Eat Ghee Daily: ಪ್ರತಿನಿತ್ಯ ತುಪ್ಪ ತಿಂದರೆ ತೂಕ ಹೆಚ್ಚುತ್ತದೆಯೇ? ಈ ಆರೋಗ್ಯ ಸಲಹೆಗಳು ತಿಳಿಯಿರಿ
Eat Ghee Daily: ತುಪ್ಪ ಅನೇಕ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿರುವ ವಸ್ತುವಾಗಿದೆ. ಆದರೆ ತುಪ್ಪದಲ್ಲಿ ಕೊಬ್ಬಿನಂಶವಿದ್ದು ಅದನ್ನು ಆಹಾರವಾಗಿ ಸೇವಿಸುವುದರಿಂದ ತೂಕ (weight) ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಅದರಿಂದಾಗಿ ಸ್ಥೂಲಕಾಯದ ಭಯದಿಂದ ಅನೇಕರು ತುಪ್ಪವನ್ನು ತಪ್ಪಿಸುತ್ತಿದ್ದಾರೆ. ತುಪ್ಪವು ನಿಜವಾಗಿಯೂ ನಿಮ್ಮ ತೂಕವನ್ನು ಹೆಚ್ಚಿಸುತ್ತದೆಯೇ?
Eat Ghee Daily: ತುಪ್ಪ ಅನೇಕ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿರುವ ವಸ್ತುವಾಗಿದೆ. ಆದರೆ ತುಪ್ಪದಲ್ಲಿ (Ghee) ಕೊಬ್ಬಿನಂಶವಿದ್ದು ಅದನ್ನು ಆಹಾರವಾಗಿ ಸೇವಿಸುವುದರಿಂದ ತೂಕ (weight) ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಅದರಿಂದಾಗಿ ಸ್ಥೂಲಕಾಯದ ಭಯದಿಂದ ಅನೇಕರು ತುಪ್ಪವನ್ನು ತಪ್ಪಿಸುತ್ತಿದ್ದಾರೆ. ತುಪ್ಪವು ನಿಜವಾಗಿಯೂ ನಿಮ್ಮ ತೂಕವನ್ನು ಹೆಚ್ಚಿಸುತ್ತದೆಯೇ? ಈ ಆರೋಗ್ಯ ಸಲಹೆಗಳನ್ನು (Health Tips) ತಿಳಿಯಿರಿ.
ಅದಕ್ಕೆ ಯಾವುದಾದರೂ ವೈಜ್ಞಾನಿಕ ಪುರಾವೆಗಳಿವೆಯೇ? ಇಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಅದೆಲ್ಲ ಮಿಥ್ಯೆ ಎಂದು ಅಲ್ಲಗಳೆಯುತ್ತಿದ್ದಾರೆ. ಆದರೆ, ಪ್ರತಿದಿನವೂ ತುಪ್ಪವನ್ನು ಮಿತವಾಗಿ ಸೇವಿಸುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ.
ತುಪ್ಪವನ್ನು ದಿನಕ್ಕೆ 1 ರಿಂದ 2 ಟೀ ಸ್ಪೂನ್‌ಗಳಿಗಿಂತ ಹೆಚ್ಚಿಲ್ಲದೆ ಸೇವಿಸಿದರೆ ತೂಕವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಸೂಚಿಸಲಾಗುತ್ತದೆ.
ದೈನಂದಿನ ಆಹಾರದಲ್ಲಿ ತುಪ್ಪವನ್ನು (Ghee) ಸೇರಿಸುವುದರಿಂದ ದಿನವಿಡೀ ಚಟುವಟಿಕೆಯಿಂದ ಮತ್ತು ಶಕ್ತಿಯುತವಾಗಿರಬಹುದು. ತುಪ್ಪವು ಶಕ್ತಿಯನ್ನು ಉತ್ಪಾದಿಸುವ ಪವರ್ ಹೌಸ್ ಇದ್ದಂತೆ. ಅದಕ್ಕಾಗಿಯೇ ಮಹಿಳೆಯರು ಗರ್ಭಾವಸ್ಥೆಯಲ್ಲಿ ತುಪ್ಪವನ್ನು ಸೇವಿಸಲು ಸಲಹೆ ನೀಡುತ್ತಾರೆ.
ಚರ್ಮದ ಆರೈಕೆ ಮಾಡಲು ತುಪ್ಪ
ತುಪ್ಪವು ಉತ್ಕರ್ಷಣ ನಿರೋಧಕಗಳು ಮತ್ತು ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಇದು ಚರ್ಮದಲ್ಲಿ ಮಾಯಿಶ್ಚರೈಸರ್ ಅನ್ನು ಲಾಕ್ ಮಾಡುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಉತ್ತಮ ಮುಖ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಲು ತುಪ್ಪವನ್ನು ಪ್ರತಿದಿನ ಆಹಾರದಲ್ಲಿ ಸೇರಿಸಬೇಕು.
ತುಪ್ಪ ದೇಹದಲ್ಲಿ ಹಾರ್ಮೋನ್ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ನಿಯಮಿತ ಪಿರಿಯಡ್ ನಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಆಹಾರದಲ್ಲಿ ತುಪ್ಪವನ್ನು ಸೇರಿಸುವ ಮೂಲಕ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.
ತುಪ್ಪದಿಂದ ಮೂಳೆ ಬಲ
ತುಪ್ಪದಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಇದು ದಂತಕ್ಷಯ ಮತ್ತು ಅಪಧಮನಿಕಾಠಿಣ್ಯವನ್ನು ತಡೆಗಟ್ಟಲು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.
Does eating ghee daily lead to weight gain, Know these health tips
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Does eating ghee daily lead to weight gain, Know these health tips