ಅಜೀರ್ಣ ನಿವಾರಣೆಗೆ ಈ ಸುಲಭ ಟಿಪ್ಸ್ ಪಾಲಿಸಿ
ಅಜೀರ್ಣ ನಿವಾರಣೆಗೆ ಈ ಸುಲಭ ಟಿಪ್ಸ್ ಪಾಲಿಸಿ
ತುಂಬಾನೇ ಇಷ್ಟ ಪಟ್ಟು ತಿನ್ನುವ ಅಥವಾ ಕುಡಿಯುವ ನಂತರ ಅಸಮಾಧಾನ ಮತ್ತು ಅಜೀರ್ಣ ಅಥವಾ ಅಸ್ವಸ್ಥತೆ ಎದುರಾದಾಗ, ಸಾಮಾನ್ಯವಾಗಿ ಆ ದಿನವೆಲ್ಲಾ ನಮಗೆ ಅಸಹಜ ಸ್ಥಿತಿ ಉಂಟಾಗುತ್ತದೆ. ಯಾವುದೇ ಆಸಕ್ತಿ ಕಡಿಮೆಯಾಗುತ್ತದೆ. ಈ ಸ್ಥಿತಿಯು ಸಾಮಾನ್ಯವಾಗಿ ನಾವು ಕೆಲವು ಮನೆಯ ಪರಿಹಾರಗಳನ್ನು ಪಾಲಿಸಿ, ಅಜೀರ್ಣ ರೋಗಲಕ್ಷಣಗಳನ್ನು ಗುಣಪಡಿಸಲು ಸಾಧ್ಯವಿದೆ.
೧. ಪ್ರತಿದಿನ ಆಹಾರ ಸೇವಿಸಿದ ನಂತರ ಒಂದೊಂದು ಬಾಳೆಹಣ್ಣು ಸೇವಿಸುವುದರಿಂದ ಅಜೀರ್ಣ ದೂರವಾಗುತ್ತದೆ.
೨. ಅನಾನಸ್ ಹಣ್ಣು ಸೇವನೆ ಅಜೀರ್ಣ ನಿವಾರಣೆಗೆ ಒಂದು ಸುಲಭ ಪರಿಹಾರ.
೩. ಪ್ರತಿ ದಿನ ಊಟವಾದ ನಂತರ ಪರಂಗಿ ಹಣ್ಣಿನ ಒಂದೆರಡು ತುಂಡುಗಳನ್ನು ಸೇವಿಸುವುದರಿಂದಲೂ ಅಜೀರ್ಣ ನಿವಾರಣೆಯಾಗುತ್ತದೆ.
೪. ಪ್ರತಿ ದಿನ ಆಹಾರ ಸೇವನೆಯಾ ನಂತರ ಸೋಂಪು ಕಾಲುಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುವುದರಿಂದಲೂ ಅಜೀರ್ಣ ಸಮಸ್ಯೆ ದೂರ ಮಾಡಬಹುದು.
೫. ಜೇನುತುಪ್ಪ ಸಹ ಅಜೀರ್ಣ ಸಮಸ್ಯೆಗೆ ಒಂದು ಉತ್ತಮ ಮನೆಮದ್ದು, ಪ್ರತಿದಿನ ಸಮ ಪ್ರಮಾಣದಲ್ಲಿ ಜೇನುತುಪ್ಪದ ಸೇವನೆಯಿಂದ ಅಜೀರ್ಣ ಸಮಸ್ಯೆಯಿಂದ ದುರಾಗಬಹುದು.
೬. ಪ್ರತಿದಿನ ಸ್ವಲ್ಪ ಪ್ರಮಾಣದ ಪುದೀನ ಎಲೆಗಳನ್ನು ಅಗಿದು ಸೇವಿಸುವುದರಿಂದ ಜೀರ್ಣಶಕ್ತಿ ವೃದ್ಧಿಸುತ್ತದೆ. ಅಜೀರ್ಣ ಸಮಸ್ಯೆ ನಿವಾರಣೆ ಯಾಗುತ್ತದೆ.
೭. ಅನ್ನದ ಗಂಜಿಗೆ ಸ್ವಲ್ಪ ಉಪ್ಪು ಬೆರೆಸಿ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.
೮. ಮಾವಿನ ಕಾಯಿಗೆ ಸ್ವಲ್ಪ ಉಪ್ಪು ಬೆರೆಸಿ ಮತ್ತು ಜೇನುತುಪ್ಪ ಲೇಪಿಸಿ ಸೇವಿಸಿದರೆ ಅಜೀರ್ಣ ಸಮಸ್ಯೆ ಮಾಯವಾಗುತ್ತದೆ.////
Web Title : Follow these easy tips for indigestion
( Get Kannada News Today Live @ kannadanews.today)