ಅತೀ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗೋ ಬ್ಯಾಂಕ್ ಇದು! ತಿಂಗಳ ಇಎಂಐ ಕೂಡ ತುಂಬಾ ಕಡಿಮೆ

Story Highlights

Home Loan : ಯಾವ ಬ್ಯಾಂಕ್ ನಲ್ಲಿ ಹೋಮ್ ಲೋನ್ ಗೆ ಕಡಿಮೆ ಬಡ್ಡಿ ಇದೆಯೋ, ಆ ಬ್ಯಾಂಕ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹೌದು, ಹೋಮ್ ಲೋನ್ ಪಡೆದು ಇಎಂಐ ಕಟ್ಟುವುದು ನಿಮಗೆ ಹೆಚ್ಚಿನ ಹೊರೆ ಆಗಬಾರದು.

Home Loan : ಈಗಿನ ಕಾಲದಲ್ಲಿ ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎನ್ನುವುದು ಬಹುತೇಕ ಎಲ್ಲಾ ಜನರ ಕನಸು ಆಗಿರುತ್ತದೆ. ಆ ಕನಸನ್ನು ನನಸು ಮಾಡಿಕೊಳ್ಳಲು, ಎಷ್ಟೆಷ್ಟೋ ಕಷ್ಟಪಡುತ್ತಾರೆ. ಆರ್ಥಿಕವಾಗಿ ಸಬಲರಾಗಿದ್ದು, ಅತ್ಯುತ್ತಮ ಆದಾಯ ಬರುವವರು ಯಾವುದೇ ಯೋಚನೆ ಮಾಡುವುದಿಲ್ಲ, ಒಳ್ಳೆಯ ಮನೆಯನ್ನು ಕಟ್ಟಿಸಿಕೊಳ್ಳುತ್ತಾರೆ.

ಆದರೆ ಮಧ್ಯಮವರ್ಗದವರಿಗೆ, ಬಡವರಿಗೆ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಬಹಳ ಮುಖ್ಯವಾದ ಜೊತೆಗೆ ಕಷ್ಟಕರವಾದ ವಿಷಯ ಕೂಡ ಹೌದು. ಹಾಗಾಗಿ ಆ ಥರದ ಪರಿಸ್ಥಿತಿಗಳಲ್ಲಿ ಇರುವವರು ಸಾಮಾನ್ಯವಾಗಿ ಹೋಮ್ ಲೋನ್ (Home Loan) ಮೊರೆ ಹೋಗುತ್ತಾರೆ.

ಹೋಮ್ ಲೋನ್ ಪಡೆದು, ಅದರ ಇಎಂಐ ಅನ್ನು ಪ್ರತಿ ತಿಂಗಳು ಕಟ್ಟಿಕೊಂಡು ಹೋಗುವುದು ಸುಲಭದ ವಿಷಯ ಅಂತೂ ಇಲ್ಲ. ಹಾಗಾಗಿ ಹೋಮ್ ಲೋನ್ ಪಡೆಯುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಹೋಮ್ ಲೋನ್ ಪಡೆಯುವವರಿಗೆ ಉತ್ತಮವಾದ ಕ್ರೆಡಿಟ್ ಸ್ಕೋರ್ (Credit Score) ಇರಬೇಕು ಎನ್ನುವುದು ಮುಖ್ಯವಾದ ವಿಷಯ ಆಗಿದೆ.

ಚೆಕ್ ಬೌನ್ಸ್ ಕೇಸ್‌ನಲ್ಲಿ ಸಿಕ್ಕಾಕ್ಕೊಂಡ್ರೆ ಜೈಲೂಟ ಗ್ಯಾರೆಂಟಿ; ಮೊದಲು ಈ ವಿಚಾರಗಳನ್ನು ನೆನಪಿಟ್ಟುಕೊಳ್ಳಿ!

ಹೌದು, ಕ್ರೆಡಿಟ್ ಸ್ಕೋರ್ (CIBIL Score) ಚೆನ್ನಾಗಿದ್ದರೆ ಮಾತ್ರ ಹೋಮ್ ಲೋನ್ ಸಿಗೋದು, ಇಲ್ಲವಾದಲ್ಲಿ ಸಿಗೋದಿಲ್ಲ. ಹಾಗಾಗಿ ನೀವು ಸಿಬಿಲ್ ಸ್ಕೋರ್ ಕಾಯ್ದುಕೊಳ್ಳುವುದು ಮುಖ್ಯ ಆಗುತ್ತದೆ.

ಹಾಗೆಯೇ ಹೋಮ್ ಲೋನ್ ಪಡೆಯುವುದಕ್ಕೆ ಬೇಕಾಗಿರುವ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇರಬೇಕು. ಜೊತೆಗೆ ಹೋಮ್ ಲೋನ್ ಗೆ ಸಂಬಂಧಿಸಿದ ಹಾಗೆ ಮತ್ತೊಂದು ಪ್ರಮುಖ ವಿಚಾರ ನೀವು ಯಾವ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯುತ್ತೀರಿ ಎನ್ನುವುದು, ಹೌದು ಇದು ಅತ್ಯಂತ ಮುಖ್ಯವಾದದ್ದು.

ಯಾವ ಬ್ಯಾಂಕ್ ನಲ್ಲಿ ಹೋಮ್ ಲೋನ್ ಗೆ ಕಡಿಮೆ ಬಡ್ಡಿ ಇದೆಯೋ, ಆ ಬ್ಯಾಂಕ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹೌದು, ಹೋಮ್ ಲೋನ್ ಪಡೆದು ಇಎಂಐ ಕಟ್ಟುವುದು ನಿಮಗೆ ಹೆಚ್ಚಿನ ಹೊರೆ ಆಗಬಾರದು.

ಎಟಿಎಂನಲ್ಲಿ ನಕಲಿ ನೋಟು ಬರುತ್ತಾ? ಅಕಸ್ಮಾತ್ ಬಂತು ಅಂತ ಇಟ್ಕೊಳಿ, ಏನ್ ಮಾಡಬೇಕು ಗೊತ್ತಾ?

ಈ ಕಾರಣಕ್ಕೆ ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗುತ್ತಿದೆಯೋ, ಅದನ್ನು ಆಯ್ಕೆ ಮಾಡಿಕೊಂಡು, ಆ ಬ್ಯಾಂಕ್ ನಲ್ಲಿ ಹೋಮ್ ಪಡೆಯುವುದು ಉತ್ತಮ. ಹಾಗಿದ್ದರೆ ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗುತ್ತದೆ ಎಂದು ತಿಳಿಯೋಣ..

ಹೋಮ್ ಲೋನ್ ಗೆ ಬ್ಯಾಂಕ್ ಆಫ್ ಇಂಡಿಯಾ (Bank Of India) ಉತ್ತಮವಾದ ಆಯ್ಕೆ ಎಂದು ಹೇಳಬಹುದು. ಈ ಬ್ಯಾಂಕ್ ನಲ್ಲಿ ನಿಮಗೆ ಹೋಮ್ ಲೋನ್ ಗೆ ಬಡ್ಡಿದರ ಶುರು ಆಗುವುದು 8.30% ಇಂದ ಆಗಿರುತ್ತದೆ.

ಬೇರೆ ಬ್ಯಾಂಕ್ ಗಳಲ್ಲಿ 8.35% ಇಂದ 8.65% ವರೆಗು ಹೋಮ್ ಲೋನ್ ಗೆ ಬಡ್ಡಿ ಶುರುವಾಗುತ್ತದೆ. ಇಷ್ಟು ಕಡಿಮೆ ಬಡ್ಡಿದರವು ಸಾಲಕ್ಕೆ ಅರ್ಜಿ ಹಾಕುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಹಾಗೂ ಅವರ ದಾಖಲೆಗಳ ಮೇಲೆ ನಿರ್ಧಾರ ಆಗಲಿದ್ದು, ಹೆಚ್ಚಿನ ಒತ್ತಡ ಅನ್ನಿಸದೇ ನೀವು ಹೋಮ್ ಲೋನ್ ಪಾವತಿ ಮಾಡಿಕೊಂಡು ಹೋಗಬಹುದು.

ಕೆನರಾ ಬ್ಯಾಂಕ್ ನಲ್ಲಿ 3 ವರ್ಷಕ್ಕೆ ಅಂತ 1 ಲಕ್ಷ ಇಟ್ರೆ ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಡೀಟೇಲ್ಸ್

This is the bank where you can get a home loan at very low interest Rate