ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ಉಚಿತವಾಗಿ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್!
ಉಚಿತವಾಗಿ ಗ್ಯಾಸ್ ಹಾಗೂ ಸಿಲಿಂಡರ್ (Gas Cylinder) ಲಾಭವನ್ನು ಪಡೆದುಕೊಳ್ಳಲು ನೀವು ಬಿಪಿಎಲ್ ರೇಷನ್ ಕಾರ್ಡ್ ಅನ್ನು (BPL Ration Card) ಹೊಂದಿರಬೇಕಾಗಿರುತ್ತದೆ. ಹೌದು ಈ ಯೋಜನೆಯನ್ನು ಜಾರಿಗೆ ತಂದಿರೋದು ಕೂಡ ಪ್ರಧಾನಿ ನರೇಂದ್ರ ಮೋದಿರವರೆ. ನಾವ್ ಮಾತನಾಡುತ್ತಿರುವುದು ಪ್ರಧಾನ ಮಂತ್ರಿಗಳ 2016 ರಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಬಗ್ಗೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಮೂಲಕ ದೇಶದ ಬಡ ಮಹಿಳೆಯರಿಗೆ ವರ್ಷದಲ್ಲಿ ಮೂರು ಗ್ಯಾಸ್ ಸಿಲಿಂಡರ್ ಗಳು ಉಚಿತವಾಗಿ ಸಿಗುವ ಹಾಗೆ ಮಾಡಲಾಗಿದೆ. ಒಂದು ವೇಳೆ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇದ್ರೆ www.pmuy.gov.in ಸರ್ಕಾರಿ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಿದರೆ ಸಾಕು ಪ್ರಧಾನ ಮಂತ್ರಿಗಳ ಈ ಯೋಜನೆ ಅಡಿಯಲ್ಲಿ ಉಚಿತವಾಗಿ ವರ್ಷಕ್ಕೆ ಮೂರು ಸಿಲಿಂಡರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.
ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಸ್ವಂತ ಮನೆ ಕಟ್ಟೋರಿಗೆ ಸಿಗಲಿದೆ ಕಡಿಮೆ ಬಡ್ಡಿಗೆ ಹೋಂ ಲೋನ್
ಇದಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಹೊಂದಿರಬೇಕು ಹಾಗೂ ಆಧಾರ್ ಮತ್ತು ಬ್ಯಾಂಕ್ ಅಕೌಂಟ್ (Bank Account) ಲಿಂಕ್ ಆಗಿರಬೇಕು.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆ
ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಅಡಿಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹವರು, ಅಂದರೆ ಬಡ ಕುಟುಂಬದ ಮಹಿಳೆಯರು ಪ್ರತಿ ಸಂಪರ್ಕಕ್ಕೆ 1600 ರೂಪಾಯಿ ಹಾಗೂ ಗ್ಯಾಸ್ ಸ್ಟವ್ ಸಿಲಿಂಡರ್ ಅನ್ನು ಬಳಸಿಕೊಳ್ಳಲು ಬಡ್ಡಿ ರಹಿತ ಸಾಲವನ್ನು (Loan) ಕೂಡ ನೀಡಲಾಗುತ್ತದೆ.
ಈ ರೀತಿ ಒಂದು ಗ್ಯಾಸ್ ಸಂಪರ್ಕವನ್ನು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಬಡ ಕುಟುಂಬ ಪಡೆದುಕೊಳ್ಳುವುದಕ್ಕೆ ಈ ಯೋಜನೆಯ ಮೂಲಕ ಸರ್ಕಾರ ಸಹಾಯ ಮಾಡಲಿದೆ.
ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? ಈ ರೀತಿ ಸುಲಭವಾಗಿ ಬದಲಾಯಿಸಿಕೊಳ್ಳಿ
ಯಾರು ಈ ಯೋಜನೆಯನ್ನು ಪಡೆದುಕೊಳ್ಳಬಹುದು?
* 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆ ಈ ಯೋಜನೆಯನ್ನು ಪಡೆದುಕೊಳ್ಳಬಹುದು.
* ಎಲ್ ಪಿ ಜಿ ಸಂಪರ್ಕವನ್ನು ಹೊಂದಿರದ ಹಾಗೂ ಬಿಪಿಎಲ್ ಅಂದರೆ ಬಡವರ್ಗದ ಕುಟುಂಬದ ಮಹಿಳೆ ಆಗಿರಬೇಕು. ಇದರಲ್ಲಿ ಹಿಂದುಳಿದ ವರ್ಗ ಅಂದರೆ ಎಸ್ ಸಿ ಹಾಗೂ ಎಸ್ ಟಿ ಪಂಗಡಕ್ಕೆ ಸೇರಿರುವ ಮಹಿಳೆ ಆಗಿರಬೇಕು.
ಪ್ಯಾನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಯೋಜನೆ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು
* ಬಿಪಿಎಲ್ ಪ್ರಮಾಣ ಪತ್ರದ ಜೊತೆಗೆ ಅಡ್ರೆಸ್ ಪ್ರೂಫ್.
* ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಒಂದು ಪಾಸ್ಪೋರ್ಟ್ ಸೈಜ್ ಫೋಟೋ.
* ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್.
* ಜಾತಿ ಪ್ರಮಾಣ ಪತ್ರವನ್ನು ಕೂಡ ಈ ಸಂದರ್ಭದಲ್ಲಿ ಒದಗಿಸಬೇಕಾಗಿರುತ್ತದೆ.
ಉಚಿತ ಮನೆ ಭಾಗ್ಯ! ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ; ಇಲ್ಲಿದೆ ಮಾಹಿತಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
* www.pmuy.gov.in ನಲ್ಲಿ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಅದಕ್ಕೆ ಬೇಕಾಗಿರುವಂತಹ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಹತ್ತಿರದ ಎಲ್ಪಿಜಿ ಗ್ಯಾಸ್ ವಿತರಣೆ ಮಾಡುವಂತಹ ಕಚೇರಿಗೆ ನೀಡಿ.
* ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಅದು ಸರಿಯಾಗಿದೆಯೋ ಇಲ್ಲ ಎಂದು ಚೆಕ್ ಮಾಡಿದ ನಂತರ ನಿಮಗೆ ಸಂಬಂಧಪಟ್ಟಂತಹ ಗ್ಯಾಸ್ ಮಾರುಕಟ್ಟೆಯ ಸಿಲಿಂಡರ್ ಅನ್ನು ನೀಡಲಕ್ಕೆ ಪ್ರಾರಂಭ ಮಾಡಲಾಗುತ್ತದೆ.
Those who have BPL card will get free gas stove and gas cylinder