ಸ್ಟೀಲ್ ಕಾರ್ಖಾನೆಯಲ್ಲಿ ನಡೆದ ಘರ್ಷಣೆ: 19 ಪೊಲೀಸರಿಗೆ ಗಾಯ !

ಸ್ಟೀಲ್ ಕಾರ್ಖಾನೆಯಲ್ಲಿ ನಡೆದ ಘರ್ಷಣೆಯಲ್ಲಿ 19 ಪೊಲೀಸರು ಗಾಯಗೊಂಡಿದ್ದಾರೆ. 12ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮುಂಬೈ: ಸ್ಟೀಲ್ ಕಾರ್ಖಾನೆಯಲ್ಲಿ ನಡೆದ ಘರ್ಷಣೆಯಲ್ಲಿ 19 ಪೊಲೀಸರು ಗಾಯಗೊಂಡಿದ್ದಾರೆ. 12ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಬೋಯಿಸರ್ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ಸ್ಟೀಲ್ ಕಾರ್ಖಾನೆಯ ನೌಕರರು ಶನಿವಾರ ಮುಷ್ಕರ ನಡೆಸಿದರು. ಸುಮಾರು ನೂರು ಮಂದಿ ಕಾರ್ಮಿಕ ಸಂಘದ ಸದಸ್ಯರು ಕಾರ್ಖಾನೆಯೊಳಗೆ ನುಸುಳಿದರು. ಈ ವೇಳೆ ಕೆಲ ನೌಕರರ ಮೇಲೆ ಹಲ್ಲೆ ನಡೆದಿದೆ.

ಸ್ಟೀಲ್ ಕಾರ್ಖಾನೆಯಲ್ಲಿ ನಡೆದ ಘರ್ಷಣೆ: 19 ಪೊಲೀಸರಿಗೆ ಗಾಯ !

ಈ ವೇಳೆ ಸ್ಟೀಲ್ ಕಾರ್ಖಾನೆ ಆವರಣದಲ್ಲಿ ಸಂಚಲನ ಉಂಟಾಗಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಅಲ್ಲಿಗೆ ಧಾವಿಸಿದರು. ಉದ್ರಿಕ್ತ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಿದರು. ಘರ್ಷಣೆಯಲ್ಲಿ 19 ಪೊಲೀಸರು ಗಾಯಗೊಂಡಿದ್ದಾರೆ. 12ಕ್ಕೂ ಹೆಚ್ಚು ಪೊಲೀಸ್ ವಾಹನಗಳ ಕನ್ನಡಿ ಒಡೆದು ಹಾಕಲಾಗಿದೆ.

ಇದೇ ವೇಳೆ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಸ್ಟೀಲ್ ಸ್ಥಾವರ ಮತ್ತು ಟ್ರೇಡ್ ಯೂನಿಯನ್ ನಡುವಿನ ದೀರ್ಘಕಾಲದ ವಿವಾದವೇ ಘಟನೆಗೆ ಕಾರಣ ಎಂದು ಪೊಲೀಸ್ ಅಧಿಕಾರಿ ಸಚಿನ್ ನಾವಡ್ಕರ್ ಹೇಳಿದ್ದಾರೆ.

ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.

19 Cops Injured During Clashes In Maharashtra Steel Factory 27 Arrested

Follow Us on : Google News | Facebook | Twitter | YouTube