ಹೋಂವರ್ಕ್ ಒತ್ತಡದಿಂದ 9ನೇ ತರಗತಿ ವಿದ್ಯಾರ್ಥಿ ಸಾವು
ಅತಿಯಾದ ಹೋಂವರ್ಕ್ ಮಾಡಲಾಗದೆ ಒತ್ತಡ ತಾಳಲಾರದೆ ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವರೂರು ಜಿಲ್ಲೆಯ ಪರಲಂನಲ್ಲಿ ನಡೆದಿದೆ.
ಚೆನ್ನೈ: ಅತಿಯಾದ ಹೋಂವರ್ಕ್ ಮಾಡಲಾಗದೆ ಒತ್ತಡ ತಾಳಲಾರದೆ ಒಂಬತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವರೂರು ಜಿಲ್ಲೆಯ ಪರಲಂನಲ್ಲಿ ನಡೆದಿದೆ. ಹೆಚ್ಚಿನ ಹೋಂವರ್ಕ್ ನೀಡಿದ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆ ಮಾಡುವಂತೆ ಬಾಲಕನ ಮನವಿಯನ್ನು ಬಾಲಕನ ಪೋಷಕರು ತಿರಸ್ಕರಿಸಿದ್ದು, ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಲಕನನ್ನು 9ನೇ ತರಗತಿ ವಿದ್ಯಾರ್ಥಿ ಸಂಜಯ್ ಎಂದು ಗುರುತಿಸಲಾಗಿದೆ. ಸಂಜಯ್ ಪರಾಲಂನಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ಹೆಚ್ಚಿನ ಹೋಂವರ್ಕ್ ನೀಡುತ್ತಾರೆ ಎಂದು ಬಾಲಕ ಹೇಳಿದ್ದರೂ ಆತನನ್ನು ಬೇರೆ ಶಾಲೆಗೆ ಸೇರಿಸಲು ಪೋಷಕರು ನಿರಾಕರಿಸಿದರು.
ತೀವ್ರ ಖಿನ್ನತೆಗೆ ಒಳಗಾದ ಸಂಜಯ್ ತನ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಬಾಲಕನನ್ನು ರಕ್ಷಿಸಲು ಕುಟುಂಬಸ್ಥರು ತಿರುವರೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜಯ್ ಮರುದಿನ ಮೃತಪಟ್ಟರು. ಪಾರಾಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.
stressed over homework class 9 boy sets himself ablaze
Follow us On
Google News |