ದಿನಕ್ಕೆ 20 ಲೀಟರ್ ಹಾಲು ಕೊಡೋ ಈ ತಳಿ ಹಸು ಸಾಕಿದ್ರೆ ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್
ದಿನಕ್ಕೆ 20 ಲೀಟರ್ ನೀಡಬಲ್ಲ ಜೆರ್ಸಿ ಆಕಳು ಸಾಕಾಣಿಕೆ ಮಾಡಿದರೆ 2 ಲಕ್ಷ ಆದಾಯ ಗ್ಯಾರಂಟಿ!
ಸಾಕಷ್ಟು ರೈತರು (farmers) ತಮ್ಮ ಕೃಷಿ ಚಟುವಟಿಕೆಗಳ ಜೊತೆಗೆ ಪಶುಸಂಗೋಪನೆಯನ್ನು ಕೂಡ ಮಾಡುತ್ತಾರೆ, ಅದರಲ್ಲೂ ಹೈನುಗಾರಿಕೆ (dairy farming) ಎನ್ನುವುದು ದೇಶದಾದ್ಯಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಒಂದು ಉದ್ಯಮ ಎಂದು ಹೇಳಬಹುದು.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯಿಂದ ಹೆಚ್ಚು ಆದಾಯ ಗಳಿಸಿಕೊಳ್ಳಲು ಸಾಧ್ಯವಿದೆ, ಇದರಿಂದಾಗಿ ಯುವಕರು ಕೂಡ ಹೈನುಗಾರಿಕೆ ಬಗ್ಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲ ಸರ್ಕಾರವೂ ಕೂಡ ಹೈನುಗಾರಿಕೆ ಮಾಡುವ ರೈತರಿಗೆ ಸಬ್ಸಿಡಿ (subsidy loan) ಸಾಲವನ್ನು ಕೂಡ ಒದಗಿಸುತ್ತದೆ.
ಗ್ಯಾಸ್ ಸಿಲಿಂಡರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ
ನೀವು ಕೂಡ ಹೈನುಗಾರಿಕೆ ಮಾಡುತ್ತಿದ್ದರೆ ಅಥವಾ ಹೊಸದಾಗಿ ಹೈನುಗಾರಿಕೆ ಆರಂಭಿಸಲು ಬಯಸಿದರೆ ಯಾವ ರೀತಿಯ ಹಸುವನ್ನು ಸಾಕಿದರೆ ಹೆಚ್ಚು ಆದಾಯ ಪಡೆಯಬಹುದು ಎಂಬುದನ್ನ ಅರ್ಥಮಾಡಿಕೊಳ್ಳಬೇಕು.
ಹಸುಗಳಲ್ಲಿ ದೇಸಿ ಹಸು ಮತ್ತು ಜರ್ಸಿ ಹಸು (Jarsi cow) ಎಂದು ಎರಡು ಪ್ರಕಾರಗಳು ಇವೆ. ನೀವು ಇವೆರಡರ ನಡುವೆ ವ್ಯತ್ಯಾಸವನ್ನು ತಿಳಿದುಕೊಂಡು ಯಾವುದು ಹೆಚ್ಚು ಉತ್ತಮ ಲಾಭವನ್ನು ಕೊಡಬಹುದು ಎಂದು ಅರ್ಥ ಮಾಡಿಕೊಂಡರೆ ಹೈನುಗಾರಿಕೆ ಮಾಡುವುದು ಸುಲಭವಾಗುತ್ತದೆ.
ದೇಸಿ ಹಸು ಹಾಗೂ ಜರ್ಸಿ ಹಸು ನಡುವಿನ ವ್ಯತ್ಯಾಸ!
* ದೇಸಿ ಹಸು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ದೊಡ್ಡ ಓಡುಗಳನ್ನು ಹೊಂದಿದ್ದು ಬೆನ್ನಿನ ಭಾಗ ಉಬ್ಬಿನಿಂದ ಕೂಡಿರುತ್ತದೆ.
* ದೇಸಿ ಹಸು ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ಹಾಲನ್ನು ಮಾತ್ರ ಕೊಡಬಲ್ಲದು.
* ದೇಸಿ ಹಸು ಮೊದಲ ಕರುವನ್ನು 30 ರಿಂದ 36 ತಿಂಗಳುಗಳ ಒಳಗೆ ಹಾಕಬಹುದು.
* ದೇಸಿ ಹಸು ಸಾಮಾನ್ಯವಾಗಿ ಎರಡು ಬಣ್ಣಗಳಿಂದ ಕೂಡಿರುತ್ತದೆ ಅಥವಾ ದೇಸಿ ಹಸುವಿನಲ್ಲಿ ಕಪ್ಪು ಬೆಳಿ ಕಂಡು ಬಣ್ಣ ಹೀಗೆ ಬೇರೆ ಬೇರೆ ರೀತಿಯ ಬಣ್ಣಗಳನ್ನು ಕಾಣಬಹುದು.
ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ
ಜರ್ಸಿ ಹಸು ಹೇಗಿರುತ್ತದೆ ಎಂಬುದನ್ನು ನೋಡೋಣ!
* ಸಾಮಾನ್ಯವಾಗಿ ಜರ್ಸಿ ಹಸುಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ.
* ಜರ್ಸಿ ಎನ್ನುವ ಒಂದು ದ್ವೀಪದಿಂದ ಬಂದಿರುವ ಹೆಸರಾಗಿದ್ದು, ಈ ಹಸುವನ್ನು ಜರ್ಸಿ ಎಂದು ಗುರುತಿಸಲಾಗುತ್ತದೆ.
* ಜರ್ಸಿ ಹಸುವಿನ ಬೆನ್ನಿನ ಭಾಗ ಸಮತಟ್ಟಾಗಿರುತ್ತದೆ.
* ಈ ಹಸು ಸಾಮಾನ್ಯವಾಗಿ ಕಂದು ಬಣ್ಣದಲ್ಲಿ ಅಥವಾ ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ.
* ಜರ್ಸಿ ಹಸು ದಿನಕ್ಕೆ 15 ರಿಂದ 20 ಲೀಟರ್ ಹಾಲನ್ನು ಕೊಡುತ್ತದೆ
* ಈ ಹಸು ಮೊದಲ ಕರುವನ್ನು 12 ರಿಂದ 24 ತಿಂಗಳುಗಳ ಒಳಗೆ ಹಾಕುತ್ತದೆ.
ಈ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ರೂ ಸರ್ಕಾರವೇ ಕೊಡಲಿದೆ 10,000 ರೂಪಾಯಿ!
ನೀವು ಹೆಚ್ಚು ಆದಾಯ (income) ಪಡೆದುಕೊಳ್ಳುವ ಸಲುವಾಗಿ ಹೈನುಗಾರಿಕೆ ಆರಂಭಿಸುವುದಾದರೆ ಜರ್ಸಿ ಹಸುವನ್ನು ಆಯ್ದುಕೊಳ್ಳಬಹುದು. ಯಾಕೆಂದರೆ ಜರ್ಸಿ ಹಸು ಪ್ರತಿದಿನ 15 ರಿಂದ 20 ಲೀಟರ್ ಹಾಲು ಒದಗಿಸುತ್ತದೆ. ಜರ್ಸಿ ಹಸುವಿನ ಹಾಲಿನಲ್ಲಿ ಫ್ಯಾಟ್ ಅಂಶ ಜಾಸ್ತಿ ಇದ್ದು ಇದರ ಹಾಲು ಬೆಣ್ಣೆ, ತುಪ್ಪ ಮಾಡಲು ಕೂಡ ಹೆಚ್ಚು ಯೋಗ್ಯವಾಗಿರುತ್ತದೆ ಎನ್ನಬಹುದು.
ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಸ್ಥಳೀಯ ಜರ್ಸಿ ಹಸುಗಳನ್ನು ಸಾಕಲಾಗುತ್ತದೆ. ಜರ್ಸಿ ಹಸುಗಳನ್ನು ಖರೀದಿ ಮಾಡುವುದಿದ್ದರೆ ಸುಮಾರು 50ರಿಂದ ಒಂದು ಲಕ್ಷ ರೂಪಾಯಿಗಳ ವರೆಗೂ ನೀವು ವೆಚ್ಚ ಮಾಡಬೇಕು.
ಜರ್ಸಿ ಹಸುಗಳ ಪಾಲನೆ!
ಜರ್ಸಿ, ಹಸು ದೇಸಿ ಹಸು ಅಲ್ಲದೆ ಇದ್ದರೂ ಕೂಡ ಎಲ್ಲಾ ಪ್ರದೇಶದಲ್ಲಿ ಎಲ್ಲಾ ವಾತಾವರಣಕ್ಕೆ ಹೊಂದುಕೊಳ್ಳುವಂತಹ ಗುಣ ಹೊಂದಿದೆ. ಈ ಹಸುಗಳಿಗೆ ರೋಗ ರುಜಿನಗಳು ಬರುವುದು ಕಡಿಮೆ. ಜೊತೆಗೆ ನೀವು ಯಾವುದೇ ರೀತಿಯ ಆಹಾರವನ್ನು ಕೂಡ ಈ ಹಸುವಿಗೆ ತಿನ್ನಿಸಬಹುದು. ಉದಾಹರಣೆಗೆ ಹಿಂಡಿ ಹಸಿ ಹುಲ್ಲುಗಳು ಮೊದಲಾದ ಆಹಾರ ಪದಾರ್ಥಗಳನ್ನು ಕೊಡಬಹುದು.
ಜರ್ಸಿ ಹಸುವನ್ನು ಸಾಕುವಾಗ ಮೊದಲು ನೀವು ಸ್ವಚ್ಛತೆಯನ್ನ ಕಾಪಾಡಬೇಕು. ಈ ಹಸುಗಳು ಸ್ವಚ್ಛವಾಗಿರುವ ಪ್ರದೇಶದಲ್ಲಿ ವಾಸಿಸಲು ಇಷ್ಟಪಡುತ್ತವೆ. ಇನ್ನು ಮನುಷ್ಯರನ್ನ ಹೇಗೆ ಮುತುವರ್ಜಿಯಿಂದ ನೋಡಿಕೊಳ್ಳುತ್ತೇವೆಯೋ, ಅದೇ ರೀತಿ ಹಸುಗಳನ್ನು ಕೂಡ ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು ಉದಾಹರಣೆಗೆ ಸೆಕೆಗಾಲದಲ್ಲಿ ಫ್ಯಾನ್ ಹಾಕುವುದು, ನೀರಿನಿಂದ ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ ಮಾಡಿಸುವುದು ಈ ರೀತಿ ಮುತುವರ್ಜಿಯ ಕ್ರಮಗಳನ್ನು ಕೈಗೊಂಡರೆ ಈ ಹಸುಗಳು ಹೆಚ್ಚು ವರ್ಷ ಬದುಕುತ್ತವೆ ಜೊತೆಗೆ 20 ಲೀಟರ್ ವರೆಗೆ ಸುಲಭವಾಗಿ ಹಾಲನ್ನು ಕೊಡುತ್ತವೆ.
ಕೇವಲ ಆಧಾರ್ ಕಾರ್ಡ್ ಇದ್ರೆ ಸಿಗುತ್ತೆ ಬಡ್ಡಿಯಿಲ್ಲದೆ 50 ಸಾವಿರ ಸಾಲ! ಹೊಸ ಯೋಜನೆ
ಮಾರುಕಟ್ಟೆಯಲ್ಲಿ ಜರ್ಸಿ ಹಸು ಖರೀದಿ ಮಾಡುವಾಗ ಇರಲಿ ಎಚ್ಚರ!
ಸಾಮಾನ್ಯವಾಗಿ ಹಸು ವ್ಯಾಪಾರದಲ್ಲಿ ಮೋಸ ಆಗುವುದನ್ನು ನೀವು ಕಾಣಬಹುದು ಕೆಲವೊಮ್ಮೆ ದೇಸಿ ಹಸುವನ್ನು ಜರ್ಸಿ ಹಸು ಎಂದು ಅತಿ ದುಬಾರಿ ಬೆಲೆಗೆ ಮಾರಾಟ ಮಾಡುವವರು ಇದ್ದಾರೆ. ಹಾಗಾಗಿ ಜರ್ಸಿ ಹಸುವಿನ ಗುಣಲಕ್ಷಣಗಳನ್ನು ತಿಳಿದುಕೊಂಡು ಅವುಗಳನ್ನು ಖರೀದಿ ಮಾಡಿ.
ಇನ್ನು ನೀವು ದೇಸಿ ಹಸು ಮತ್ತು ಜರ್ಸಿ ಹಸು ಎರಡನ್ನು ಕೂಡ ಒಟ್ಟಿಗೆ ಸಾಕಾಣಿಕೆ ಮಾಡಬಹುದು. ಒಟ್ಟಿನಲ್ಲಿ ನೀವು ಜರ್ಸಿ ಹಸು ಸಾಕಾಣಿಕೆ ಮಾಡಿದರೆ ದಿನಕ್ಕೆ 15 ರಿಂದ 20 ಲೀಟರ್ ಹಾಲು ಮಾರಾಟ ಮಾಡಿ ತಿಂಗಳಿಗೆ ಎರಡು ಲಕ್ಷ ರೂಪಾಯಿಗಳ ವರೆಗೂ ಕೂಡ ಆದಾಯ ಗಳಿಸಬಹುದು.
20 lakh income by this breed of cow is reared with 20 liters of milk per day