ಬೆಂಗಳೂರು ನಗರದಲ್ಲಿ ಎಷ್ಟಿದೆ ಮನೆ ಬಾಡಿಗೆ ಬೆಲೆ? ಧಿಡೀರ್ 30% ಹೆಚ್ಚಳ ಏಕೆ? ಇಲ್ಲಿದೆ ವರದಿ

ಸ್ವಂತ ಮನೆ ಖರೀದಿಯಂತೂ (own house purchase) ಬಹಳ ಕಷ್ಟದ ವಿಚಾರ, ಅಂತದ್ರಲ್ಲಿ ಇನ್ಮುಂದೆ ಬಾಡಿಗೆ ಮನೆ (rented house) ಯಲ್ಲಿ ಇರುವುದು ಕೂಡ ಚಿಂತೆ ಪಡುವ ಪರಿಸ್ಥಿತಿ ಎದುರಾಗಿದೆ

ಸ್ವಂತ ಮನೆ ಖರೀದಿಯಂತೂ (own house purchase) ಬಹಳ ಕಷ್ಟದ ವಿಚಾರ, ಅಂತದ್ರಲ್ಲಿ ಇನ್ಮುಂದೆ ಬಾಡಿಗೆ ಮನೆ (rented house) ಯಲ್ಲಿ ಇರುವುದು ಕೂಡ ಚಿಂತೆ ಪಡುವ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು ನಗರ (Bengaluru City) ಪಕ್ಕ ಮುಂಬೈ (Mumbai) ನಂತೆ ಆಗಿದೆ, ಬೆಂಗಳೂರು ನಗರದಲ್ಲಿ ಮನೆ ಮಾಲೀಕರು ಏಕಾಏಕಿ 7% ನಿಂದ 30% ವರೆಗೆ ಬಾಡಿಗೆ ದರವನ್ನು ಹೆಚ್ಚಳ (owners increased rent amount) ಮಾಡಿದ್ದಾರೆ.

ಈ ಬಗ್ಗೆ ನೋ ಬ್ರೋಕರ್ ರಿಯಲ್ ಎಸ್ಟೇಟ್ – 2023 (no broker real estate 2023) ವರದಿ ಮಾಡಿದೆ!

ಬೆಂಗಳೂರು ನಗರದಲ್ಲಿ ಎಷ್ಟಿದೆ ಮನೆ ಬಾಡಿಗೆ ಬೆಲೆ? ಧಿಡೀರ್ 30% ಹೆಚ್ಚಳ ಏಕೆ? ಇಲ್ಲಿದೆ ವರದಿ - Kannada News

ವರದಿಯ ಪ್ರಕಾರ ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಾಡಿಗೆದರ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ನೋ ಬ್ರೋಕರ್ ರಿಯಲ್ ಎಸ್ಟೇಟ್ 2023 ದೃಢೀಕರಿಸಿರುವ ವರದಿಯ ಪ್ರಕಾರ ಮುಂಬೈನಂತೆಯೇ ಬೆಂಗಳೂರಿನಲ್ಲಿಯೂ ಕೂಡ ಏಳು ಪರ್ಸೆಂಟ್ ಇಂದ 30% ವರೆಗೆ ಬಾಡಿಗೆ ದರವನ್ನ ಹೆಚ್ಚಳ ಮಾಡಿದ್ದಾರೆ ಮನೆಯ ಮಾಲೀಕರು.

ರದ್ದಾಗುತ್ತ 10 ವರ್ಷದ ಹಳೆಯ ಆಧಾರ್ ಕಾರ್ಡ್! ರಾತ್ರೋ-ರಾತ್ರಿ ಏನಿದು ಹೊಸ ಆದೇಶ

ನಗರದಲ್ಲಿ ಸುಮಾರು 52% ನಷ್ಟು ಮಾಲೀಕರು ಬಾಡಿಗೆ ಮನೆಯಿಂದಲೇ ತಮ್ಮ ಆದಾಯವನ್ನು (earnings from rented house) ಗಳಿಸಿಕೊಳ್ಳುತ್ತಾರೆ. ಈಗ ಬಾಡಿಗೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ 42% ನಷ್ಟು ನಗರವಾಸಿಗಳು ಅಥವಾ ಬಾಡಿಗೆದಾರರು ಸ್ವಂತ ಖರೀದಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Covid-19 ಸಾಂಕ್ರಾಮಿಕ ಸಮಯದಲ್ಲಿ ಬೆಂಗಳೂರಿನಲ್ಲಿ ಬಾಡಿಗೆದರ ಬಹಳ ಕಡಿಮೆ ಇತ್ತು ನಂತರ ಮತ್ತೆ ಬೆಂಗಳೂರಿಗೆ ಜನರು ವಲಸೆ ಬರಲು ಆರಂಭಿಸಿದ್ದರಿಂದ ಸ್ಥಳಾವಕಾಶ ಅಷ್ಟೇ ಇರುತ್ತದೆ. ಆದರೆ ಜನರಿಗೆ ಉಳಿದುಕೊಳ್ಳಲು ಮನೆ ಬೇಕು ಇದಕ್ಕಾಗಿ ಮಾಲೀಕರು ಬಾಡಿಗೆ ದರವನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದೆ.

ಜೊತೆಗೆ 2023ರಲ್ಲಿ ಆಸ್ತಿ ಖರೀದಿಗಾಗಿ ರಿಯಲ್ ಎಸ್ಟೇಟ್ (real estate) ಅವಲಂಬನೆ ಕೂಡ ಏಕಾಏಕಿ ಜಾಸ್ತಿಯಾಗಿದೆ. ಬೆಂಗಳೂರು ರಿಯಲ್ ಎಸ್ಟೇಟ್ ಕೇಂದ್ರ ಬಿಂದುವಾಗಿ ಹೊರಹೊಮ್ಮುತ್ತಿದೆ.

2 ದಿನ ಕೊಂಚ ರಿಲೀಫ್ ನೀಡಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ ಆಗೋಯ್ತು! ಇಲ್ಲಿದೆ ಫುಲ್ ಡೀಟೇಲ್ಸ್

ಈ ಪ್ರದೇಶಗಳಲ್ಲಿ ಮನೆ ಬಾಡಿಗೆ ಹೆಚ್ಚು!

Rent Houseಬೆಂಗಳೂರಿನ ವರ್ತೂರು, ವೈಟ್ ಫೀಲ್ಡ್, ಹರಳೂರು, ಚಿಕ್ಕನ ಹಳ್ಳಿ ಮೊದಲಾದ ಸ್ಥಳದಲ್ಲಿ ಇಂಡಸ್ಟ್ರಿಯಲ್ ಏರಿಯಾ (industrial area) ಆಗಿರುವ ಕಾರಣಕ್ಕೆ ಹಾಗೂ ದೊಡ್ಡ ದೊಡ್ಡ ಕಂಪನಿಗಳು ಇರುವ ಕಾರಣಕ್ಕೆ ಬಾಡಿಗೆ ಹೆಚ್ಚಾಗಿದೆ.

ಇನ್ನು ಬೆಂಗಳೂರಿನ ಉತ್ತರ ಭಾಗ (Bengaluru North side) ದಲ್ಲಿ ಆಸ್ತಿ ಖರೀದಿ (Property Purchase) ಮಾಡುವವರ ಸಂಖ್ಯೆಯು ಹೆಚ್ಚು ಆದರೆ ಬೆಂಗಳೂರಿನ ದಕ್ಷಿಣ ಭಾಗ (Bengaluru South side) ದಲ್ಲಿ ಸ್ವಲ್ಪ ಹಳೆಯ ಪ್ರದೇಶ ಆಗಿದ್ದರಿಂದ ಹಾಗೂ ಇಲ್ಲಿ ಯಾವುದೇ ಇಂಡಸ್ಟ್ರಿಗಳು ಇಲ್ಲದೆ ಇರುವ ಕಾರಣದಿಂದ ಆಸ್ತಿ ಖರೀದಿ (Land Purchase) ಮಾಡುವವರ ಸಂಖ್ಯೆ ಕಡಿಮೆ ಇದೆ ಎನ್ನುವುದು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರು ತಕ್ಷಣ ಬ್ಯಾಂಕ್ ಗೆ ಹೋಗಿ ಸಹಿ ಮಾಡಿ! ಹೊಸ ನಿಯಮ

55% ನಷ್ಟು ಜನರು ವಾಸ್ತು ನೋಡಿ ಮನೆ ಖರೀದಿ ಮಾಡುತ್ತಾರೆ ಅಥವಾ ಬಾಡಿಗೆ ಮನೆಗೆ ಹೋಗುತ್ತಾರೆ, ಈ ಹಿನ್ನೆಲೆಯಲ್ಲಿ ಸರಿಯಾದ ವಾಸ್ತು ಪ್ರಕಾರ ಮನೆ ಮಾಡಿಕೊಂಡಿರುವ ಮನೆ ಮಾಲೀಕರು ಸುಲಭವಾಗಿಯೇ ದರ ಹೆಚ್ಚಳ ಮಾಡಿದ್ದಾರೆ ಎನ್ನಬಹುದು.

ಒಟ್ಟಿನಲ್ಲಿ ಬೆಂಗಳೂರು ಎನ್ನುವ ಮಹಾ ಸಾಗರಕ್ಕೆ ಬಂದು ಸೇರುವ ಜನರ ಸಂಖ್ಯೆಯು ಜಾಸ್ತಿಯಾಗಿದೆ, ಅದರ ಜೊತೆಗೆ ಏರುತ್ತಿರುವ ಬಾಡಿಗೆ ಮನೆ ದರದಿಂದಾಗಿ ಸಾಕಷ್ಟು ಜನರಿಗೆ ಆರ್ಥಿಕ ಸಮಸ್ಯೆ ಉಂಟಾಗಿದೆ.

What is the house rent price in Bangalore city

Follow us On

FaceBook Google News

What is the house rent price in Bangalore city