Car Brakes Fail : ಸಾಮಾನ್ಯವಾಗಿ ಭಾರತದ ರಸ್ತೆಗಳಲ್ಲಿ ಕಾರು ಚಲಾಯಿಸುವುದು ಒಮ್ಮೊಮ್ಮೆ ಸವಾಲಿನ ವಿಷಯವೇ ಸರಿ. ಹೌದು ಜನನಿಬಿಡ ರಸ್ತೆಯಾಗಿರುವ ನಮ್ಮ ದೇಶದಲ್ಲಿ ವಾಹನಗಳ ಸಂಖ್ಯೆ ಕೂಡ ಸಾಕಷ್ಟು ಹೆಚ್ಚಿದೆ.
ಈ ಸಾರ್ವಜನಿಕ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಚಾಲಕರಿಗೆ ಕೂಡ ವಾಹನ ನಿಯಂತ್ರಣ ಒಮ್ಮೊಮ್ಮೆ ಸಮಸ್ಯೆಯಾಗಿ ಬಿಡುತ್ತದೆ.
ಹೀಗಾಗಿ ಅಚಾನಕ್ ಆಗಿ ಬ್ರೇಕ್ ಫೇಲ್ ಆದ ಸಂದರ್ಭದಲ್ಲಿ ಹ್ಯಾಂಡ್ ಬ್ರೇಕ್ (Hand Brake) ಹೇಗೆ ಬಳಸಬೇಕು ಮತ್ತು ಅದನ್ನು ಬಳಸುವ ಸರಿಯಾದ ಕ್ರಮ ಹೇಗೆ ಎಂದು ತಿಳಿಯೋಣ
ಸಾಮಾನ್ಯವಾಗಿ ಕಾರ್ ಬ್ರೇಕ್ ವೈಫಲ್ಯದ (Car Brakes Fail) ಸಂದರ್ಭದಲ್ಲಿ ಹಲವಾರು ಜನ ಒಮ್ಮೆಲೇ ಭಯಪಡುತ್ತಾರೆ ಆದರೆ ಈ ಸಮಯದಲ್ಲಿ ನೀವು ಭಯಪಡುವ ಯಾವುದೇ ಅಗತ್ಯವಿಲ್ಲ, ನಿಮ್ಮ ಕಾರಿನ ಹ್ಯಾಂಡ್‌ಬ್ರೇಕ್ ನಿಮ್ಮೆಲ್ಲರ ಜೀವವನ್ನು ಉಳಿಸಬಹುದು. ಆದರೆ ಇದರ ಸರಿಯಾದ ಪ್ರಯೋಗ ನೀವು ಮಾಡಬೇಕಷ್ಟೆ.
ಮಾರುಕಟ್ಟೆಗೆ ಬಂತು 90ರ ದಶಕದ ರೆಟ್ರೋ ಲುಕ್ ಇರೋ ಎಲೆಕ್ಟ್ರಿಕ್ ಸ್ಕೂಟರ್! ಅದೂ ಕಡಿಮೆ ಬೆಲೆಗೆ
ತುರ್ತು ಪರಿಸ್ಥಿತಿಯಲ್ಲಿ, ಒಮ್ಮೊಮ್ಮೆ ಕಾರಿನ ಬ್ರೇಕ್ ಕೈಕೊಟ್ಟಾಗ ಆದ್ದರಿಂದ ಹ್ಯಾಂಡ್‌ಬ್ರೇಕ್ ಕಾರಿನಲ್ಲಿ ಕುಳಿತವರ ಜೀವವನ್ನು ಉಳಿಸುತ್ತದೆ. ಈ ರೀತಿಯಾಗಿ ಹ್ಯಾಂಡ್‌ಬ್ರೇಕ್ ಕಾರಿನ ಅತ್ಯಂತ ಉಪಯುಕ್ತ ಸಾಧನವಾಗಿದೆ. ಹ್ಯಾಂಡ್‌ಬ್ರೇಕ್ ಅನ್ನು ಸರಿಯಾಗಿ ಬಳಸಿದರೆ, ಕಾರು ಸ್ಕಿಡ್ಡಿಂಗ್, ರೋಲಿಂಗ್ ಮತ್ತು ಪಲ್ಟಿಯಾಗುವುದನ್ನು ಖಂಡಿತವಾಗಿ ತಡೆಯಬಹುದು.
ಸಾಮಾನ್ಯವಾಗಿ ಈ ಹ್ಯಾಂಡ್‌ಬ್ರೇಕ್ ಅನ್ನುಎರಡು ರೀತಿಯಲ್ಲಿ ಬಳಸಲಾಗುತ್ತದೆ. ಮೊದಲು ಕಾರನ್ನು ಪಾರ್ಕಿಂಗ್ ಮಾಡುವಾಗ ಮತ್ತು ಎರಡನೆಯದು ತುರ್ತು ಪರಿಸ್ಥಿತಿಯಲ್ಲಿ ಬ್ರೇಕ್ ವೈಫಲ್ಯದ ನಂತರ ಇದ್ದಕ್ಕಿದ್ದಂತೆ ಕಾರನ್ನು ನಿಲ್ಲಿಸಲು ಬಳಸಲಾಗುತ್ತದೆ.
ನೀವು ಹ್ಯಾಂಡ್‌ಬ್ರೇಕ್ ಬಳಸುವ ಮುನ್ನ ಅದರ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರಬೇಕು. ಅಗತ್ಯವಿದ್ದಾಗ ಮಾತ್ರ ಹ್ಯಾಂಡ್ ಬ್ರೇಕ್ ಬಳಸಬೇಕು. ಹೆಚ್ಚಿನ ವೇಗದ ಕಾರಿನಲ್ಲಿ ಹ್ಯಾಂಡ್‌ಬ್ರೇಕ್ ಅನ್ನು ಎಂದಿಗೂ ಬಳಸಬಾರದು.
80Km ಮೈಲೇಜ್ ರೇಂಜ್ ನೀಡುವ ಸ್ಟೈಲಿಶ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಅಗ್ಗದ ಬೆಲೆಗೆ ಮಾರಾಟ
ಹೀಗೆ ಮಾಡುವುದರಿಂದ ಕಾರಿನ ಹಿಂಬದಿಯ ಚಕ್ರಗಳು ಗಟ್ಟಿಯಾಗಿ ಲಾಕ್ ಆಗುತ್ತವೆ ಮತ್ತು ಕಾರನ್ನು ನಿಯಂತ್ರಿಸಲಾಗುವುದಿಲ್ಲ. ಹೀಗೆ ಹಲವು ಬಾರಿ ಮಾಡುವುದರಿಂದ ಕಾರು ಪಲ್ಟಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ, ಹಾಗಾಗಿ ಕಾರಿನ ವೇಗ ಕಡಿಮೆಯಾದ ನಂತರವೇ ಹ್ಯಾಂಡ್ ಬ್ರೇಕ್ ಬಳಸಬೇಕು.
120Km ರೇಂಜ್ ನೀಡಲಿರುವ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಗೆ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್
ವೇಗವಾಗಿ ಓಡುತ್ತಿದ್ದ ಕಾರಿನ ವೇಗ ಇದ್ದಕಿದ್ದಂತೆ ಬ್ರೇಕ್ ಫೇಲ್ ಆದ ಸಮಯದಲ್ಲಿ ಮೊದಲು ಗೇರ್ ಶಿಫ್ಟ್ ಮೂಲಕ ವೇಗ ಕಡಿಮೆ ಮಾಡಲು ಪ್ರಯತ್ನಿಸಿ ನಂತರ ಕಾರಿನ ವೇಗ ಕಡಿಮೆ ಆದ ಬಳಿಕವೇ ಹ್ಯಾಂಡ್ ಬ್ರೇಕ್ ಉಪಯೋಗಿಸಲು ಟ್ರೈ ಮಾಡಿ.
What to do when a car brake fails, Follow these tips to stop the car
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.