ತಲೆ ಕಡಿದು ಆ ತಲೆಯೊಂದಿಗೆ ಠಾಣೆಗೆ ಹೋದ !
ಅಸ್ಸಾಂನಲ್ಲಿ ವ್ಯಕ್ತಿಯೊಬ್ಬ ದುಷ್ಕೃತ್ಯ ಎಸಗಿದ್ದಾನೆ. ಸಹ ಗ್ರಾಮಸ್ಥರೊಬ್ಬರ ತಲೆ ಕಡಿದ ಬಳಿಕ ತಲೆ ತೆಗೆದುಕೊಂಡು 25 ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಗುವಾಹಟಿ: ಅಸ್ಸಾಂನಲ್ಲಿ ವ್ಯಕ್ತಿಯೊಬ್ಬ ದುಷ್ಕೃತ್ಯ ಎಸಗಿದ್ದಾನೆ. ಸಹ ಗ್ರಾಮಸ್ಥರೊಬ್ಬರ ತಲೆ ಕಡಿದ ಬಳಿಕ ತಲೆ ತೆಗೆದುಕೊಂಡು 25 ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸೋನಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಸ್ವಾತಂತ್ರ್ಯ ದಿನದಂದು ಸ್ಥಳೀಯವಾಗಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆದರೆ ಇಬ್ಬರು ಸ್ನೇಹಿತರು ಆ ಪಂದ್ಯದ ಮೇಲೆ ಹಣ ಮಿಲಾಯಿಸಿದರು. ಪಂದ್ಯದಲ್ಲಿ ಸೋತವರು ವಿಜೇತರಿಗೆ 500 ರೂ ಕೊಡಬೇಕು. ಈ ವೇಳೆ ಬೆಟ್ ಗೆದ್ದ ವ್ಯಕ್ತಿ ತನಗೆ 500 ಕೊಡುವಂತೆ ಕೇಳಿದನು. ಆದರೆ ಇನ್ನೊಬ್ಬ ವ್ಯಕ್ತಿ ಹಣ ನೀಡಲು ನಿರಾಕರಿಸಿದ್ದಾನೆ.
ಆದರೆ ಪದೇ ಪದೇ ಬೆಟ್ಟಿಂಗ್ ಹಣ ಕೇಳಿದಾಗ ಕೋಪಗೊಂಡ ಆ ವ್ಯಕ್ತಿ ತನ್ನ ಬಳಿಯಿದ್ದ ಮಚ್ಚಿನಿಂದ ಹೇಮ್ರಾಮ್ ಎಂಬ ವ್ಯಕ್ತಿಯ ತಲೆಯನ್ನು ಕಡೆದಿದ್ದಾನೆ. ತಲೆಯೊಂದಿಗೆ 25 ಕಿಲೋಮೀಟರ್ ನಡೆದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
assam man beheads villager over rs 500 reaches police station with severed head
Follow us On
Google News |