ಸ್ವಂತ ಮನೆ ಇಲ್ಲದವರಿಗೆ ಸರ್ಕಾರವೇ ಕೊಡುತ್ತೆ 3 ಲಕ್ಷ ರೂಪಾಯಿ! ಇಂದೇ ಅರ್ಜಿ ಸಲ್ಲಿಸಿ ಪಡೆಯಿರಿ

Story Highlights

ಬ್ಯಾಂಕ್ ಗಳಲ್ಲಿ ಲೋನ್ ಪಡೆದರೆ, ಪಾವತಿ ಮಾಡಬೇಕಾದ ಬಡ್ಡಿದರ ಹೆಚ್ಚು. ಹಾಗೆಯೇ Loan ಸಿಗುವುದು ಕೂಡ ಸುಲಭ ಅಲ್ಲ. ಹಾಗಾಗಿ ಸ್ವಂತ ಮನೆ ಮಾಡಿಕೊಳ್ಳುವುದು ಮಧ್ಯಮವರ್ಗದ ಜನರಿಗೆ ತುಂಬಾ ಕಷ್ಟ

Loan Scheme : ಈಗಿನ ಕಾಲದಲ್ಲಿ ಸ್ವಂತ ಮನೆ (Own House) ಹೊಂದುವುದು ಎಲ್ಲರ ಕನಸು. ಆದರೆ ಅದನ್ನು ನನಸು ಮಾಡಿಕೊಳ್ಳುವ ಹಾದಿ ಸುಲಭವಾದದ್ದಂತೂ ಅಲ್ಲ. ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಹೆಚ್ಚು ಹಣ ಬೇಕು, ಆದರೆ ಆ ಹಣ ಎಲ್ಲರ ಬಳಿ ಇರುವುದಿಲ್ಲ. ಬ್ಯಾಂಕ್ ಗಳಲ್ಲಿ ಲೋನ್ ಪಡೆದರೆ, ಪಾವತಿ ಮಾಡಬೇಕಾದ ಬಡ್ಡಿದರ ಹೆಚ್ಚು. ಹಾಗೆಯೇ Loan ಸಿಗುವುದು ಕೂಡ ಸುಲಭ ಅಲ್ಲ. ಹಾಗಾಗಿ ಸ್ವಂತ ಮನೆ ಮಾಡಿಕೊಳ್ಳುವುದು ಮಧ್ಯಮವರ್ಗದ ಜನರಿಗೆ ತುಂಬಾ ಕಷ್ಟ.

ಆದರೆ ಕೇಂದ್ರ ಸರ್ಕಾರ ಈಗ ಸ್ವಂತ ಮನೆ ಮಾಡಿಕೊಳ್ಳಲು ಬಯಸುತ್ತಿರುವವರಿಗೆ, ಆರ್ಥಿಕ ಸಹಾಯ ಮಾಡುವುದಕ್ಕೆ ಮುಂದಾಗಿದೆ. ಇದು ಪಿಎಮ್ ಆವಾಸ್ ಯೋಜನೆಯ ಮೂಲಕ ಆಗಿದೆ. ಈ ಒಂದು ಯೋಜನೆಯ ಮೂಲಕ ಸ್ವಂತ ಮನೆ ಇಲ್ಲದೇ ಇರುವವರಿಗೆ ಸರ್ಕಾರವು ಮನೆ ಮಾಡಿಕೊಳ್ಳಲು 3 ಲಕ್ಷದವರೆಗೂ ಹಣ ಸಹಾಯ ಮಾಡುತ್ತದೆ. ಹಾಗೆಯೇ ಸಬ್ಸಿಡಿ ಸಾಲವನ್ನು ಕೂಡ ಸರ್ಕಾರ ಕೊಡುತ್ತದೆ. ಈ ಸೌಲಭ್ಯವನ್ನು ಹೇಗೆ ಪಡೆಯುವುದು ಎಂದು ಮಾಹಿತಿ ನೀಡಲಿದ್ದೇವೆ..

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗಲಿದೆ ₹50 ಸಾವಿರ ತನಕ ಸಾಲ ಸೌಲಭ್ಯ! ಅರ್ಜಿ ಸಲ್ಲಿಸಿ

ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವವರಿಗೆ, ಕೇಂದ್ರ ಸರ್ಕಾರವು ಪಿಎಮ್ ಆವಾಸ್ ಯೋಜನೆಯ ಮೂಲಕ 2.5 ಲಕ್ಷದವರೆಗು ಹಣ ಸಹಾಯ ಮಾಡುತ್ತದೆ. ಹಾಗೆಯೇ ಹಳ್ಳಿ ಮತ್ತು ಸಿಟಿಗಳಲ್ಲಿ ವಾಸ ಮಾಡುವವರಿಗೆ 1.5 ಲಕ್ಷದವರೆಗು ಹಣಕಾಸಿನ ಸಹಾಯ ಸಿಗುತ್ತದೆ.

ಇದು ಸರ್ಕಾರ ನಿಮಗೆ ಕೊಡುತ್ತಿರುವ ಸಾಲ ಸೌಲಭ್ಯ ಆಗಿದ್ದು, 6.5% ಬಡ್ಡಿದರ ನಿಗದಿ ಆಗಿರುತ್ತದೆ. ಜೊತೆಗೆ 20 ವರ್ಷ ಅವಧಿಯಲ್ಲಿ ಸಾಲ ತೀರಿಸಲು (Loan Re Payment) ಅವಕಾಶ ಕೊಡಲಾಗುತ್ತದೆ. ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಯೋಜನೆಯ ಹಣ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ.

ಅರ್ಜಿ ಸಲ್ಲಿಸುವ ವ್ಯಕ್ತಿ ವಯಸ್ಸಾದವರು ಅಥವಾ ಅಂಗವಿಕಲರು ಆದರೆ, ಅಂಥವರಿಗೆ ಇನ್ನು ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ (Loan Facility) ಸಿಗುತ್ತದೆ. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ, ಭಾರತದವರೇ ಆಗಿದ್ದು, 18 ವರ್ಷ ತುಂಬಿರುವವರು, ಈಗಾಗಲೇ ಸ್ವಂತ ಮನೆ ಇಲ್ಲದೇ ಇರುವವರು, ಬಿಪಿಎಲ್ ಕಾರ್ಡ್ ಹೊಂದಿದ್ದು, 6 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈ ತಳಿಯ ಕುರಿ ಸಾಕಾಣಿಕೆ ಮಾಡಿ ನೋಡಿ, ನಿಮ್ಮ ಬಂಡವಾಳಕ್ಕೆ ಡಬಲ್ ಆದಾಯ ಗ್ಯಾರೆಂಟಿ!

ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ನೋಡುವುದಾದರೆ.. ಅರ್ಜಿ ಹಾಕುವವರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಫೋಟೋ, ಹಾಗೂ ಇನ್ನಿತರ ದಾಖಲೆಗಳನ್ನು ಹೊಂದಿದ್ದರೆ, ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. 2024ರ ಬಜೆಟ್ ನಲ್ಲಿ ಕೂಡ ಈ ಒಂದು ಯೋಜನೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಈ ಕಾರಣಕ್ಕೆ ಸ್ವಂತ ಮನೆ ಇಲ್ಲದೇ ಇರುವವರು ಈ ಒಂದು ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು..

The government will give 3 lakh rupees to those who do not have their own house

Related Stories