Business News

ಮನೆ ಕಟ್ಟಿಸಲು ಕೇಂದ್ರ ಸರ್ಕಾರವೇ ನೀಡುತ್ತೆ 1 ಲಕ್ಷ ಸಹಾಯಧನ! ಪಟ್ಟಿ ಬಿಡುಗಡೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi ji) ನೇತೃತ್ವದ ಸರ್ಕಾರವು ಬಡವರಿಗೆ ಸಿಹಿ ಸುದ್ದಿ ನೀಡಿದೆ. ಬಡತನ ರೇಖೆಗಿಂತ ಕೆಳಗಿನವರು (below poverty line) ಮನೆ ನಿರ್ಮಾಣ ಮಾಡಿಕೊಳ್ಳಲು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಂದು ಲಕ್ಷ ರೂ. ಸಬ್ಸಿಡಿ ನೀಡಲು ಮುಂದಾಗಿದೆ.

ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮೊದಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಅರ್ಜಿಯನ್ನು ಪರಿಶೀಲನೆ (application verification) ನಡೆಸಿ ಅರ್ಜಿ ಸರಿಯಾಗಿದ್ದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ನೀವೆನಾದರೂ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.

Free house in housing scheme, 1 lakh rupees will be given as subsidy

ಇನ್ಮುಂದೆ ಮನೆ, ಸೈಟ್ ಖರೀದಿ ಮತ್ತುಆಸ್ತಿ ಮಾರಾಟಕ್ಕೆ ಹೊಸ ರೂಲ್ಸ್ ಜಾರಿ!

ಪ್ರಧಾನ ಮಂತ್ರಿ ಆವಾಸ್ ಯೋಜನೆ: (pradhanmantri aawas Yojana)

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಕೇಂದ್ರ ಸರ್ಕಾರದ (central government) ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಮೊದಲು ಇದನ್ನು ಇಂದಿರಾ ಆವಾಸ್ ಯೋಜನೆ (Indira Gandhi aawas Yojana) ಎಂದು ಕರೆಯಲಾಗುತ್ತಿತ್ತು.

ಬಿಪಿಎಲ್ (BPL Ration card) ಪಡಿತರ ಚೀಟಿ (Ration Card) ಹೊಂದಿದವರು, ಮನೆಯಿಲ್ಲದಿದ್ದರೆ (Own House) ಅಂತಹವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ನೀಡುವ ಯೋಜನೆ ಆಗಿದೆ.

ಬಡವರಿಗಾಗಿ 2024ರ ವೇಳೆಗೆ ವಸತಿ ಯೋಜನೆ (housing scheme) ಯನ್ನು ಸಕ್ರಿಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪಕ್ಕಾ ಮನೆ ನಿರ್ಮಾಣದ ಗುರಿಯನ್ನು 2.95 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಹೀಗಾಗಿ ಡಿಸೆಂಬರ್ನಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸಮೀಕ್ಷಾ ಕಾರ್ಯ ಆರಂಭಗೊಂಡಿದೆ.

ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮಾಡೋಕೆ ಲಿಮಿಟ್! ಕಟ್ಟಾಗುತ್ತೆ ಹೆಚ್ಚು ಹಣ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಪರಿಶೀಲನೆ

ಪರಿಶೀಲನಾ ವಿಧಾನ

ಮೊದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ ಸೈಟ್ https://pmayg.nic.in/netiayHome/home.aspx ಭೇಟಿ ನೀಡಬೇಕು.

ಅಲ್ಲಿ ಮುಖ್ಯ ಮೆನುವಿನಲ್ಲಿ ಷೇರುದಾರರ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ಕ್ಲಿಕ್ ಮಾಡಿದ ಮೇಲೆ ನೀವು ಎಎವೈ/ ಪಿಎಂಎವೈಜಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ.

ಇಲ್ಲಿ ಕ್ಲಿಕ್ ಮಾಡಿದ ನಂತರ ನಿಮ್ಮ ಮುಂದೆ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ನೋಂದಣಿ ಸಂಖ್ಯೆ (registered number) ಕೇಳಲಾಗುತ್ತದೆ.

ಅಲ್ಲಿ ನೋಂದಣಿ ಸಂಖ್ಯೆ ನಮೂದಿಸಿ ಸರ್ಚ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈಗ ನಿಮ್ಮ ಮುಂದೆ ಪಿಎಂಎವೈಜಿ (PMAY ವಿವರಗಳು ಕಾಣಿಸುತ್ತವೆ.

ಹೀಗೆ ನೀವು ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ.

ಸ್ವಂತ ಮನೆ ಕಟ್ಟಿಕೊಳ್ಳಲು 6.5 ಲಕ್ಷ ರೂಪಾಯಿ ಸಹಾಯಧನ! ಆಸಕ್ತರು ಅರ್ಜಿ ಸಲ್ಲಿಸಿ

ಮನೆ ನಿರ್ಮಾಣ:

ಮೊದಲ ಕಂತಿನ ಹಣ ಬಿಡುಗಡೆಯಾದ 18 ತಿಂಗಳಲ್ಲಿ ಮನೆ ನಿರ್ಮಾಣ ಪೂರ್ಣಗೊಳ್ಳಬೇಕು. ನಂತರ ಮೂರು ಕಂತುಗಳಲ್ಲಿ ಫಲಾನುಭವಿಗೆ ಹಣವನ್ನು ಅವರ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ.

ಈ ರೀತಿಯಾಗಿ ಬಡತನ ರೇಖೆಗಿಂತ ಕೆಳಗಿರುವವರು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಬಹುದಾಗಿದೆ.

The central government will give Rs 1 lakh subsidy to build a house

Our Whatsapp Channel is Live Now 👇

Whatsapp Channel

Related Stories