್ಷ ಕಳ ವರೆಗೆ ಸಾಲ ಪಡೆಯಬಹುದು.

ಯಾರಿಗೆ ಸಿಗುತ್ತೆ ಸಾಲ?

* ಭಾರತೀಯ ಪ್ರಜೆಯಾಗಿರಬೇಕು ಭಾರತೀಯ ನಿವಾಸಿ ಆಗಿರಬೇಕು
* 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಸಾಲ ಪಡೆಯಬಹುದು
* ಕುಟುಂಬದ ಆದಾಯ 1.5 ಲಕ್ಷ ವಾರ್ಷಿಕ ವರಮಾನ ಆಗಿರಬೇಕು.
* ಒಂಟಿ ಮಹಿಳೆಯರು ಅರ್ಜಿ ಸಲ್ಲಿಸುವುದಕ್ಕೆ ಆದಾಯದ ಮಿತಿ ಇರುವುದಿಲ್ಲ.
* ಈಗಾಗಲೇ ಮಹಿಳೆಯ ಹೆಸರಿನಲ್ಲಿ ಯಾವುದೇ ಸಾಲ ತೆಗೆದುಕೊಂಡಿರಬಾರದು

ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು !

Loan schemeಆಧಾರ್ ಕಾರ್ಡ್
ವ್ಯಾಪಾರ ಮಾಡುವ ಬಗ್ಗೆ ಮಾಹಿತಿ
ವಿಳಾಸದ ಪುರಾವೆ
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರ
ಪಾಸ್ ಪೋರ್ಟ್ ಅಳತೆಯ ಫೋಟೋ

ಉದ್ಯೋಗಿನಿ ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಹತ್ತಿರದ ಬ್ಯಾಂಕ್ (Bank) ಶಾಖೆಗೆ ಹೋಗಿ ಉದ್ಯೋಗಿನಿ ಅಡಿಯಲ್ಲಿ ಸಾಲ ಸೌಲಭ್ಯ ಬೇಕು ಎಂದು ಹೇಳಿ. ಅಲ್ಲಿ ಕೊಡುವ ಅರ್ಜಿ ಫಾರಂ ಭರ್ತಿ ಮಾಡಿ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಸ್ಥಾನ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಬಹುದು..

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ನೀವು ಯಾವ ಬ್ಯಾಂಕ್ ನಲ್ಲಿ ಸಾಲ (Bank Loan) ಮಾಡಲು ಬಯಸುತ್ತಿರೋ ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಿ.

ದಿನಕ್ಕೆ 20 ಲೀಟರ್ ಹಾಲು ಕೊಡೋ ಈ ತಳಿ ಹಸು ಸಾಕಿದ್ರೆ ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್

Such women will get 3 lakh rupees by this bumper scheme

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories