Crime News
ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಭೀಕರ ರಸ್ತೆ ಅಪಘಾತ, ಆರು ಮಂದಿ ಸಾವು
ಲಕ್ನೋ: ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ಗೌರಿಬಜಾರ್-ರುದ್ರಾಪುರ ರಸ್ತೆಯ ಇಂದೂಪುರ ಕಾಳಿ ಮಂದಿರ ತಿರುವಿನ ಬಳಿ ಎಸ್‌ಯುವಿ ಬಸ್‌ಗೆ ಡಿಕ್ಕಿ ಹೊಡೆದು ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ರಾತ್ರಿ 11.30ರ ಸುಮಾರಿಗೆ ರುದ್ರಾಪುರ ರಸ್ತೆಯಲ್ಲಿ ಕಾಳಿ ದೇವಸ್ಥಾನ ತಲುಪಿದಾಗ ಎಸ್‌ಯುವಿ ತನ್ನ ಪ್ರಯಾಣಿಕರೊಂದಿಗೆ ಬರುತ್ತಿತ್ತು. ಮುಂದೆ ಬರುತ್ತಿದ್ದ ಬಸ್ ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ ಎಂದು ಡಿಯೋರಿಯಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಪತಿ ಮಿಶ್ರಾ ತಿಳಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಐವರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Six Killed Several Injured In Road Mishap In Deoria