ಇನ್ಮುಂದೆ ಹೆಣ್ಣು ಮಕ್ಕಳ ಮದುವೆ ಅಪ್ಪ-ಅಮ್ಮನಿಗೆ ಹೊರೆ ಅಲ್ಲ, ಕೇಂದ್ರ ಸರ್ಕಾರವೇ ನೀಡುತ್ತೆ 27 ಲಕ್ಷ

ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.50 ಲಕ್ಷ ರೂಪಾಯಿಗಳವರೆಗೆ ಯೋಜನೆಯಲ್ಲಿ ಹೂಡಿಕೆ (investment) ಮಾಡಬಹುದಾಗಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ (nationalised bank) ಅಥವಾ ಪೋಸ್ಟ್ ಆಫೀಸ್ (post office) ನಲ್ಲಿಯೂ ನೀವು ಖಾತೆ ಆರಂಭಿಸಬಹುದು.

ಆಗೊಂದು ಕಾಲ ಇತ್ತು. ಹೆಣ್ಣು ಮಗು (girl child) ಜನಿಸಿದಳು ಅಂದರೆ ಎಲ್ಲರಿಗೂ ತಲೆನೋವು, ಹೆಣ್ಣು ಮಗು ಹುಟ್ಟಿತಲಪ್ಪಾ ಎಂದು ಜನ ಬೈದುಕೊಳ್ಳುವಂತಹ ಪರಿಸ್ಥಿತಿ ಇತ್ತು, ಇದಕ್ಕೆ ಮುಖ್ಯ ಕಾರಣ ಹೆಣ್ಣು ಮಕ್ಕಳ ಜವಾಬ್ದಾರಿ ಬಹಳ ದೊಡ್ಡ ವಿಚಾರ ಹಾಗೂ ಅವರ ವಿದ್ಯಾಭ್ಯಾಸದಿಂದ (Education) ಹಿಡಿದು ಮದುವೆಯ ಖರ್ಚನ್ನು ನಿಭಾಯಿಸುವುದು ಪಾಲಕರಿಗೆ ಹೆಣ್ಣು ಮಗು ಜನಿಸಿದರೆ ಮುಂದೆ ಸಮಸ್ಯೆ ಎದುರಿಸಬೇಕು ಎನ್ನುವ ಕಲ್ಪನೆ ಎಲ್ಲರಲ್ಲಿಯೂ ಇತ್ತು.

ಆದರೆ ಈಗ ಜಮಾನವೇ ಬದಲಾಗಿದೆ ಬಿಡಿ. ಹೆಣ್ಣು ಮಗು ಜನಿಸಿದರೆ ಮನೆಯಲ್ಲಿ ಮಹಾಲಕ್ಷ್ಮಿ ಜನಿಸಿದಳು ಎಂದೆ ಭಾವಿಸುವ ಕುಟುಂಬಗಳು ಇವೆ.

ಹೆಣ್ಣುಮಕ್ಕಳ ವಿದ್ಯಾಭ್ಯಾಸದಿಂದ ಮದುವೆಯ ವರೆಗೆ ಸಾಕಷ್ಟು ಹಣ ಕೊಡಬೇಕು ಅದರಲ್ಲೂ ಮದುವೆಯ ಸಮಯದಲ್ಲಿ ಹೆಚ್ಚಿನ ಹಣ ವಹಿಸಬೇಕು ಎನ್ನುವುದು ಪಾಲಕರಲ್ಲಿ ಇರುವ ಚಿಂತೆ ಆಗಿರುತ್ತದೆ. ಇನ್ನು ಮುಂದೆ ಹೆಣ್ಣು ಮಗು ಯಾವುದೇ ಕಾರಣಕ್ಕೂ ಪಾಲಕರಿಗೆ ಹೊರೆ ಅಲ್ಲ.

ಇನ್ಮುಂದೆ ಹೆಣ್ಣು ಮಕ್ಕಳ ಮದುವೆ ಅಪ್ಪ-ಅಮ್ಮನಿಗೆ ಹೊರೆ ಅಲ್ಲ, ಕೇಂದ್ರ ಸರ್ಕಾರವೇ ನೀಡುತ್ತೆ 27 ಲಕ್ಷ - Kannada News

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ತಂದೆ ತಾಯಿ ಕನಸು ಕಾಣುತ್ತಾರೆ, ಹಾಗೆಯೇ ಅದಕ್ಕಾಗಿ ಬಹಳ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಇನ್ನು ಮುಂದೆ ನೀವು ಸ್ವಲ್ಪೇ ಸ್ವಲ್ಪ ಉಳಿತಾಯ (savings) ಮಾಡಿದರು ಸಾಕು ನಿಮ್ಮ ಹೆಣ್ಣು ಮಗು 21 ವರ್ಷ ವಯಸ್ಸಿಗೆ ಬರುವಷ್ಟರಲ್ಲಿ, ಕೇಂದ್ರ ಸರ್ಕಾರವೇ (central government) ನಿಮಗೆ 27 ಲಕ್ಷ ರೂಪಾಯಿಗಳನ್ನು ಕೊಡುತ್ತದೆ.

ಆಧಾರ್ ಕಾರ್ಡ್ ಇದ್ರೆ ಸಾಕು ಸಿಗುತ್ತೆ 2 ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್! ಅಪ್ಲೈ ಮಾಡಿ

ಸುಕನ್ಯಾ ಸಮೃದ್ಧಿ ಯೋಜನಾ! (Sukanya samriddhi Yojana)

ಬಹುಶ: ಈ ಯೋಜನೆಯ ಬಗ್ಗೆ ನೀವು ಕೇಳಿರಬಹುದು, ಪ್ರದಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi) ಅವರು ಅಧಿಕಾರಕ್ಕೆ ಬಂದಾಗ ದೇಶದ ಹೆಣ್ಣು ಮಕ್ಕಳ ಸುರಕ್ಷತೆಗಾಗಿಯೇ ಸುಕನ್ಯ ಸಮೃದ್ಧಿ ಯೋಜನೆಯನ್ನು (SSY) ಜಾರಿಗೆ ತಂದಿರುವುದು.

ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಗುವಿಗೆ 21 ವರ್ಷ ಆಗುತ್ತಿದ್ದಂತೆ ಆಕೆಗೆ 27 ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರ ಒದಗಿಸಿ ಕೊಡುತ್ತದೆ, ಇದಕ್ಕೆ ನೀವು ಬಹಳ ಕಡಿಮೆ ಮೊತ್ತವನ್ನ ಹೂಡಿಕೆ ಮಾಡಿದರೆ ಸಾಕು!

ಸುಕನ್ಯಾ ಸಮೃದ್ಧಿ ಯೋಜನೆ ಅರ್ಹತೆಗಳು!

Sukanya Samriddhi Yojanaಒಂದು ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ ತಕ್ಷಣ ಎಸ್ ಎಸ್ ವೈ (SSY) ಎಲ್ಲಿ ಹೂಡಿಕೆ ಮಾಡಬಹುದು. ಹೆಣ್ಣು ಮಗುವಿಗೆ ವಯಸ್ಸು 10 ವರ್ಷ ಮೀರಿದ ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ ಹಾಗೂ ಮನೆಯಲ್ಲಿ ಹುಟ್ಟಿದ ಮೊದಲ ಹೆಣ್ಣು ಮಗುವಿಗೆ ಮಾತ್ರ ಯೋಜನೆಯ ಪ್ರಯೋಜನ ಸಿಗಲಿದೆ.

ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.50 ಲಕ್ಷ ರೂಪಾಯಿಗಳವರೆಗೆ ಯೋಜನೆಯಲ್ಲಿ ಹೂಡಿಕೆ (investment) ಮಾಡಬಹುದಾಗಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ (nationalised bank) ಅಥವಾ ಪೋಸ್ಟ್ ಆಫೀಸ್ (post office) ನಲ್ಲಿಯೂ ನೀವು ಖಾತೆ ಆರಂಭಿಸಬಹುದು.

ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ 87 ರೂಪಾಯಿ ಹೂಡಿಕೆ ಮಾಡಿ ಸಾಕು; ಸಿಗುತ್ತೆ 11 ಲಕ್ಷ ರೂಪಾಯಿ

ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆ ಲಾಭದಾಯಕ ಹೇಗೆ?

ಇಲ್ಲಿ ನೀವು ಹೂಡಿಕೆ ಮಾಡುವ ಮೊತ್ತ ಬಹಳ ಕಡಿಮೆ, ಆದರೆ ಇದಕ್ಕೆ ಸರ್ಕಾರ 7-8% ಬಡ್ಡಿ ನೀಡುತ್ತಿದ್ದು ನೀವು ಪ್ರತಿ ತಿಂಗಳು 5000 ಹೂಡಿಕೆ ಮಾಡಿದ್ರೆ ಒಂದು ವರ್ಷಕ್ಕೆ 60,000 ಆಗುತ್ತದೆ. 15 ವರ್ಷಗಳಲ್ಲಿ ಅಂದಾಜು 9 ಲಕ್ಷ ರೂ. ಹೂಡಿಕೆ ಮಾಡುತ್ತೀರಿ ಎಂದಾದರೆ, ಇದಕ್ಕೆ ಸಿಗುವ ಬಡ್ಡಿ ( interest) ಮೊತ್ತ ರೂ. 17,93,814.

6 ವರ್ಷಗಳ ನಂತರ ಅಂದರೆ ನಿಮ್ಮ ಹೆಣ್ಣುಮಗುವಿಗೆ 21 ನೇ ವಯಸ್ಸಿನಲ್ಲಿ ಒಟ್ಟು ನೀವು ಪಡೆಯುವ ಮೊತ್ತ ರೂ. 26,93,814. ಅಂದರೆ ಬರೋಬ್ಬರಿ 27 ಲಕ್ಷಗಳು ನಿಮ್ಮ ಕೈಯಲ್ಲಿರುತ್ತವೆ. ಇಲ್ಲಿ ಸರ್ಕಾರ ಕೊಡುವ ಬಡ್ಡಿಯ ಮೇಲೆ ಆಗಲಿ ಅಥವಾ ನೀವು ಹೂಡಿಕೆ ಮಾಡುವ ಹಣದ ಮೇಲಾಗಲಿ ಯಾವುದೇ ರೀತಿಯ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ ಹಾಗಾಗಿ ನೀವು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಸಂಪೂರ್ಣ ಲಾಭ ಪಡೆಯಬಹುದು.

Sukanya Samriddhi Yojana Details with Maturity Returns for Girl Child

Follow us On

FaceBook Google News

Sukanya Samriddhi Yojana Details with Maturity Returns for Girl Child