ಭಾರತೀಯ ವಯಸ್ಕರಲ್ಲಿ ಬೊಜ್ಜು ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ
ಭಾರತೀಯ ವಯಸ್ಕರಲ್ಲಿ ಬೊಜ್ಜು ಗಣನೀಯವಾಗಿ ಹೆಚ್ಚುತ್ತಿದೆ. ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚು.
ನವದೆಹಲಿ: ಭಾರತೀಯ ವಯಸ್ಕರಲ್ಲಿ ಬೊಜ್ಜು ಗಣನೀಯವಾಗಿ ಹೆಚ್ಚುತ್ತಿದೆ. ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚು. ವಿಶ್ವಸಂಸ್ಥೆ-2022 ವರದಿ ಈ ವಿಷಯವನ್ನು ಬಹಿರಂಗಪಡಿಸಿದೆ. 2012ರಲ್ಲಿ 2.52 ಕೋಟಿ ಇದ್ದ ಬೊಜ್ಜು ವಯಸ್ಕರ ಸಂಖ್ಯೆ 2016ರಲ್ಲಿ 3.43 ಕೋಟಿಗೆ ಏರಿಕೆಯಾಗಿದೆ.
ಅಲ್ಲದೆ, ರಕ್ತಹೀನತೆಯಿಂದ ಬಳಲುತ್ತಿರುವ 15 ರಿಂದ 49 ವರ್ಷ ವಯಸ್ಸಿನ ಮಹಿಳೆಯರ ಸಂಖ್ಯೆಯು 2012 ರಲ್ಲಿ 17.15 ಕೋಟಿಯಿಂದ 2019 ರಲ್ಲಿ 18.73 ಕೋಟಿಗೆ ಏರಿದೆ. ಕೋವಿಡ್ ಹಿನ್ನೆಲೆಯಲ್ಲಿ, 2021 ರಲ್ಲಿ ವಿಶ್ವದಾದ್ಯಂತ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ 82.8 ಕೋಟಿಗೆ ಏರಿದೆ. ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. 2004-06ರಲ್ಲಿ ಅಪೌಷ್ಟಿಕತೆಯ ಸಂಖ್ಯೆ 24.78 ಕೋಟಿ ಇದ್ದರೆ, 2019-21ರಲ್ಲಿ 2.43 ಕೋಟಿಗೆ ಇಳಿಕೆಯಾಗಿದೆ.
Obesity in India is on the rise
Follow us On
Google News |