ಗಟ್ಟಿ ಮೊಸರು ಮತ್ತು ಕಡಲೆಹಿಟ್ಟು ಮಾಡುತ್ತೆ ಪವಾಡ

Miracle of hard yogurt and Chickpea flour-Super Beauty Tips

ಗಟ್ಟಿ ಮೊಸರು ಮತ್ತು ಕಡಲೆಹಿಟ್ಟು ಮಾಡುತ್ತೆ ಪವಾಡ – Miracle of hard yogurt and Chickpea flour-Super Beauty Tips

ಗಟ್ಟಿ ಮೊಸರು ಮತ್ತು ಕಡಲೆಹಿಟ್ಟು ಮಾಡುತ್ತೆ ಪವಾಡ

ಸುಂದರವಾಗಿ ಕಾಣೋ ಆಸೆ ಯಾರಿಗಿಲ್ಲ ಹೇಳಿ, ಅದರಲ್ಲೂ ನಮ್ಮ ಹೆಂಗಳೆಯರು ಅದಕ್ಕಾಗಿ ಮಾಡದೇ ಇರುವ ಪರಿಹಾರಗಳಿಲ್ಲ ಹಾಗೂ ಅನುಸರಿಸದೇ ಇರುವ ಕ್ರಮಗಳಿಲ್ಲ. ಹರಿಶಿಣದಿಂದ ಬ್ಯೂಟಿ ಪಾರ್ಲರ್ ತನಕ ಸುತ್ತಾಡುವುದಂತೂ ನಿಜ. ಆದರೆ ಅನೇಕ ಬಾರಿ ನಮ್ಮ ಸೌಂದರ್ಯದ ಗುಟ್ಟು ಅಡುಗೆ ಮನೆಯಲ್ಲಿಯೇ ಇದೆ ಎಂಬುದನ್ನು ಮರೆತು ಬಿಡುತ್ತಾರೆ.

ಹೌದು, ಸುಲಭವಾಗಿ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಮನೆಪರಿಹಾರಗಳು ನಮ್ಮ ತ್ವಜೆಗೆ ಉತ್ತಮ ಪೋಷಣೆ ಹಾಗೂ ಫಲಿತಾಂಶವನ್ನು ನೀಡುತ್ತವೆ, ಹಾಗೆ ಈ ಮೊಸರು ಮತ್ತು ಕಡಲೆ ಹಿಟ್ಟು ಸಹ ನಮ್ಮ ಮುಖದ ಕಾಂತಿ ಹೆಚ್ಚಿಸಲು ಉತ್ತಮ ಪರಿಹಾರ.

ಮೊದಲಿಗೆ ತಣ್ಣೀರಿನಲ್ಲಿ ಮುಖವನ್ನು ತೊಳೆದು ರಾತ್ರಿಯ ಗಟ್ಟಿ ಮೊಸರಿಗೆ ಕಡಲೆಹಿಟ್ಟನ್ನು ಸೇರಿಸಿ, ನಿಮ್ಮ ಮುಖದ ಭಾಗ ಹಾಗೂ ಕತ್ತಿನ ಭಾಗದಲ್ಲಿ ನಯವಾಗಿ ಲೇಪಿಸಿ. ( ಲೇಪಿಸುವಾಗ ಯಾವುದೇ ಕಾರಣಕ್ಕೂ ಒತ್ತಡ ಹಾಕಬಾರದು) ನಯವಾಗಿ ಉಜ್ಜಿದ ಸ್ವಲ್ಪತಾಸಿನ ನಂತರ ಮತ್ತೆ ತಣ್ಣೀರಿನಲ್ಲಿ ಮುಖವನ್ನು ತೊಳೆದು ಒರೆಸಿಕೊಳ್ಳಿ.

ಈ ಕ್ರಮವನ್ನು ಮಲಗುವ ಮುನ್ನ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು. ಮರುದಿನ ನಿಮ್ಮ ತ್ವಜೆ ತುಂಬಾ ಚನ್ನಾಗಿರುತ್ತದೆ, ಮದುವೆ, ಅಥವಾ ಇನ್ನಾವುದೇ ಕಾರ್ಯಕ್ರಮಕ್ಕೆ ಹೋಗುವ ಹಿಂದಿನ ದಿನ ಈ ಕ್ರಮ ಅನುಸರಿಸಿದರೆ ನೀವು ಬ್ಯೂಟಿ ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ. ಅಥವಾ ಪ್ರತಿ ತಿಂಗಳಿಗೊಮ್ಮೆ ಹೀಗೆ  ಮಾಡಿದರೆ ಮುಖದ ಕಾಂತಿ ಇಮ್ಮಡಿಗೊಳ್ಳುತ್ತದೆ.

ಇನ್ನಷ್ಟು ಪರಿಹಾರಗಳು :

೧. ನಿಂಬೆಹಣ್ಣು ವಾರದಲ್ಲಿ ಎರಡು ಮೂರೂ ಬಾರಿ ಮುಖಕ್ಕೆ ಉಜ್ಜಿದರೆ ಚರ್ಮದ ಜಿಡ್ಡು ತೊಲಗುತ್ತದೆ.

೨. ಪ್ರತಿನಿತ್ಯ ಟಮೋಟ ರಸವನ್ನು ಮುಖಕ್ಕೆ ಹಚ್ಚಿ ತಣ್ಣೀರಿನಲ್ಲಿ ಮುಖ ತೊಳೆದರೆ ಒಳ್ಳೆಯದು.

೩. ನಿಂಬೆರಸಕ್ಕೆ ಸೌತೆಕಾಯಿ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿದರೆ ಮುಖ ಬೆಳ್ಳಗಾಗುತ್ತದೆ.

೪.ಹಣ್ಣು, ತರಕಾರಿ, ಹಣ್ಣಿನ ರಸ, ಹಾಗೂ ಹಸಿಸೊಪ್ಪಿನ ಸೇವನೆಯಿಂದ ಸಹ ಶರೀರಕ್ಕೂ, ಆರೋಗ್ಯಕ್ಕೂ ಜೊತೆಗೆ ಮುಖಕಾಂತಿಗೆ ಒಳ್ಳೆಯದು.

೫. ಅತಿಯಾದ ಸಿಹಿತಿಂಡಿ, ಎಣ್ಣೆಯ ಪದಾರ್ಥ, ಚಹಾ, ಬೇಕರಿ ತಿನಿಸಿನ ಸೇವನೆಯಿಂದ ಚರ್ಮದ ಗುಣಮಟ್ಟ ಹಾಳಾಗುತ್ತದೆ.////

Web Title : Miracle of hard yogurt and Chickpea flour-Super Beauty Tips
kannadanews.today Updates you with Latest Kannada News Live Alerts