50 ಇಂಚಿನ ಸ್ಮಾರ್ಟ್ ಟಿವಿ ಕೇವಲ ₹25 ಸಾವಿರಕ್ಕೆ ಖರೀದಿಸಿ! ಬಂಪರ್ ಆಫರ್ ಅಂದ್ರೆ ಇದು
ಸಿಮಿತ ಬಜೆಟ್‌ನಲ್ಲಿ ದೊಡ್ಡ ಸ್ಕ್ರೀನ್ ಟಿವಿ ಬೇಕಾ? ಈ ಮೂರು 4K ಟಿವಿಗಳಲ್ಲಿ ಇದೆ ಡಾಲ್ಬಿ ಆಡಿಯೋ, ₹25 ಸಾವಿರಕ್ಕಿಂತ ಕಡಿಮೆ ದರದಲ್ಲಿ 50 ಇಂಚಿನ ಟಾಪ್ 3 ಟಿವಿ! ಈಗ ಮನೆಯಲ್ಲೇ ಥಿಯೇಟರ್ ಅನುಭವ

- 50 ಇಂಚಿನ 4K Ultra HD ಸ್ಮಾರ್ಟ್ ಟಿವಿಗಳು ಈಗ ಕಡಿಮೆ ದರದಲ್ಲಿ ಲಭ್ಯ
- ಡಾಲ್ಬಿ ಆಡಿಯೋ, Google TV, Miracast ಮುಂತಾದ ಫೀಚರ್ಸ್ ಜೊತೆಗೆ
- Amazon ನಲ್ಲಿ ₹24,999 ರೂಪಾಯಿಯಲ್ಲಿ ಉತ್ತಮ ಆಯ್ಕೆಗಳಿವೆ
ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳಿಗೆ ಬದಲಾಗಿ ದೊಡ್ಡ ಸ್ಕ್ರೀನ್‌ನಲ್ಲಿ ಮನರಂಜನೆ ಪಡೆಯಲು ಯೋಚಿಸುತ್ತಿದ್ದೀರಾ? ನಿಮಗಾಗಿ ಇಲ್ಲಿದೆ ಮೂರು ಅತ್ಯುತ್ತಮ 50 ಇಂಚಿನ ಸ್ಮಾರ್ಟ್ ಟಿವಿಗಳ (Smart TV) ಪರಿಚಯ – ಎಲ್ಲವೂ ₹25,000 ರೂಪಾಯಿಗೆ ಒಳಗಿನವೆಯೇ. ಖರ್ಚು ಕಡಿಮೆ ಆದರೆ ಅನುಭವ ಭರ್ಜರಿ!
ಮೊದಲು VW Pro Series 4K QLED TV ಬಗ್ಗೆ ಮಾತಾಡೋಣ. ₹24,999 (Amazon India) ರೇಂಜ್ ನಲ್ಲಿ ಲಭ್ಯವಿರುವ ಈ ಟಿವಿ 4K HD Ready resolution (60Hz refresh rate) ನೀಡುತ್ತದೆ.
ಡಾಲ್ಬಿ ಆಡಿಯೋ (Dolby Audio) ಜೊತೆ 48W ಸೌಂಡ್ ಔಟ್‌ಪುಟ್ ಇದಕ್ಕೆ ಭರ್ಜರಿ ಸ್ಪಷ್ಟತೆ ನೀಡುತ್ತದೆ. ಕನೆಕ್ಟಿವಿಟಿಗೆ 3 HDMI, 2 USB, Dual Band WiFi ಮತ್ತು Bluetooth 5.1 ಬೆಂಬಲ ನೀಡಲಾಗಿದೆ.
ಇದನ್ನೂ ಓದಿ: ಬಜೆಟ್ ಬೆಲೆಗೆ ಹೈ-ಫೀಚರ್ಸ್ ಇರೋ ವಿವೋ ಟಿ4 ಅಲ್ಟ್ರಾ 5ಜಿ ಫೋನ್ ಬಿಡುಗಡೆ
ಮತ್ತೊಂದು ಆಪ್ಷನ್ ಎಂದರೆ Wobble UD Series 50-inch Smart LED TV. ಈದು ₹23,999 ದರದಲ್ಲಿ Amazon ನಲ್ಲಿ ಲಭ್ಯವಿದ್ದು, 4K Ultra HD ಡಿಸ್ಪ್ಲೇ (60Hz) ಹೊಂದಿದೆ.
ಸೌಂಡ್ ಸಿಸ್ಟಂ 20W ಡಾಲ್ಬಿ ಔಡಿಯೋ ಬೆಂಬಲ ನೀಡುತ್ತದೆ. Miracast, Chromecast built-in, 2GB RAM, 16GB storage – ಈ ಎಲ್ಲವೂ ಈ ಬಜೆಟ್ ಟಿವಿಯಲ್ಲಿ ಸಿಗುತ್ತವೆ.
ಹೆಚ್ಚಿನ ಫೀಚರ್ ಹುಡುಕುವವರಿಗೆ Foxsky Frameless Series 4K TV ಸೂಕ್ತ ಆಯ್ಕೆ. ₹24,499 ಕ್ಕೆ HDR10+ ಮತ್ತು DLG 120Hz Refresh Rate ಹೊಂದಿರುವ ಡಿಸ್ಪ್ಲೇ ನೀಡುತ್ತದೆ.
ಇದರಲ್ಲಿರುವ Dolby Audio ಮತ್ತು DTS Virtual: X ತಂತ್ರಜ್ಞಾನ ನಿಮಗೆ ಸರ್ರೌಂಡಿಂಗ್ ಆಡಿಯೋ ಅನುಭವ ನೀಡುತ್ತದೆ. 30W ಸೌಂಡ್ ಔಟ್‌ಪುಟ್ ಜೊತೆಗೆ 2 HDMI, 2 USB ಪೋರ್ಟ್‌ಗಳಿವೆ.
ಇದನ್ನೂ ಓದಿ: ಈ 3 ತಪ್ಪುಗಳು ಮಾಡಿದ್ರೆ ಲೈಫ್‌ನಲ್ಲೇ ನಿಮಗೆ ಬ್ಯಾಂಕುಗಳು ಲೋನ್ ಕೊಡಲ್ಲ!
ಈ ಎಲ್ಲಾ ಟಿವಿಗಳು Amazon India ನಲ್ಲಿ ಬಜೆಟ್ (budget) ದರದಲ್ಲಿ ಲಭ್ಯವಿದ್ದು, ಮನೆಯಲ್ಲೇ ಚಿತ್ರಮಂದಿರದ ಆಡಿಯೋ-ವೀಡಿಯೋ ಅನುಭವ ನೀಡುತ್ತವೆ. ಈಗ ಟಿವಿ ಆಯ್ಕೆ ಮಾಡೋದು ನಿಮ್ಮ ಕೈಯಲ್ಲಿದೆ!
Top 3 50-inch Smart TVs under ₹25,000
Cinema-like Dolby audio experience at home with 4K display and smart features




