Crime News: ಸ್ನೇಹಿತನ ಎದುರೇ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

Gang Rape: ಕಾಂಚಿಪುರಂನಲ್ಲಿ ಗೆಳೆಯನ ಎದುರೇ ತಮಿಳುನಾಡಿನ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ.

Crime News (Kannada News): ತಮಿಳುನಾಡಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆದಿದೆ. ಆಕೆಯ ಸ್ನೇಹಿತನ ಎದುರೇ ಐವರು ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಕಾಂಚಿಪುರಂನಲ್ಲಿ ನಡೆದಿದೆ. ಗುರುವಾರ ರಾತ್ರಿ ಏಳು ಗಂಟೆಗೆ ಇಬ್ಬರೂ ನಿರ್ಜನ ಸ್ಥಳದಲ್ಲಿ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಐವರು ಪುಂಡ ಪೋಕರಿಗಳು ಅವರನ್ನು ಸುತ್ತುವರಿದಿದ್ದಾರೆ.

ಯುವಕನಿಗೆ ಚಾಕುವಿನಿಂದ ಬೆದರಿಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ್ದಾರೆ. ಕೊನೆಗೊ ಹೇಗೋ ಇಬ್ಬರು ಆ ಗ್ಯಾಂಗ್ ನಿಂದ ತಪ್ಪಿಸಿಕೊಂಡು ಸಂಬಂಧಿಕರ ಮನೆಗೆ ಹೋಗಿದ್ದರು. ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಕತ್ತಲೆಯಾದ ಕಾರಣ ಗ್ಯಾಂಗ್ ಅನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಆದರೆ ವಿಮಲ್ ಎಂಬ ವ್ಯಕ್ತಿಯನ್ನು ಗಮನಿಸಿದ್ದೇನೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಪಡು ಗ್ರಾಮದಲ್ಲಿ ವಿಮಲ್ ನನ್ನು ಸುತ್ತುವರಿದು ಬಂಧಿಸಿದ್ದಾರೆ. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಇನ್ನೂ ನಾಲ್ವರನ್ನು ಬಂಧಿಸಲಾಗಿತ್ತು. ಮಣಿಕಂದನ್, ಶಿವಕುಮಾರ್, ವಿಘ್ನೇಶ್ ಮತ್ತು ತೆನ್ನಾರಸ್ ಬಂಧಿತರು. ಐವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

Tamil Nadu College Student Gang Raped In Front Of her Friend In Kanchipuram