Business News

ಇಂತಹ ಮಹಿಳೆಯರಿಗೆ ಸರ್ಕಾರದಿಂದಲೇ ಸಿಗಲಿದೆ ಉಚಿತ ಹೊಲಿಗೆ ಯಂತ್ರ! ಇಂದೇ ಅರ್ಜಿ ಸಲ್ಲಿಸಿ

free sewing machine : ನಮ್ಮ ದೇಶದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಇರಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.

ಆ ಯೋಜನೆಗಳ ಸಹಾಯ ಪಡೆದು ಮಹಿಳೆಯರು ತಮ್ಮದೇ ಆದ ಸ್ವಂತ ಉದ್ಯಮ (Own Business) ಅಥವಾ ಸ್ವಂತ ಕೆಲಸ ಶುರು ಮಾಡಬಹುದು. ಇದೀಗ ಸರ್ಕಾರವು ಉಚಿತವಾಗಿ ಹೊಲಿಗೆ ಯಂತ್ರ ಕೊಡುವ ಯೋಜನೆಯನ್ನು ಶುರು ಮಾಡಿದ್ದು, ಅರ್ಹತೆ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯಬಹುದು…

If you have this document, you will also get a free sewing machine

6 ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಸರ್ಕಾರದ ಯೋಜನೆಗೆ ಅರ್ಜಿ ಹಾಕಿ

ಕೇಂದ್ರ ಸರ್ಕಾರದ ಯೋಜನೆ

ಕೇಂದ್ರ ಸರ್ಕಾರವು ಮಹಿಳೆಯರಿಗೆ ಅನುಕೂಲ ಆಗಲಿ ಎಂದು ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಮಹಿಳೆಯರಿಗೆ ಕೊಡುವುದಕ್ಕೆ ಮುಂದಾಗಿದೆ. ಇದು ವಿಶ್ವಕರ್ಮ ಯೋಜನೆಯ ಮೂಲಕ, ಹೌದು ನರೇಂದ್ರ ಮೋದಿ ಅವರು ಮೂರನೇ ಬಾರಿ ಪಿಎಮ್ ಆಯ್ಕೆಯಾದ ನಂತರ ಈ ಯೋಜನೆಯನ್ನು ಮತ್ತೆ ಮುಂದುವರೆಸಲಾಗುತ್ತಿದೆ. ವಿಶ್ವಕರ್ಮ ಯೋಜನೆಯ ಮೂಲಕ ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು, ಸ್ವಂತ ಕೆಲಸ ಮಾಡಲು ಸಾಲ ಸೌಲಭ್ಯ (Loan Facility) ನೀಡಲಾಗುತ್ತಿದೆ.

Free sewing machineವಿಶ್ವಕರ್ಮ ಯೋಜನೆ

ಈ ಪಿಎಮ್ ವಿಶ್ವಕರ್ಮ ಯೋಜನೆಯಲ್ಲಿ ಮಹಿಳೆಯರು ಅರ್ಜಿ ಸಲ್ಲಿಸಿದರೆ, ಹೊಲಿಗೆ ಯಂತ್ರ ಖರೀದಿ ಮಾಡುವುದಕ್ಕೆ ₹15 ಸಾವಿರದವರೆಗು ಸಾಲ ಸೌಲಭ್ಯ (Loan) ಕೊಡಲಾಗುತ್ತದೆ. ಜೊತೆಗೆ ನಿಮ್ಮ ಬ್ಯುಸಿನೆಸ್ ವಿಸ್ತರಣೆ ಮಾಡುತ್ತೀರಿ ಎಂದರೆ ಅದಕ್ಕಾಗಿ 3 ಲಕ್ಷದವರೆಗು ಕಡಿಮೆ ಬಡ್ಡಿಯಲ್ಲಿ ಸಾಲ (Business Loan) ಪಡೆಯಬಹುದು. ಹಾಗಿದ್ದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ…

ಕೇವಲ ₹800 ರೂಪಾಯಿ ಬಂಡವಾಳ ಹಾಕಿ ಈ ಬ್ಯುಸಿನೆಸ್ ಶುರು ಮಾಡಿ, ದಿನಕ್ಕೆ ₹1000 ಲಾಭ ಪಕ್ಕ!

ಅರ್ಜಿ ಸಲ್ಲಿಕೆಗೆ ಅರ್ಹತೆಗಳು

*ಅರ್ಜಿದಾರರ ವಯಸ್ಸು 18 ರಿಂದ 59 ವರ್ಷಗಳ ಒಳಗಿರಬೇಕು.
*ಒಂದು ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
*ಅರ್ಜಿದಾರರು ಈ ಮೊದಲು ರಾಜ್ಯ ಅಥವಾ ಕೇಂದ್ರ ಸರ್ಕಾರದ ವತಿಯಿಂದ ಸ್ವಉದ್ಯೋಗಕ್ಕೆ ಇರುವ ಇನ್ಯಾವುದೇ ಯೋಜನೆಯ ಸೌಲಭ್ಯ ಪಡೆಯುತ್ತಿರಬಾರದು
*ಅರ್ಜಿದಾರರ ಮನೆಯ ಯಾರು ಕೂಡ ಸರ್ಕಾರಿ ಕೆಲಸದಲ್ಲಿ ಇರಬಾರದು
*ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪಿಎಮ್ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು.

sewing machineಬೇಕಾಗುವ ದಾಖಲೆಗಳು

*ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ರೇಷನ್ ಕಾರ್ಡ್
*ಇನ್ಕಮ್ ಸರ್ಟಿಫಿಕೇಟ್
*ಕ್ಯಾಸ್ಟ್ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
ಈ ದಾಖಲೆ ನೀಡಿ, ಯೋಜನೆಗೆ ಅಪ್ಲೈ ಮಾಡಿ ಹೊಲಿಗೆಯಂತ್ರ ಖರೀದಿಗೆ 15 ಸಾವಿರವರೆಗು ಸಾಲ (Loan) ಪಡೆಯಬಹುದು.

ಬಿಪಿಎಲ್ ರೇಷನ್ ಕಾರ್ಡ್ ಇದ್ರೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್! ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಅರ್ಜಿದಾರರು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಮೊಬೈಲ್ ನಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೀವೇ ಅರ್ಜಿ ಸಲ್ಲಿಸಬಹುದು.

Such women will get a free sewing machine from the government

Our Whatsapp Channel is Live Now 👇

Whatsapp Channel

Related Stories