Business News

ನೀವು ಬ್ಯಾಂಕಿನಲ್ಲಿ ಇಡುವ ನಿಮ್ಮ ಫಿಕ್ಸೆಡ್ ಹಣಕ್ಕೆ ಹೆಚ್ಚು ಹೆಚ್ಚು ಬಡ್ಡಿ ನೀಡುವ ಟಾಪ್ ಬ್ಯಾಂಕುಗಳಿವು!

Fixed Deposit : ಪ್ರಸ್ತುತ ಹಣ ಸಂಪಾದನೆ ಮಾಡುತ್ತಿರುವವರ ಸಂಖ್ಯೆ ಜಾಸ್ತಿ ಆಗುತ್ತಿರುವ ಹಾಗೆ, ಹಣ ಉಳಿಸುವ ಜನರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ. ಉಳಿತಾಯ ಮಾಡಲು ಹೆಚ್ಚಿನ ಜನರು ಬ್ಯಾಂಕ್ ಮೊರೆ ಹೋಗುತ್ತಾರೆ, ಬಹುತೇಕ ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ Fixed Deposit ಮೇಲೆ ಒಳ್ಳೆಯ ಬಡ್ಡಿದರ ಕೊಡುತ್ತಾರೆ…

ಹಿರಿಯ ನಾಗರೀಕರಿಗೆ ಹೆಚ್ಚು ಬಡ್ಡಿದರ ಜೊತೆಗೆ ತೆರಿಗೆಮುಕ್ತ ಸೇವೆಗಳು ಕೂಡ ಲಭ್ಯವಿರುತ್ತದೆ. ಹಾಗಿದ್ದಲ್ಲಿ ಯಾವ ಬ್ಯಾಂಕ್ ನಲ್ಲಿ (Banks) ನಿಮಗೆ ಅತಿ ಹೆಚ್ಚು ಬಡ್ಡಿದರ ಹಾಗೂ ಉತ್ತಮವಾದ ಸೇವೆಗಳು ಸಿಗುತ್ತದೆ ಎಂದು ಇಂದು ತಿಳಿದುಕೊಳ್ಳೋಣ..

See how much interest you get for your fixed money in the bank

ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಅತೀ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ 2 ಲಕ್ಷ ಸಾಲ! ಅರ್ಜಿ ಸಲ್ಲಿಸಿ

ಡೆಪಾಸಿಟ್ ಮೇಲೆ ಬಡ್ಡಿದರ ಹೆಚ್ಚಳ:

ಇದೀಗ ಬ್ಯಾಂಕ್ ಗಳಲ್ಲಿ ನೀವು ಠೇವಣಿ ಮಾಡುವ ಹಣಕ್ಕೆ ಬಡ್ಡಿದರವನ್ನು ಜಾಸ್ತಿ ಮಾಡಲಾಗಿದೆ. ಹೌದು, ಇತ್ತ RBI ರೆಪೋ ರೇಟ್ ನಲ್ಲಿ ಹೆಚ್ಚಳ ಮಾಡಿಲ್ಲ, ಇದ್ದಷ್ಟೇ ರೇಟ್ ಅನ್ನು ಮುಂದುವರಿಸಿದೆ. ಆದರೆ ಬ್ಯಾಂಕ್ ಡೆಪಾಡಿಟ್ ಮೇಲಿನ ಬಡ್ಡಿದರವನ್ನು ಮಾತ್ರ ಹೆಚ್ಚಳ ಮಾಡಲಾಗಿದೆ.

ಪ್ರಸ್ತುತ 3 ಪ್ರಮುಖ ಬ್ಯಾಂಕ್ ಗಳಲ್ಲಿ ಬಡ್ಡಿದರವನ್ನು ಜಾಸ್ತಿ ಮಾಡಲಾಗಿದ್ದು, ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್.. ಇಲ್ಲಿ ಬಡ್ಡಿದರಗಳು ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳೋಣ..

HDFC ಬ್ಯಾಂಕ್ ನಲ್ಲಿ FD ಮೇಲಿನ ಬಡ್ಡಿದರ:

*7 ರಿಂದ 29 ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 3%, ಹಿರಿಯ ನಾಗರೀಕರಿಗೆ 3.50% ಬಡ್ಡಿದರ ಸಿಗುತ್ತದೆ.

*30 ರಿಂದ 45 ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 3.50%, ಹಿರಿಯ ನಾಗರೀಕರಿಗೆ 4% ಬಡ್ಡಿದರ ಸಿಗುತ್ತದೆ.

*46 ದಿನಗಳಿಂದ 6 ತಿಂಗಳ FD ಯೋಜನೆಗೆ ಸಾಮಾನ್ಯ ಜನರಿಗೆ 4.50%, ಹಿರಿಯ ನಾಗರೀಕರಿಗೆ 5% ಬಡ್ಡಿದರ ಸಿಗುತ್ತದೆ.

*6 ತಿಂಗಳಿನಿಂದ 9 ತಿಂಗಳ FD ಯೋಜನೆಗೆ ಸಾಮಾನ್ಯ ಜನರಿಗೆ 5.75%, ಹಿರಿಯ ನಾಗರೀಕರಿಗೆ 6.25% ಬಡ್ಡಿದರ ಸಿಗುತ್ತದೆ.

ಮಹಿಳೆಯರಿಗೆ ಸಿಗಲಿದೆ 50 ಸಾವಿರ ಸಾಲ, ಅದ್ರಲ್ಲಿ 25 ಸಾವಿರ ಕಟ್ಟಿದರೆ ಸಾಕು! ಉಳಿದ 25 ಸಾವಿರ ಸಬ್ಸಿಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ FD ಮೇಲಿನ ಬಡ್ಡಿದರ:

*7 ರಿಂದ 45 ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 3%, ಹಿರಿಯ ನಾಗರೀಕರಿಗೆ 3.50% ಬಡ್ಡಿದರ ಸಿಗುತ್ತದೆ.

*46 ರಿಂದ 179 ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 4.50%, ಹಿರಿಯ ನಾಗರೀಕರಿಗೆ 5% ಬಡ್ಡಿದರ ಸಿಗುತ್ತದೆ.

*180 ದಿನಗಳಿಂದ 270 ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 5.50%, ಹಿರಿಯ ನಾಗರೀಕರಿಗೆ 6% ಬಡ್ಡಿದರ ಸಿಗುತ್ತದೆ.

*271 ದಿನಗಳಿಂದ 1 ವರ್ಷದ FD ಯೋಜನೆಗೆ ಸಾಮಾನ್ಯ ಜನರಿಗೆ 5.80%, ಹಿರಿಯ ನಾಗರೀಕರಿಗೆ 6.30% ಬಡ್ಡಿದರ ಸಿಗುತ್ತದೆ.

*1 ವರ್ಷಕ್ಕಿಂತ ಹೆಚ್ಚಿನ ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 6.80%, ಹಿರಿಯ ನಾಗರೀಕರಿಗೆ 7.30% ಬಡ್ಡಿದರ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಂಪರ್‌ ಸುದ್ದಿ, ಹೆಚ್ಚಿನ ಬಡ್ಡಿ ಸಿಗೋ ಎಫ್‌ಡಿ ಯೋಜನೆ ಬಿಡುಗಡೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ FD ಮೇಲಿನ ಬಡ್ಡಿದರ

*7 ರಿಂದ 45 ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 3%, ಹಿರಿಯ ನಾಗರೀಕರಿಗೆ 3.50% ಬಡ್ಡಿದರ ಸಿಗುತ್ತದೆ.

*46 ರಿಂದ 179 ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 4.50%, ಹಿರಿಯ ನಾಗರೀಕರಿಗೆ 5% ಬಡ್ಡಿದರ ಸಿಗುತ್ತದೆ.

*180 ದಿನಗಳಿಂದ 210 ದಿನಗಳ FD ಯೋಜನೆಗೆ ಸಾಮಾನ್ಯ ಜನರಿಗೆ 5.25%, ಹಿರಿಯ ನಾಗರೀಕರಿಗೆ 5.75% ಬಡ್ಡಿದರ ಸಿಗುತ್ತದೆ.

*211 ದಿನಗಳಿಂದ 1 ವರ್ಷದ FD ಯೋಜನೆಗೆ ಸಾಮಾನ್ಯ ಜನರಿಗೆ 5.75%, ಹಿರಿಯ ನಾಗರೀಕರಿಗೆ 6.25% ಬಡ್ಡಿದರ ಸಿಗುತ್ತದೆ.

*1 ವರ್ಷದಿಂದ 2 ವರ್ಷದ ವರೆಗಿನ FD ಯೋಜನೆಗೆ ಸಾಮಾನ್ಯ ಜನರಿಗೆ 6.80%, ಹಿರಿಯ ನಾಗರೀಕರಿಗೆ 7.30% ಬಡ್ಡಿದರ ಸಿಗುತ್ತದೆ.

These are the top banks that give you the highest interest on your fixed deposits

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories