ಹೆಣ್ಣು ಮಕ್ಕಳಿಗೆ ಬಂಪರ್ ಯೋಜನೆ ಇದು! ಬರೋಬ್ಬರಿ 27 ಲಕ್ಷ ನಿಮ್ಮದಾಗಿಸಿಕೊಳ್ಳಿ

ಪಾಲಕರ ಚಿಂತೆ ದೂರ ಮಾಡುವ ಯೋಜನೆ ಇದು ಹೆಣ್ಣು ಮಕ್ಕಳಿಗೆ ಸಿಗಲಿದೆ 27 ಲಕ್ಷ ರೂಪಾಯಿ!

ಪ್ರತಿ ತಿಂಗಳು ನಿಮ್ಮ ಮಗುವಿನ ಹೆಸರಿನಲ್ಲಿ ಅತಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಸಾಕು. ಆದರೆ ಆ ಮಗುವಿಗೆ 21 ವರ್ಷ ವಯಸ್ಸಾದಾಗ ದೊಡ್ಡ ಮೊತ್ತದ ಹಣ ನಿಮ್ಮ ಕೈ ಸೇರುತ್ತದೆ.

ಪಾಲಕರು ಮಕ್ಕಳ ಭವಿಷ್ಯ (children’s future) ದ ಬಗ್ಗೆ ತಲೆಕೆಡಿಸಿಕೊಳ್ಳುವುದು ಸಹಜ, ಅವರ ವಿದ್ಯಾಭ್ಯಾಸ (Education) ಕ್ಕಾಗಿ ಅಥವಾ ಅವರ ಮದುವೆ (Marriage) ಖರ್ಚಿಗಾಗಿ ಯಾವುದೇ ಸಮಸ್ಯೆ ಇಲ್ಲದೆ ಹಣ ಹೊಂದಿಸಲು ಶತಾಯಗತಾಯ ತಂದೆ ತಾಯಿಗಳು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಮಗು ಹುಟ್ಟಿದ ನಂತರ ಆ ಮಗುವಿನ ಹೆಸರಿನಲ್ಲಿ ಹೂಡಿಕೆ ಆರಂಭಿಸುತ್ತಾರೆ.

ಈ ಯೋಜನೆಯಲ್ಲಿ ಸಿಗುತ್ತೆ ಉಚಿತ ಹೊಲಿಗೆ ಯಂತ್ರ ಹಾಗೂ ಕಡಿಮೆ ಬಡ್ಡಿಗೆ ಸಾಲ

ಹೆಣ್ಣು ಮಕ್ಕಳಿಗೆ ಬಂಪರ್ ಯೋಜನೆ ಇದು! ಬರೋಬ್ಬರಿ 27 ಲಕ್ಷ ನಿಮ್ಮದಾಗಿಸಿಕೊಳ್ಳಿ - Kannada News

ಇನ್ನು ನೀವು ನಿಮ್ಮ ಮಗುವಿನ ಭವಿಷ್ಯವನ್ನು ಉಜ್ವಲವಾಗಿಸಲು ದೊಡ್ಡ ಮೊತ್ತದ ಹಣವನ್ನು ಹೂಡಿಕೆ (Investment) ಮಾಡಬೇಕು ಎಂದೇನು ಇಲ್ಲ ಅತಿ ಕಡಿಮೆ ಹೂಡಿಕೆ ಮಾಡಿ ಆ ಮಗು ಮೆಚುರಿಟಿಗೆ ಬರುವ ಹೊತ್ತಿಗೆ ಲಕ್ಷಾಂತರ ರೂಪಾಯಿ ಹಣವನ್ನು ನೀವು ಹಿಂಪಡೆಯಬಹುದು ಅಂತಹ ಒಂದು ಉತ್ತಮ ಯೋಜನೆಯ ಬಗ್ಗೆ ಇಲ್ಲಿದೆ ಮಾಹಿತಿ.

ಸುಕನ್ಯಾ ಸಮೃದ್ಧಿ ಯೋಜನೆ! (Sukanya samriddhi Yojana)

ಮಕ್ಕಳ ಬಗ್ಗೆ ಪಾಲಕರಿಗೆ ಚಿಂತೆ ಇದ್ದೇ ಇರುತ್ತದೆ ಅದರಲ್ಲಿಯೂ ಹೆಣ್ಣು ಮಕ್ಕಳ ಬಗ್ಗೆ ತುಸು ಹೆಚ್ಚಿನ ಜವಾಬ್ದಾರಿ ಪಾಲಕರದ್ದು ಹಾಗಾಗಿ ಅವರ ಭವಿಷ್ಯಕ್ಕಾಗಿ ಒಂದು ಸಣ್ಣ ಹೂಡಿಕೆ ಮಾಡುವುದು ಕೂಡ ಬಹಳ ಒಳ್ಳೆಯದೇ ಇನ್ನು ಯಾವುದೇ ಹೂಡಿಕೆ ಮಾಡಿದ್ರು ಅಪಾಯವಿಲ್ಲದೆ ಸರಿಯಾದ ಹಣ ನಮ್ಮ ಕೈ ಸೇರಬೇಕು ಅಂದ್ರೆ ಸರಕಾರದ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಅದಕ್ಕಾಗಿ ನೀವು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

ಕ್ರೆಡಿಟ್ ಕಾರ್ಡ್ ಬಳಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಇಲ್ಲವಾದರೆ ನಷ್ಟ ಗ್ಯಾರಂಟಿ!

Sukanya samriddhi Yojanaಯಾವಾಗ ಹೂಡಿಕೆ ಆರಂಭಿಸಬೇಕು?

ಹೆಣ್ಣು ಮಗುವಿಗೆ, ಹುಟ್ಟಿದ ನಂತರ 10 ವರ್ಷಗಳ ಒಳಗೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೂಡಿಕೆ ಆರಂಭಿಸಬಹುದು. ಕೇವಲ 250ಗಳಿಂದ 1.5 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಲು ಅವಕಾಶವಿದೆ.

ಕೇವಲ 7 ಸಾವಿರಕ್ಕೆ ಮನೆಗೆ ತನ್ನಿ ಹೀರೋ ಬೈಕ್! ಖರೀದಿಗೆ ಮುಗಿಬಿದ್ದ ಜನತೆ

ಇದು 15 ವರ್ಷಗಳ ಅವಧಿಯ ಹೂಡಿಕೆ ಆಗಿದೆ. ನೀವು ಒಮ್ಮೆ ಹೂಡಿಕೆ ಮಾಡಿದರೆ ನಿಲ್ಲಿಸದೆ ನಿರಂತರವಾಗಿ ಹೂಡಿಕೆ ಮಾಡಬೇಕು. ಮೊತ್ತ ಎಷ್ಟು ಎಂಬುದನ್ನ ನಿಮ್ಮ ಆಯ್ಕೆಗೆ ಬಿಡಲಾಗಿದೆ. 8% ನಷ್ಟು ಬಡ್ಡಿದರ ಪಡೆಯಬಹುದು. ಯೋಜನೆ ಮುಕ್ತಾಯದ ನಂತರವೂ ಆರು ವರ್ಷಗಳವರೆಗೆ ಲಾಕ್ ಇನ್ ಪೀರಿಯಡ್ ನಲ್ಲಿ ಠೇವಣಿ ಇಡಬಹುದು.

ನಿಮ್ಮ ಹೆಣ್ಣು ಮಗು ಹುಟ್ಟಿದ ತಕ್ಷಣ ಆಕೆಯ ಹೆಸರಿನಲ್ಲಿ ತಿಂಗಳಿಗೆ 5,000 ಹೂಡಿಕೆ ಆರಂಭಿಸಿದರೆ ಆಕೆಗೆ 21 ವರ್ಷ ವಯಸ್ಸಾದಾಗ 27 ಲಕ್ಷಗಳನ್ನು ನೀವು ಪಡೆಯುತ್ತೀರಿ. ಆಕೆಯ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಥವಾ ಮದುವೆಗಾಗಿ ನೀವು ಬಳಸಿಕೊಳ್ಳಬಹುದು.

Sukanya Samriddhi Yojana Update and Benefits

Follow us On

FaceBook Google News

Sukanya Samriddhi Yojana Update and Benefits