ಕೆನರಾ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಸಿಗಲಿದೆ ಈ ಲೋನ್! ಇಲ್ಲಿದೆ ಡೀಟೇಲ್ಸ್
Canara Bank Loan : ಈ ಪ್ರಪಂಚದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ. ಹೇಗಿದ್ರೂ ಕೂಡ ಕೆಲವೊಂದು ಪರಿಸ್ಥಿತಿಗಳಲ್ಲಿ ಹಣದ ಅಗತ್ಯತೆ ಸಾಕಷ್ಟು ಪ್ರಮುಖವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಯಾವುದಾದರೂ ಆಸ್ಪತ್ರೆಗೆ ಆರೋಗ್ಯ ಸಮಸ್ಯೆ ಎಂದು ಸೇರಿದಾಗ ಹಣದ ಅಗತ್ಯತೆ ಸಾಕಷ್ಟು ಪ್ರಮುಖವಾಗಿರುತ್ತದೆ.
ಒಂದು ವೇಳೆ ನೀವು ಕೆನರಾ ಬ್ಯಾಂಕಿನ ಗ್ರಾಹಕರಾಗಿದ್ದರೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಒಂದು ಒಳ್ಳೆಯ ಯೋಜನೆ ಪರಿಚಯಿಸಲು ಹೊರಟಿದ್ದೇವೆ. ಹೌದು, ಕೆನರಾ ಹೀಲ್ ಎನ್ನುವಂತಹ ಆರೋಗ್ಯ ಸಾಲದ (Health Loan) ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಮಾತನಾಡಲು ಹೊರಟಿದ್ದೇವೆ, ಇದು ನಿಮಗೆ ಆರೋಗ್ಯ ಸಾಲದ ವಿಚಾರದಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ.
ಆಧಾರ್ ಕಾರ್ಡ್ ಇದ್ರೆ ಸಾಕು, ಬೇರೆ ದಾಖಲೆ ಬೇಕಿಲ್ಲ! ಸಿಗುತ್ತೆ 50,000 ರೂಪಾಯಿ ಲೋನ್
ಕೆನರಾ ಬ್ಯಾಂಕ್ ಹೀಲ್ ಯೋಜನೆ!
ಒಂದು ವೇಳೆ ಆಸ್ಪತ್ರೆಗೆ ಸೇರಿಕೊಂಡಿದ್ದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಸ್ಪತ್ರೆಯ ಬಿಲ್ ಬಂದಿದ್ದರೆ, ಆ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ನ ಹೀಲ್ ಯೋಜನೆ ನಿಮ್ಮ ಸಹಾಯಕ್ಕೆ ಬರುತ್ತೆ. ಈ ಸಾಲ ಸೌಲಭ್ಯದಲ್ಲಿ ಬೇರೆ ಸಾಲಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕ ಬಡ್ಡಿ ದರ ಇರುತ್ತದೆ.
11.55 ರಿಂದ 12.30 ಪ್ರತಿಶತದವರಿಗೆ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ನಿಮ್ಮ ತುರ್ತು ಪರಿಸ್ಥಿತಿಯಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ವೈದ್ಯಕೀಯ ಪರಿಹಾರವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಖರ್ಚು ಮಿತಿಯನ್ನು ಮೀರಿದಲ್ಲಿ ಈ ಯೋಜನೆಯ ಮೂಲಕ ಸಾಲವನ್ನು ಪಡೆದುಕೊಂಡು ಖರ್ಚುಗಳನ್ನು ನಿಯಂತ್ರಿಸಿ ಕೊಳ್ಳಬಹುದಾಗಿದೆ.
ಈ ಮೇಕೆ ತಳಿ ಸಾಕಾಣಿಕೆ ಆರಂಭಿಸಿ ಸಾಕು, 50 ಲಕ್ಷ ರೂಪಾಯಿಗಳವರೆಗೆ ಹಣ ಗಳಿಸಿ
ಕೇವಲ ಕೆನರಾ ಹೀಲ್ ಯೋಜನೆ ಮಾತ್ರವಲ್ಲದೆ ಇದರ ಜೊತೆಗೆ ಕೆನರಾ ಬ್ಯಾಂಕ್, ಮಹಿಳೆಯರಿಗೆ ಕೆನರಾ ಏಂಜಲ್ ಖಾತೆಯನ್ನು ಕೂಡ ಪರಿಚಯಿಸಿದ್ದು ಇದರ ಮೂಲಕ ಕ್ಯಾನ್ಸರ್ ಕೇರ್ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ.
ಇಲ್ಲಿ ನೀವು ಆನ್ಲೈನ್ ಸಾಲಗಳು ಹಾಗೂ ಫಿಕ್ಸೆಡ್ ಡೆಪಾಸಿಟ್ (Fixed Deposit) ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇನ್ನು ಇದನ್ನು ಅಪ್ಗ್ರೇಡ್ ಮಾಡಿಕೊಳ್ಳುವ ಮೂಲಕ ಇನ್ನಷ್ಟು ಹೆಚ್ಚಿನ ವಿಶೇಷತೆಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.
ಯಾವುದೇ ಅಡಮಾನ ಬೇಕಿಲ್ಲ, ಈ ಯೋಜನೆ ಅಡಿ ಸಿಗುತ್ತೆ 10 ಲಕ್ಷ ರೂಪಾಯಿ ಸಾಲ!
ಒಟ್ಟಾರೆಯಾಗಿ ಕಷ್ಟದ ಸಂದರ್ಭದಲ್ಲಿ ಕೆನರಾ ಹೀಲ್ ಯೋಜನೆ ಹಾಗೂ ಕೆನರ ಏಂಜಲ್ ಯೋಜನೆಯ ಎರಡು ಕೂಡ ಆರ್ಥಿಕ ನೆರವನ್ನು ನೀಡುವುದಕ್ಕೆ ಗ್ರಾಹಕರ ಸಹಾಯಕ್ಕೆ ಬರಲಿದೆ. ಈ ಮೂಲಕ ಕೆನರಾ ಗ್ರಾಹಕರು ತಮಗೆ ಬೇಕಾಗಿರುವಂತಹ ಆರ್ಥಿಕ ಸಹಾಯವನ್ನು ಈ ಯೋಜನೆಯ ಸಾಲ ಸೌಲಭ್ಯದ ಮೂಲಕ ಪಡೆದುಕೊಳ್ಳಬಹುದಾಗಿದೆ.
ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಭಾರತದ ಅತ್ಯಂತ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಕೆನರಾ ಬ್ಯಾಂಕ್ ಈ ಮೂಲಕ ಮಾಡುತ್ತಿದೆ. ಒಂದು ವೇಳೆ ನೀವು ಕೂಡ ಕೆನರಾ ಬ್ಯಾಂಕಿನ ಗ್ರಾಹಕರಾಗಿದ್ದರೆ ಕೆನರಾ ಬ್ಯಾಂಕ್ ಪರಿಚಯಿಸಿರುವಂತಹ ಪಡೆದುಕೊಳ್ಳುವ ಮೂಲಕ ನೀವು ಕೂಡ ನಿಮ್ಮ ಆರ್ಥಿಕ ಅಗತ್ಯತೆಗಳನ್ನು ಈ ನಿಟ್ಟಿನಲ್ಲಿ ಪೂರೈಸಿಕೊಳ್ಳಬಹುದಾಗಿದೆ.
ಅದರಲ್ಲೂ ವಿಶೇಷವಾಗಿ ಕೆನರ ಹೀಲ್ ಯೋಜನೆಯ ಮೂಲಕ ಆರೋಗ್ಯ ಸಾಲದ ಅಗತ್ಯತೆ ಇರುವ ಸಂದರ್ಭದಲ್ಲಿ ಅಗತ್ಯ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.
ಇದೊಂದು ದಾಖಲೆ ಇದ್ದರೆ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗೆ ಸಾಲ!
This loan will be available to customers with Canara Bank account