ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗಲಿದೆ ₹50,000 ರೂಪಾಯಿ; ಇಂದೇ ಅಪ್ಲೈ ಮಾಡಿ

Loan Scheme : ಅನ್ನಪೂರ್ಣ ಯೋಜನೆ ಆಧಾರದ ಮೇಲೆ ಅರ್ಹರಾಗಿರುವಂತಹ ಮಹಿಳೆಗೆ ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲವನ್ನು (Loan) ಪಡೆದುಕೊಳ್ಳುವಂತಹ ಅರ್ಹತೆ ಇರುತ್ತದೆ.

Loan Scheme : ಮಹಿಳೆಯರ ಅಭಿವೃದ್ಧಿಗಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಅವರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲವೊಂದು ಪ್ರಮುಖ ಯೋಜನೆಗಳು ಕೂಡ ಜಾರಿಯಲ್ಲಿವೆ.

ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವನ್ನು ನೀಡುವಂತಹ ಹಾಗೂ ಕೌಶಲ್ಯವನ್ನು ಹೊಂದಿರುವಂತಹ ಮಹಿಳೆಯರು ಅವಲಂಬಿಸಿರುವ ಅಂತಹ ಒಂದು ಯೋಜನೆ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ. ಹೌದು ನಾವು ಮಾತಾಡ್ತಿರೋದು ಅನ್ನಪೂರ್ಣ ಯೋಜನೆ ಬಗ್ಗೆ.

ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಸ್ವಂತ ಮನೆ ಕಟ್ಟೋರಿಗೆ ಸಿಗಲಿದೆ ಕಡಿಮೆ ಬಡ್ಡಿಗೆ ಹೋಂ ಲೋನ್

ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗಲಿದೆ ₹50,000 ರೂಪಾಯಿ; ಇಂದೇ ಅಪ್ಲೈ ಮಾಡಿ - Kannada News

ಅನ್ನಪೂರ್ಣ ಯೋಜನೆ (Annapurna scheme)

ಒಂದು ವೇಳೆ ಮಹಿಳೆಯರು ಚೆನ್ನಾಗಿ ಅಡುಗೆ ಮಾಡಲು ಬಲ್ಲವರಾಗಿದ್ದರೆ ತಮ್ಮದೇ ಆದಂತಹ ಒಂದು ಹೋಟೆಲ್ ಅನ್ನು (Hotel Business) ಪ್ರಾರಂಭಿಸಬೇಕು ಎನ್ನುವಂತಹ ಯೋಜನೆಯನ್ನು ಅವರು ಹಾಕಿಕೊಂಡಿದ್ದರೆ ಆ ಸಂದರ್ಭದಲ್ಲಿ ಅನ್ನಪೂರ್ಣ ಯೋಜನೆ ಆಧಾರದ ಮೇಲೆ ಅರ್ಹರಾಗಿರುವಂತಹ ಮಹಿಳೆಗೆ ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲವನ್ನು (Loan) ಪಡೆದುಕೊಳ್ಳುವಂತಹ ಅರ್ಹತೆ ಇರುತ್ತದೆ.

ಇದರ ಮೂಲಕ ಅಡುಗೆಗೆ ಬೇಕಾಗಿರುವಂತಹ ಸಲಕರಣೆಗಳು ಹಾಗೂ ಗ್ಯಾಸ್ ತೆರೆದಂತೆ ಇಂತಹ ಉಪಕರಣಗಳನ್ನು ಖರೀದಿ ಮಾಡಬಹುದಾಗಿದೆ.

ಅನ್ನಪೂರ್ಣ ಯೋಜನೆಯ ಮೂಲಕ ಹಣವನ್ನು ಪಡೆಯುವುದು ಹೇಗೆ ಇಲ್ಲಿದೆ ನೋಡಿ ಮಾಹಿತಿ.

ಅನ್ನಪೂರ್ಣ ಯೋಜನೆ ಅಡಿಯಲ್ಲಿ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ಅನ್ನು ಸಂಪರ್ಕ ಮಾಡಿದರೆ ಸಾಕು ನೀವು ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆ ಅಡಿಯಲ್ಲಿ 50,000ಗಳನ್ನು ಮಹಿಳೆಯರು ಸಾಲ (Loan) ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಪ್ರತಿ ತಿಂಗಳಿಗೆ 1388 ರೂಪಾಯಿಗಳನ್ನು ಕಟ್ಟಬೇಕಾಗಿರುತ್ತದೆ. ಇದರ ಬಡ್ಡಿದರ ಅನ್ನೋದು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗುತ್ತಿರುತ್ತದೆ ಅನ್ನೋದನ್ನ ಕೂಡ ನಾವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ಉಚಿತವಾಗಿ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್!

Loan schemeಈ ಅನ್ನಪೂರ್ಣ ಯೋಜನೆಯ ಮೂಲಕ ನೀವು ನಿಮ್ಮ ಕನಸಿನ ಹೋಟೆಲ್ ಅನ್ನು ನಿಮ್ಮ ಮನೆಯಿಂದಲೇ ಅಥವಾ ಕೆಲವೊಂದು ಚಿಕ್ಕ ಸ್ಥಳದಿಂದ ಪ್ರಾರಂಭಿಸಿ ಮುಂದಿನ ದಿನಗಳಲ್ಲಿ ದೊಡ್ಡ ಉದ್ಯಮವಾಗಿ ಬೆಳೆಸಿಕೊಳ್ಳಬಹುದು.

ಈಗಾಗಲೇ ವೇಗವಾಗಿ ಬೆಳೆಯುತ್ತಿರುವಂತಹ ನಗರಗಳಲ್ಲಿ Swiggy ಹಾಗೂ ಝೋಮ್ಯಾಟೋಗಳಲ್ಲಿ ನೀವು ನಿಮ್ಮ ಹೋಟೆಲ್ ಅನ್ನು ಲಿಸ್ಟ್ ಮಾಡಿದ್ರೆ ಹಾಗೂ ನೀವು ರುಚಿಕರವಾದ ಅಡುಗೆಯನ್ನು ಮಾಡಿದ್ರೆ ಅತ್ಯಂತ ಕಡಿಮೆ ಸಮಯದಲ್ಲಿ ನೀವು ಹೆಚ್ಚು ಜನಪ್ರಿಯತೆ ಪಡೆಯುವಂತಹ ಸಾಧ್ಯತೆ ಇದೆ.

ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? ಈ ರೀತಿ ಸುಲಭವಾಗಿ ಬದಲಾಯಿಸಿಕೊಳ್ಳಿ

ನಂತರ ಲಾಭ ದೊಡ್ಡದಾದ ಮೇಲೆ ಹೋಟೆಲ್ ಮಾಡುವಂತಹ ಸಾಧ್ಯತೆ ಕೂಡ ಇರಬಹುದಾಗಿದೆ. ಈ ಮೂಲಕ ಮಹಿಳೆಯರು ಕೇವಲ ತಮ್ಮ ಸ್ವಾವಲಂಬಿತನವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುವುದು ಮಾತ್ರವಲ್ಲದೆ ತಮ್ಮದೇ ಆದಂತಹ ಸ್ವಂತ ಉದ್ಯಮವನ್ನು (Own Business) ಸಣ್ಣ ಮಟ್ಟದಿಂದ ಪ್ರಾರಂಭಿಸಿ ಅದನ್ನು ದೊಡ್ಡ ಮಟ್ಟದ ಉದ್ಯಮವನ್ನಾಗಿ ವಿಸ್ತರಿಸಿಕೊಳ್ಳಬಹುದಾದ ಅವಕಾಶವನ್ನು ಕೂಡ ತಮ್ಮ ಕೈಯಲ್ಲಿ ಹೊಂದಿದ್ದಾರೆ.

Such Women will get 50,000 in this scheme, Apply today

Follow us On

FaceBook Google News

Such Women will get 50,000 in this scheme, Apply today