ಮಹಿಳೆಯರಿಗೆ ಸಿಗಲಿದೆ ₹5,000, ಕೇಂದ್ರದ ಮಹತ್ವದ ಯೋಜನೆ! ವಿವರ ಇಲ್ಲಿದೆ

ಮಹಿಳೆಯರಿಗೆ ಆರ್ಥಿಕ ನೆರವಿನ ಉದ್ದೇಶದಿಂದ ಕೇಂದ್ರ ಸರ್ಕಾರ ಮಾತೃ ವಂದನಾ ಯೋಜನೆ ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳ ಖಾತೆಗೆ ₹5000 ನೇರ ಜಮೆ ಮಾಡಲಾಗುತ್ತದೆ.

  • ಒಟ್ಟು ₹5000 ಮೊತ್ತವನ್ನು ಮೂರು ಹಂತಗಳಲ್ಲಿ ಜಮೆ ಮಾಡಲಾಗುತ್ತದೆ
  • ಎರಡನೇ ಹೆಣ್ಣು ಮಗುವಿಗೂ ಸೌಲಭ್ಯ ವಿಸ್ತರಣೆ
  • ಆನ್‌ಲೈನ್ ಅಥವಾ ಆಶಾ ಕಾರ್ಯಕರ್ತೆ ಮೂಲಕ ನೋಂದಣಿ ಸಾಧ್ಯ

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಮಾತೃ ವಂದನಾ ಯೋಜನೆ (PMMVY) ಗರ್ಭಿಣಿಯರಿಗೆ ಆರ್ಥಿಕ ನೆರವಿನೊಂದಿಗೆ ಹೆರಿಗೆಗೂ ಮುನ್ನ ಹಾಗೂ ನಂತರದ ಆರೈಕೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ರೂಪುಗೊಂಡಿದೆ.

ಈ ಯೋಜನೆಯಡಿ ಮಹಿಳೆಯರಿಗೆ ₹5000 ನೆರವಿನ ಮೊತ್ತವನ್ನು ಮೂರು ಹಂತಗಳಲ್ಲಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ₹1000, ಎರಡನೇ ಹಂತದಲ್ಲಿ ₹2000 ಮತ್ತು ಮೂರನೇ ಹಂತದಲ್ಲಿ ಮತ್ತೊಂದು ₹2000 ಅನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ (bank account) ಜಮೆ ಮಾಡಲಾಗುತ್ತದೆ.

ಇದನ್ನೂ ಓದಿ: ಈ ಕಾರ್ಡ್ ಇದ್ರೆ ಪ್ರತಿ ತಿಂಗಳು ಸಿಗುತ್ತೆ ₹1,000 ರೂಪಾಯಿ! ನಿಮ್ಮತ್ರ ಇದಿಯಾ

ಈ ಯೋಜನೆಯ ಪ್ರಮುಖ ವೈಶಿಷ್ಟ್ಯವೆಂದರೆ, ಇತ್ತೀಚೆಗೆ ಎರಡನೇ ಹೆಣ್ಣು ಮಗುಗಾಗಿ ಕೂಡ ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಮೊದಲು ಯೋಜನೆ ಮೊದಲ ಮಗುವಿಗೆ ಮಾತ್ರ ಅನ್ವಯಿಸುತಿತ್ತು. ಆದರೆ ಈಗ, ಎರಡನೇ ಮಗುವೂ ಹೆಣ್ಣು ಮಗುವಾಗಿದ್ದರೆ ಆ ಗರ್ಭಧಾರಣೆಯ ಅವಧಿಗೂ ಯೋಜನೆಯ ಸೌಲಭ್ಯ ಲಭಿಸುತ್ತದೆ. ಈ ನಿಯಮವು 2022 ಏಪ್ರಿಲ್ 1ರಿಂದ ಜಾರಿಗೆ ಬಂದಿದೆ.

ಈ ಯೋಜನೆಯಡಿ ಹಣ ಪಡೆಯಲು ಕೆಲವು ಅರ್ಹತೆಗಳನ್ನು ಪೂರೈಸಬೇಕಾಗಿದೆ. ಮೊದಲನೇ ಗರ್ಭಧಾರಣೆಯು ಅಥವಾ ಎರಡನೇ ಮಗು ಹೆಣ್ಣು ಮಗುವಾಗಿರಬೇಕು. MCP ಕಾರ್ಡ್ ಮುಂತಾದ ದಾಖಲೆಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಬೇಕು. ಈ ಎಲ್ಲಾ ಮಾಹಿತಿ ನಿಮ್ಮ ಆಶಾ ಕಾರ್ಯಕರ್ತೆ (ASHA worker) ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆ ಮೂಲಕ ಪೂರೈಸಬಹುದು.

Pradhan Mantri Matru Vandana Yojana

ಅರ್ಜಿಯನ್ನು ನೀವು ನೇರವಾಗಿ https://pmmvy-cas.nic.in/public/beneficiaryuseraccount/login ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಈ ವೆಬ್‌ಸೈಟ್‌ನಲ್ಲಿ beneficiary login ಲಭ್ಯವಿದ್ದು, ನೋಂದಾಯಿಸಿಕೊಳ್ಳಲು ಮತ್ತು ಲಾಗಿನ್ ಆಗಲು ಅನುಕೂಲವಿದೆ.

ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಇದ್ರೆ ಉಚಿತ ಗ್ಯಾಸ್ ಸಿಲಿಂಡರ್! ಈ ಯೋಜನೆಗೆ ಅರ್ಜಿ ಸಲ್ಲಿಸಿ

ಈ ಯೋಜನೆಯು ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಆದರೆ, ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಈ ಯೋಜನೆಯ ಸೌಲಭ್ಯ ಅನ್ವಯಿಸುವುದಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ, ಎರಡನೇ ಗರ್ಭದಲ್ಲಿ ಹೆಣ್ಣು ಮಗು ಹೊರತುಪಡಿಸಿ ಇತರರಿಗೆ ಈ ಯೋಜನೆಯ ಲಾಭ ಸಿಗದು.

ಈ ರೀತಿಯಾಗಿ, ಪ್ರಧಾನಿ ಮಾತೃ ವಂದನಾ ಯೋಜನೆ ಮಹಿಳೆಯರಿಗೆ ಆರೋಗ್ಯದ ಜೊತೆಗೆ ಆರ್ಥಿಕ ನಿಟ್ಟಿನಲ್ಲಿ ಸಹಾಯ ಮಾಡುವ ನಿಟ್ಟಿನಲ್ಲಿ ಅತ್ಯಂತ ಉಪಯುಕ್ತವಾಗಿದೆ.

5000 Support for Pregnant Women under PMMVY Scheme

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories