Business News

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ

Loan Scheme : ಆತ್ಮ ನಿರ್ಭರ ನಿಧಿ (atma nirbhar Nidhi) ಎನ್ನುವ ಯೋಜನೆಯನ್ನು ಬೀದಿ ವ್ಯಾಪಾರಿಗಳಿಗೆ (Street vendors) ಸಾಲ ನೀಡುವ ಸಲುವಾಗಿ ಆರಂಭಿಸಲಾಗಿದ್ದು ಕೇಂದ್ರ ಸರ್ಕಾರ ಈ ಮೂಲಕ ಸ್ವ ನಿಧಿ ಯೋಜನೆಯನ್ನು ಪರಿಚಯಿಸಿದೆ.

ಇದರ ಅಡಿಯಲ್ಲಿ ಯಾವುದೇ ರೀತಿಯ ಗ್ಯಾರಂಟಿ ಪಡೆದುಕೊಳ್ಳದೆ ಸರಕಾರ ವ್ಯಾಪಾರ ಮಾಡುವವರಿಗೆ ಸಾಲ (Loan) ಸೌಲಭ್ಯ ಒದಗಿಸುತ್ತದೆ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಹೇಗೆ ನೋಡೋಣ.

Street vendors will get loan facility up to 50 thousand from the government

ಇದು ಮೋದಿ ಸರ್ಕಾರದ ಕೊಡುಗೆ, ಮಹಿಳೆಯರಿಗೆ ಸಿಗಲಿದೆ 11,000 ರೂಪಾಯಿ ಉಚಿತ!

ಪ್ರಧಾನ್ ಮಂತ್ರಿ ಸ್ವನಿಧಿ ಯೋಜನೆ! (Pradhanmantri SVANidhi scheme)

Covid 19 ಬಳಿಕ ದೇಶದಲ್ಲಿ ಬೀದಿಗಳಲ್ಲಿ ವ್ಯಾಪಾರ ಮಾಡುವವರಿಗೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುವಂತೆ ಆಯ್ತು. ನಂತರ ನಾವು ಸುಧಾರಿಸಿಕೊಳ್ಳುವುದಕ್ಕೆ ಎರಡು ವರ್ಷಗಳ ಸಮಯವೇ ಬೇಕಾಯಿತು.

ಇನ್ನು ಹೀಗೆ ಸಂಕಷ್ಟ ಅನುಭವಿಸಿದವರಲ್ಲಿ ಬೀದಿ ವ್ಯಾಪಾರಿಗಳೇ ಜಾಸ್ತಿ ಎನ್ನಬಹುದು. ಪುಟ್ಟ ಅಂಗಡಿ ಇಟ್ಟುಕೊಂಡು ಅಥವಾ ತೆಳು ಗಾಡಿಯಲ್ಲಿ ತರಕಾರಿ ಹಣ್ಣು ಮಾರಾಟ ಮಾಡುವ ಬೀದಿ ಬದಿಯ ವ್ಯಾಪಾರಿಗಳು ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯನ್ನು ಅನುಭವಿಸಿದರು.

ಮತ್ತೆ ಅವರು ತಮ್ಮ ವ್ಯಾಪಾರವನ್ನು ಆರಂಭಿಸಬೇಕು ಅಂದ್ರೆ ಅದಕ್ಕೆ ಬಂಡವಾಳ (investment) ಬೇಕು, ಈ ಬಂಡವಾಳಕ್ಕಾಗಿ ಲೋಕಲ್ ಶ್ರೀಮಂತ ವ್ಯಕ್ತಿಯ ಬಳಿ ಅತಿ ಹೆಚ್ಚು ಬಡ್ಡಿಗೆ ಸಾಲ ಪಡೆದುಕೊಳ್ಳುವಂತೆ ಆಯ್ತು.

ಇದನ್ನ ಗಮನಿಸಿರುವ ಸರ್ಕಾರ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ವ್ಯಾಪಾರಿಗಳಿಂದ ಯಾವುದೇ ಗ್ಯಾರಂಟಿಯನ್ನು ಪಡೆದುಕೊಳ್ಳದೆ 50 ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಮಹಿಳೆಯರಿಗೆ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ತನಕ ಸಾಲ! ಅರ್ಜಿ ಸಲ್ಲಿಸಿ

Loan For Street Vendorsಸಾಲ ಪಡೆದುಕೊಳ್ಳುವುದು ಹೇಗೆ? (How to get loan)

2020 ಜೂನ್ ಒಂದರಂದು ವಸತಿ ಮತ್ತು ನಗರ ಸಚಿವಾಲಯ ಮೈಕ್ರೋ ಕ್ರೆಡಿಟ್ (micro credit) ಅನ್ನು ಪರಿಚಯಿಸಿತು. ಈ ಮೂಲಕ ಕಡಿಮೆ ಮೊತ್ತದ ಹಣವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಸರಕಾರ ವ್ಯಾಪಾರಿಗಳಿಗೆ ನೀಡುತ್ತದೆ.

ನಿಗದಿತ ಅವಧಿ ಒಳಗೆ ಆ ಸಾಲವನ್ನು ಮರುಪಾವತಿ ಮಾಡಿ ಮತ್ತೆ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಮೊದಲ ಹಂತದಲ್ಲಿ 10,000ಗಳನ್ನು ಅದನ್ನು ಮರುಪಾವತಿ ಮಾಡಿದ ನಂತರ 30,000ಗಳನ್ನು ಹಾಗೂ ನಂತರದಲ್ಲಿ 50,000 ವರೆಗೆ ಸಹಾಯಧನ ಪಡೆಯಬಹುದು.

ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಇಳಿಕೆ

ಸ್ವನಿಧಿ ಸಾಲ ಪಡೆಯಲು ಯಾರು ಅರ್ಹರು?

ಬೀದಿ ಬದಿಯಲ್ಲಿ ಹಣ್ಣು ವ್ಯಾಪಾರ ಮಾಡುವವರು, ತರಕಾರಿ ವ್ಯಾಪಾರ ಮಾಡುವವರು, ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವವರು, ಹಾಲು ವ್ಯಾಪಾರ ಮಾಡುವವರು, ಹೂವು ವ್ಯಾಪಾರ ಮಾಡುವವರು, ಶವ್ರಿಕ ಅಂಗಡಿ, ಪಾನ್ ಶಾಪ್ ಗಳು ಮೊದಲಾದ ವ್ಯಾಪಾರಸ್ಥರು ಪ್ರಯೋಜನ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು

ಮತದಾರರ ಗುರುತಿನ ಚೀಟಿ
ಆಧಾರ್ ಕಾರ್ಡ್
ಬ್ಯಾಂಕ ಖಾತೆಯ ವಿವರ
ಪಾಸ್ಪೋರ್ಟ್ ಅಳತೆಯ ಫೋಟೋ
ವ್ಯಾಪಾರದ ಬಗ್ಗೆ ವಿವರ

ಈ ಮೇಲಿನ ಎಲ್ಲ ವ್ಯಾಪಾರಸ್ಥರು ತಮ್ಮ ಸಣ್ಣ ಉದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳಲು ಬೇಕಾಗಿರುವ ಬಂಡವಾಳವನ್ನು ಸರ್ಕಾರದಿಂದ ಪಡೆಯಬಹುದು. ಇದಕ್ಕಾಗಿ ಯಾವುದೇ ರೀತಿಯ ಅಡಮಾನ ಇಡುವಾಗ ಅಗತ್ಯವಿಲ್ಲ. ಇನ್ನು ಸಾಲವನ್ನು ಸಹಕಾರಿ ಬ್ಯಾಂಕ್ ಗಳು, ಸಣ್ಣ ಫೈನಾನ್ಸ್ ಬ್ಯಾಂಕ್ ಗಳು, NBFC ಹಾಗೂ ಪ್ರಮುಖ ವಾಣಿಜ್ಯ ಬ್ಯಾಂಕ್ ಗಳಲ್ಲಿ ಪಡೆಯಬಹುದು.

ಕೇವಲ 30 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್! ಸಿಂಗಲ್ ಓನರ್

ಅರ್ಜಿ ಸಲ್ಲಿಸುವುದು ಹೇಗೆ?

https://pmsvanidhi.mohua.gov.in/login ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ. ಆರಂಭದಲ್ಲಿ ಕಾಣುವ 10,000 ಹಾಗೂ 50,000 ಈ ಮೂರು ಮೊತ್ತದಲ್ಲಿ ಯಾವ ಮೊತ್ತದ ಸಾಲವನ್ನು ಪಡೆದುಕೊಳ್ಳಲು ಬಯಸುತ್ತೀರಿ ಎಂದು ಕ್ಲಿಕ್ ಮಾಡಿ. ನಂತರ ಅಗತ್ಯ ಇರುವ ದಾಖಲೆ ಮತ್ತು ಮಾಹಿತಿ ಭರ್ತಿ ಮಾಡಿ ಯೋಜನೆಯ ಸಾಲ ಸೌಲಭ್ಯ (Loan) ಪಡೆಯಬಹುದು

The government gives 50,000 interest-free loans to street vendors

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories