ನಿಮಗೂ ಭಾರತೀಯ ವಾಯುಪಡೆ (Indian Air Force) ಯಲ್ಲಿ ಕೆಲಸ ಮಾಡುವ ಆಸಕ್ತಿ ಇದೆಯಾ? ಒಂದು ಗ್ಯಾರಂಟಿ ಹುದ್ದೆ ಹಾಗೂ ಕೈತುಂಬಾ ಸಂಬಳ (Salary) ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಂತ ನೀವು ಯೋಚನೆ ಮಾಡ್ತಾ ಇದ್ದೀರಾ?
ಆದರೆ ಕೇವಲ ಪಿಯುಸಿ (PUC) ಮಾತ್ರ ಮುಗಿದಿರುವುದು ಅಂತ ಯಾವ ಕೆಲಸ ಸಿಗುತ್ತೆ ಎಂದು ಚಿಂತೆ ಮಾಡುತ್ತಿದ್ದರೆ ನಿಮಗೆ ಒಂದು ಒಳ್ಳೆಯ ಉದ್ಯೋಗಾವಕಾಶ (Job opportunity) ಇದೆ.
ಎಲ್ಲಿ ಉದ್ಯೋಗ ಸಿಗುತ್ತೆ ಯಾವ ರೀತಿ ಅಪ್ಲೈ (apply) ಮಾಡಬೇಕು ನಿಮ್ಮ ವಿದ್ಯಾರ್ಹತೆ ಎಷ್ಟಿದ್ದರೆ ಸಾಕು, ವಯೋಮಿತಿ, ಸಂಬಳ ಪ್ರತಿಯೊಂದು ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಆಸ್ತಿ ಮಾರಾಟ ಮಾಡೋದಕ್ಕೂ ಇನ್ಮೇಲೆ ಹೊಸ ನಿಯಮ! ಕೇಂದ್ರ ಸರ್ಕಾರದಿಂದ ರಾತ್ರೋರಾತ್ರಿ ರೂಲ್ಸ್ ಜಾರಿ
ಭಾರತೀಯ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ
ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ ವಾಯು (Agniveer Vayu) ಹುದ್ದೆಗಳು ಖಾಲಿ ಇವೆ, ಹಾಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು (Candidates) ತಕ್ಷಣವೇ ಅರ್ಜಿ ಸಲ್ಲಿಸಬಹುದು. ಕೇವಲ ಕೆಲವು ದಿನಗಳ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ತಕ್ಷಣವೇ ಆರ್ಜಿಯನ್ನು ಸಲ್ಲಿಸಿ.
ವಯೋಮಿತಿ – Age
ಭಾರತೀಯ ವಾಯುಪಡೆ ನೇಮಕಾತಿ ಅದಿ ಸೂಚನೆ ತಿಳಿಸಿರುವ ಪ್ರಕಾರ ಅಗ್ನಿವೀರ್ ವಾಯುನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಗರಿಷ್ಠ 21 ವರ್ಷಕ್ಕಿಂತ ಚಿಕ್ಕವರಾಗಿರಬೇಕು, 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಡಿಸೆಂಬರ್ 26, 2002 ರಿಂದ ಜೂನ್ 26, 2006ರ ಒಳಗೆ ಜನಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದು. ಅಷ್ಟೇ ಅಲ್ಲದೆ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಕೂಡ ಇರುತ್ತದೆ.
ವಿದ್ಯಾರ್ಹತೆ ಏನು – Education
ಅಗ್ನಿವೀರ್ ವಾಯು ಡಿಪಾರ್ಟ್ಮೆಂಟ್ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ (University) ಅಥವಾ ಮಂಡಳಿಯಿಂದ 12ನೇ ತರಗತಿ ಅಥವಾ ಡಿಪ್ಲೋಮೋ ಕೋರ್ಸ್ ಅನ್ನು ಕಡ್ಡಾಯವಾಗಿ ಮುಗಿಸಿರಬೇಕು ಜೊತೆಗೆ ಸರ್ಟಿಫಿಕೇಟ್ (Certificate) ಕೂಡ ಹೊಂದಿರಬೇಕು ಎಂದು ಭಾರತೀಯ ವಾಯುಪಡೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ
ಭಾರತೀಯ ವಾಯುಪಡೆ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿ ಒಂದು ರೂಪಾಯಿ ಶುಲ್ಕವನ್ನು ಕೂಡ ಪಾವತಿಸುವ ಅಗತ್ಯವಿಲ್ಲ.
ಉದ್ಯೋಗ ವೇತನ ಹಾಗೂ ಸ್ಥಳ
ಭಾರತೀಯ ವಾಯುಪಡೆ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಆಯ್ಕೆಯಾದರೆ ಭಾರತದ ಯಾವುದೇ ಭಾಗದಲ್ಲಿ ಬೇಕಾದರೂ ಪೋಸ್ಟಿಂಗ್ ಆಗಬಹುದು, ಅದಕ್ಕೆ ಸಿದ್ಧರಿದ್ದರೆ ಮಾತ್ರ ಅರ್ಜಿ ಸಲ್ಲಿಸಿ. ಇನ್ನು ವೇತನ 30,000rs ಗಳಿಂದ 40,000rs ವರೆಗೆ ಇರುತ್ತದೆ. ಕ್ರಮೇಣ ಈ ಸಂಬಳ ಜಾಸ್ತಿ ಆಗಬಹುದು.
ದೇಶದ ಜನತೆಗೆ ಮೋದಿ ಅವರ ಬರ್ತ್ ಡೇ ಗಿಫ್ಟ್, ಇಂತಹವರಿಗೆ ಸಿಗಲಿದೆ 2 ಲಕ್ಷದವರೆಗೆ ಸುಲಭ ಸಾಲ
ಆಯ್ಕೆ ಪ್ರಕ್ರಿಯೆ ಹೇಗೆ
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾಗಲು ಅಭ್ಯರ್ಥಿಗಳಿಗೆ ಕ್ರೀಡಾ ಕೌಶಲ್ಯ ಪ್ರಯೋಗಗಳು, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲಾತಿಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ, ನಂತರ ನೇರ ಸಂದರ್ಶನ ಮಾಡಲಾಗುತ್ತದೆ.
ದಿನಾಂಕ
11, ಸೆಪ್ಟೆಂಬರ್, 2023ಕ್ಕೆ ಅರ್ಜಿ ಹಾಕುವ ಪ್ರಕ್ರಿಯೆ ಶುರುವಾಗಿದೆ, ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳು ಅಂದರೆ ಸಪ್ಟೆಂಬರ್ 20, 2023. ಹಾಗಾಗಿ ಕೇವಲ ದ್ವಿತೀಯ ಪಿಯುಸಿ ಮುಗಿಸಿರುವ ಅಭ್ಯರ್ಥಿಗಳು ಕೂಡ ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆದುಕೊಳ್ಳಬಹುದು, ಹಾಗಾಗಿ ಕೂಡಲೇ ಅರ್ಜಿ ಸಲ್ಲಿಸಿ.
Apply for Central Government Job Agniveer Vayu Post
Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.