ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ರೆ 78% ದಂಡವಂತೆ! ಹೊಸ ಕಾನೂನು

ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎಂಬ ಪ್ರಶ್ನೆ ಎಲ್ಲರ ಮನದಲ್ಲಿದೆ. ಸರಿಯಾದ ದಾಖಲೆಗಳಿಲ್ಲದಿದ್ದರೆ ಸಮಸ್ಯೆಯಾಗಬಹುದೇ ಎಂಬ ವಿಷಯದ ಕುರಿತು ಸ್ಪಷ್ಟ ಮಾಹಿತಿ ಇಲ್ಲಿದೆ.

  • ಮನೆಯಲ್ಲಿ ಹಣ ಇಡುವುದಕ್ಕೆ ಮಿತಿಯಿಲ್ಲ
  • ದಾಖಲೆ ಇಲ್ಲದೆ ಇಟ್ಟರೆ ಐಟಿ ಇಲಾಖೆಯಿಂದ ವಿಚಾರಣೆ
  • ಐಟಿ ರೈಡ್ ಆಗಬಾರದೆಂದರೆ ಮೂಲ ದಾಖಲೆ ಇರಲಿ

ಇತ್ತೀಚಿನ ದಿನಗಳಲ್ಲಿ “ಐಟಿ ರೈಡ್” (IT Raid) ಎಂಬ ಪದವೇ ಜನರಲ್ಲಿ ಭಯ ಹುಟ್ಟಿಸುತ್ತದೆ. ವಿಶೇಷವಾಗಿ ಮನೆಯಲ್ಲಿ ಹೆಚ್ಚು ನಗದು ಇಟ್ಟುಕೊಂಡಿದ್ದರೆ ಅಧಿಕಾರಿಗಳು ರೇಡ್ ಎಂಬ ಭೀತಿ ಸಾಮಾನ್ಯವಾಗಿದೆ. ಆದರೆ ಈ ಭೀತಿ ಎಷ್ಟರಮಟ್ಟಿಗೆ ನ್ಯಾಯಸಮ್ಮತ?

ಹೌದು, ಭಾರತದಲ್ಲಿ ನೀವು ಎಷ್ಟು ನಗದು ಬೇಕಾದರೂ ಇಟ್ಟುಕೊಳ್ಳಬಹುದು – ಮನೆ, ಕಚೇರಿ ಅಥವಾ ನಿಮ್ಮ ಕೈಯಲ್ಲಿ. ಯಾವುದೇ ಕಾನೂನು ಇದನ್ನು ನಿರ್ಬಂಧಿಸುತ್ತಿಲ್ಲ. ಆದರೆ ಇಲ್ಲಿ ಮುಖ್ಯವಾಗಿರುವುದು money source proof (ಹಣದ ಮೂಲದ ದಾಖಲೆ).

ಇದನ್ನೂ ಓದಿ: ಇನ್ಮುಂದೆ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಈ ದಾಖಲೆಗಳು ಇರಲೇಬೇಕು! ಹೊಸ ರೂಲ್ಸ್

ಆದಾಯದ ಮೂಲ ಖಚಿತವಾಗಿರಬೇಕು ಎಂಬುದು ಆಯುಧ. ಭಾರತದಲ್ಲಿ ನಗದು ಇಟ್ಟುಕೊಳ್ಳುವುದು ಅಪರಾಧವಲ್ಲ. ಆದರೆ ನೀವು ಹಣವನ್ನು ಹೇಗೆ ಗಳಿಸಿದ್ದೀರಿ ಎಂಬುದಕ್ಕೆ ಸರಿಯಾದ ದಾಖಲೆ ಇಲ್ಲದಿದ್ದರೆ ಮಾತ್ರ ಸಮಸ್ಯೆ.

ಉದಾಹರಣೆಗೆ: ನಗದು ಜಪ್ತಿ ಆಗಿದೆಯೆಂದರೆ, ಅಧಿಕಾರಿಗಳು ನೀವು ಆ ಹಣವನ್ನು ಎಲ್ಲಿ, ಹೇಗೆ ಗಳಿಸಿದ್ದೀರಿ ಎಂಬುದರ ಮೇಲೆ ನೋಟ ಇಡುತ್ತಾರೆ. Section 68 ಮತ್ತು 69B (Income Tax Act) ಪ್ರಕಾರ, ನೀವು ನೀಡುವ ವಿವರಣೆ ಸ್ಪಷ್ಟವಾಗಿರಬೇಕು.

Indian Money

ಹೆಚ್ಚು ಹಣದ ಜೊತೆಗೆ ಸಂಪಾದನೆಯ proof ಇರಬೇಕು – ಉದ್ಯೋಗದ ಪೇಸ್ಲಿಪ್, ಆಸ್ತಿ ಮಾರಾಟದ ದಾಖಲೆ, ವ್ಯವಹಾರ ಲೆಕ್ಕಪತ್ರಗಳು, ಅಥವಾ ಇನ್‌ಕಮ್‌ ಟ್ಯಾಕ್ಸ್ ರಿಟರ್ನ್ (ITR). ಈ ದಾಖಲೆಗಳು ಇಲ್ಲದಿದ್ದರೆ ಅದು ಅಡಗಿಸಿದ ಆದಾಯ (unaccounted income) ಎನ್ನಲಾಗುತ್ತದೆ.

ಇದನ್ನೂ ಓದಿ: ಮನೆ ಕಟ್ಟೋ ಕನಸು ಇದ್ಯಾ? ಈ ಬ್ಯಾಂಕ್‌ಗಳಿಂದ ನಿಮಗೆ ಖುಷಿ ಕೊಡುವ ಸುದ್ದಿ

ಇದೇ ಕಾರಣಕ್ಕೆ ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ನಗದು ವಶಪಡಿಸಿಕೊಳ್ಳುತ್ತಾರೆ. ಇಲ್ಲಿಂದ ಮುಂದೆ ಪೂರಕ ದಾಖಲೆಗಳಿಲ್ಲದಿದ್ದರೆ 78% ದಂಡ ವಿಧಿಸುವ ಸಾಧ್ಯತೆ ಇರುತ್ತದೆ.

ಹಾಗಾಗಿ, ನೀವು ನಗದು ಇಡುವ ಮೊದಲು ಆ ಹಣದ ಮೂಲ ಮತ್ತು ದಾಖಲೆಗಳನ್ನು ಖಚಿತಪಡಿಸಿಕೊಳ್ಳಿ. ಇವು ಇದ್ದಲ್ಲಿ ಯಾವುದೇ ಅಧಿಕಾರಿಗಳ ಪ್ರಶ್ನೆಗೂ ಸ್ಪಷ್ಟ ಉತ್ತರ ಕೊಡಲು ಸಾಧ್ಯವಾಗುತ್ತದೆ. ಅಲ್ಲದೇ, ನೀವು ಕಾನೂನುಬದ್ಧವಾಗಿರುವಿರೆಂಬ ಭರವಸೆ ಕೂಡ ಸಿಗುತ್ತದೆ.

This Is How Much Cash You Can Legally Keep at Home

Related Stories