ಸ್ಟೈಲಿಷ್ ಲುಕ್‌ನೊಂದಿಗೆ ಸುಜುಕಿಯಿಂದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್‌ ಹೆಚ್ಚಿದ್ದು, ಸುಜುಕಿ ಕಂಪನಿ ತನ್ನ ಮೊದಲ ಎಲೆಕ್ಟ್ರಿಕ್ ಟೂವೀಲರ್ ಇ-ಆಕ್ಸೆಸ್ ಅನ್ನು ನವೀನ ತಂತ್ರಜ್ಞಾನ, ಸ್ಟೈಲಿಷ್ ಲುಕ್‌ ಮತ್ತು ಶ್ರೇಷ್ಠ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಿದೆ.

  • ಇ-ಆಕ್ಸೆಸ್‌ಗೆ ಮೂರು ರೈಡಿಂಗ್ ಮೋಡ್‌ಗಳು
  • ಡಿಸಿಪಿ ಚಾರ್ಜಿಂಗ್ ಮೂಲಕ 1.12 ಗಂಟೆಗಳಲ್ಲಿ 80% ಚಾರ್ಜ್
  • ಟಿಎಫ್‌ಟಿ ಡಿಸ್‌ಪ್ಲೇ, ಯುಎಸ್‌ಬಿ ಪೋರ್ಟ್, ಕೀಲೆಸ್ ಸಿಸ್ಟಂ ಲಭ್ಯ

Suzuki Electric Scooter : ಇತ್ತೀಚಿಗೆ ಎಲೆಕ್ಟ್ರಿಕ್ ಸ್ಕೂಟರ್ ಪ್ರಪಂಚದಲ್ಲಿ (electric scooters) ದೊಡ್ಡ ಕ್ರಾಂತಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್‌ ವಾಹನ “ಇ-ಆಕ್ಸೆಸ್” (e-Access) ಅನ್ನು ಪರಿಚಯಿಸುತ್ತಿದೆ. ದೆಹಲಿಯಲ್ಲಿ ನಡೆದ “ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2024” ಕಾರ್ಯಕ್ರಮದಲ್ಲಿ ಈ ಹೊಸ ಮಾದರಿಯ ಪ್ರದರ್ಶನ ಮಾಡಲಾಯಿತು.

ಇ-ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಅತೀ ಆಧುನಿಕ ವಿನ್ಯಾಸ ಹೊಂದಿದ್ದು, ನೇರವಾಗಿ ಜನರ ಗಮನ ಸೆಳೆಯುತ್ತದೆ. ಮಿಂಚುವ ಮೆಟಾಲಿಕ್ ಬೋರ್ಡೋ ರೆಡ್, ಪಿಯರ್ಲ್ ಗ್ರೇಸ್ ವೈಟ್ ಮತ್ತು ಗ್ರೇ ವರ್ಗಗಳಲ್ಲಿ ಲಭ್ಯವಿರುವ ಈ ಸ್ಕೂಟರ್‌ನಲ್ಲಿ ಮುಂದೆ ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಎಲ್‌ಇಡಿ ಡಿಆರ್‌ಎಲ್ ಗಳನ್ನು ಅಪ್ರಾನ್‌ನಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ದಿ! ಇನ್ಮುಂದೆ ಮಿನಿಮಮ್‌ ಬ್ಯಾಲೆನ್ಸ್‌ ಬೇಕಿಲ್ಲ

ಈ ಇ-ಸ್ಕೂಟರ್‌ (e-scooter) ಅನ್ನು ನಗರ ಬಳಕೆಗಾಗಿ ಸೂಕ್ತವಾಗಿಯೇ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 3.072kWh ಬ್ಯಾಟರಿ ಪ್ಯಾಕ್ ಇದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸರಾಸರಿ 95 ಕಿಲೋಮೀಟರ್‌ ರೇಂಜ್ ದೊರೆಯುತ್ತದೆ. ಡಿಸಿ ಚಾರ್ಜರ್ ಉಪಯೋಗಿಸಿದರೆ ಕೇವಲ 1.12 ಗಂಟೆಗಳಲ್ಲಿ 80% ಚಾರ್ಜ್ ಆಗಬಹುದು.

ರೈಡಿಂಗ್ ಅನುಭವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ವಾಹನದಲ್ಲಿ ‘ಏಕೋ’, ‘ರೈಡ್ ಎ’ ಮತ್ತು ‘ರೈಡ್ ಬಿ’ ಎಂಬ ಮೂರು ವಿಭಿನ್ನ riding modes ನೀಡಲಾಗಿದೆ. ಇವುಗಳ ಮೂಲಕ ಶಕ್ತಿ ಹಾಗೂ ಮೈಲೇಜ್ ನಿಯಂತ್ರಿಸಬಹುದು. ಇದರಿಂದ ಎಲ್ಲ ವಯಸ್ಸಿನ ಬಳಕೆದಾರರಿಗೆ ಸುಲಭ.

Suzuki e-Access

ಈ ಸ್ಕೂಟರ್‌ನಲ್ಲಿ ಎಸಿ ಚಾರ್ಜರ್ (portable AC charger) ಮೂಲಕ 4.30 ಗಂಟೆಯಲ್ಲಿ 80% ಚಾರ್ಜಿಂಗ್ ಸಾಧ್ಯ. ಅತೀ ಕಡಿಮೆ ಸಮಯದಲ್ಲಿ ಫುಲ್ ಚಾರ್ಜ್ ಆಗುವ ವಿಶೇಷತೆ ಇದಕ್ಕೆ ಇದೆ.

ಸೀಟು ಕೆಳಗೆ ಉತ್ತಮ ಸ್ಟೋರೇಜ್, ಯುಎಸ್‌ಬಿ ಪೋರ್ಟ್, ಕ್ಯೂಬಿ ಸ್ಪೇಸ್ ಮತ್ತು ಮಲ್ಟಿ ಫಂಕ್ಷನ್ ಸ್ಟಾರ್ಟರ್ ನಾಬ್ ಇದ್ದು, ಬಳಕೆದಾರ ಸ್ನೇಹಿ ವಿನ್ಯಾಸ ನೀಡಲಾಗಿದೆ.

ಇದನ್ನೂ ಓದಿ: ಯಾವುದೇ ಬ್ಯಾಂಕಿನಲ್ಲಿ ಮನೆ, ಕಾರು, ಪರ್ಸನಲ್ ಲೋನ್ ಇದ್ದೋರಿಗೆ ಭರ್ಜರಿ ಸುದ್ದಿ

ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇ ಸೌಲಭ್ಯವಿದೆ. ಇದರಲ್ಲಿ ಸ್ಪೀಡೋ ಮೀಟರ್, ಬ್ಯಾಟರಿ ಲೆವೆಲ್, ಓಡೋ ಮೀಟರ್, ಕ್ಲಾಕ್ ಮತ್ತು ವೋಲ್ಟ್ಮೀಟರ್ ಸೇರಿದಂತೆ ಅನೇಕ ಡೇಟಾ ಪ್ರದರ್ಶನವಿದೆ. ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸಹ ಇದೆ.

ಸುಮಾರು 5.49 bhp ಪವರ್ ಮತ್ತು 15 Nm ಟಾರ್ಕ್ ನೀಡುವ ಸಾಮರ್ಥ್ಯ ಈ ವಾಹನಕ್ಕೆ ಇದೆ. ಹೊಸ ತಂತ್ರಜ್ಞಾನದಿಂದ ಕೂಡಿರುವ ಈ ಮಾದರಿ, ಯುವಜನತೆಗೆ ಆಕರ್ಷಕವಾಗಿ ಮಾರ್ಕೆಟ್‌ಗೆ ಬರಲಿರುವುದು ನಿಶ್ಚಿತ.

Suzuki First Electric Scooter e-Access Unveiled

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories