ಕೋಳಿ ಬೆಲೆ ಭಾರೀ ಕುಸಿತ, 30 ರೂಪಾಯಿಗೆ ಒಂದು ಕೆಜಿ ಚಿಕನ್! ಎಲ್ಲಿ ಅಂತೀರಾ?
ಆಂಧ್ರ ಮತ್ತು ತೆಲಂಗಾಣದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆ ಕೋಳಿ ಮತ್ತು ಮೊಟ್ಟೆ ಬೆಲೆಯಲ್ಲಿ ಕುಸಿತ ಕಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾಂಸದ ಬಳಕೆಗೆ ನಿಬಂಧನೆ ವಿಧಿಸಲಾಗಿದ್ದು, ಉದ್ಯಮ ಹಿನ್ನಡೆ ಅನುಭವಿಸುತ್ತಿದೆ.
- ಹಕ್ಕಿ ಜ್ವರ ಭೀತಿಯಿಂದ ಕೋಳಿ ಮತ್ತು ಮೊಟ್ಟೆ ಮಾರಾಟ ಕುಸಿತ
- ಆಂಧ್ರಪ್ರದೇಶದ ಕೋಳಿ ಫಾರ್ಮ್‌ಗಳಲ್ಲಿ ಎಚ್5ಎನ್1 ವೈರಸ್ ದೃಢ
- ಮಹಾರಾಷ್ಟ್ರದಲ್ಲೂ ಕೋಳಿಗಳ ನಾಶ, ವ್ಯಾಪಕ ಮುನ್ನೆಚ್ಚರಿಕೆ
ಹಕ್ಕಿ ಜ್ವರ ಭೀತಿ ಕೋಳಿ ಬೆಲೆ ಕುಸಿತ
ಇತ್ತೀಚೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕೋಳಿ (Chicken) ಮತ್ತು ಮೊಟ್ಟೆ ಬೆಲೆಯಲ್ಲಿ (Egg Price) ತೀವ್ರ ಕುಸಿತವಾಗಿದೆ. ಕೋಳಿ ಮಾಂಸದ ಬೆಲೆ 250 ರೂ. ನಿಂದ 150 ರೂ. ಗೆ ಇಳಿದಿದೆ, ಆದರೆ ಜನರು ಇನ್ನೂ ಖರೀದಿಸಲು ಹಿಂಜರಿಯುತ್ತಿದ್ದಾರೆ.
ಈ ಬೆಳವಣಿಗೆಗೆ ಕಾರಣವೆಂದರೆ, ಆಂಧ್ರಪ್ರದೇಶದಲ್ಲಿ ಕೆಲವು ಕೋಳಿ ಫಾರ್ಮ್‌ಗಳಲ್ಲಿ ಹಕ್ಕಿ ಜ್ವರ (H5N1) ಪತ್ತೆಯಾದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದೆ.
ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಕೋಳಿ ಸಾವು ಹೆಚ್ಚಾಗುತ್ತಿದ್ದಂತೆ, ಸರ್ಕಾರವು ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಿತು. ಪರೀಕ್ಷೆಯಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದು, ಸೋಂಕು ಹರಡುವುದನ್ನು ತಡೆಯಲು ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ.
ಸೋಂಕಿತ ಕೋಳಿಗಳನ್ನು ಹೂಳುವ ಕಾರ್ಯ ನಿರ್ವಹಿಸಲಾಗಿದ್ದು, ಕೋಳಿ ಮತ್ತು ಮೊಟ್ಟೆ ಸೇವನೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕೋಳಿ ಸಾಕಾಣಿಕೆ ಮಾಡೋ ರೈತರು ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳು
ಮಹಾರಾಷ್ಟ್ರದಲ್ಲೂ ಹಕ್ಕಿ ಜ್ವರ ಆತಂಕ!
ಮಹಾರಾಷ್ಟ್ರದಲ್ಲೂ ಹಕ್ಕಿ ಜ್ವರದ ಭೀತಿ ಉಲ್ಬಣಗೊಂಡಿದ್ದು, ಪಶುಸಂಗೋಪನಾ ಇಲಾಖೆಯು 7,000 ಕ್ಕೂ ಹೆಚ್ಚು ಕೋಳಿಗಳನ್ನು ನಾಶಪಡಿಸಿದೆ. ಅಲ್ಲದೆ, 2,000 ಕ್ಕೂ ಹೆಚ್ಚು ಮೊಟ್ಟೆಗಳನ್ನು ನಾಶ ಮಾಡಲಾಗಿದೆ. ಹಕ್ಕಿ ಜ್ವರ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ರಾಜ್ಯದಲ್ಲಿ 7 ಕೇಂದ್ರಬಿಂದು ಪ್ರದೇಶಗಳನ್ನು ಗುರುತಿಸಲಾಗಿದ್ದು, ಸೋಂಕು ತಡೆಗಟ್ಟಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕೋಳಿ ಉದ್ಯಮಕ್ಕೆ ಸಂಕಷ್ಟದ ದಿನಗಳು
ಅಂತಾರಾಷ್ಟ್ರೀಯ ಮೊಟ್ಟೆ ಆಯೋಗದ ಅಧ್ಯಕ್ಷ ಚಿತ್ತೂರಿ ಸುರೇಶ್ ಹೇಳುವಂತೆ, “ಈ ಸಮಯ ಕೋಳಿ ಉದ್ಯಮಕ್ಕೆ ತೀವ್ರ ಸಂಕಷ್ಟ ತಂದೊಡ್ಡಿದೆ. ಮಾರಾಟಗಾರರು ಹಾಗೂ ರೈತರು ಧೈರ್ಯದಿಂದ ಮುನ್ನಡೆಸಬೇಕು. ಫೆಬ್ರವರಿಯಿಂದ ಬೇಡಿಕೆ ಪುನಃ ಸುಧಾರಿಸಬಹುದು.
ಹಕ್ಕಿ ಜ್ವರ ಕೋಳಿಯಿಂದ ಕೋಳಿಗೆ ಹರಡುತ್ತದೆ, ಆದರೆ ಮಾಂಸ ಅಥವಾ ಮೊಟ್ಟೆ ಸೇವನೆಯ ಮೂಲಕ ಹರಡುವುದಿಲ್ಲ. ಸರ್ಕಾರವು ಲಸಿಕೆ ಕಾರ್ಯವಿಧಾನವನ್ನು ವೇಗಗೊಳಿಸಬೇಕು” ಎಂದು ಅವರು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ
ಅಮೆರಿಕದಲ್ಲಿ ಹಕ್ಕಿ ಜ್ವರದ ಆತಂಕದ ನಡುವೆಯೂ, ಒಂದು ಮೊಟ್ಟೆ ಬೆಲೆ 100 ರೂ. ಗೆ ಏರಿದೆ. ಆದರೆ ಭಾರತದಲ್ಲಿ ಕೋಳಿ ಬೆಲೆ ಕುಸಿತ ಕಂಡಿದ್ದು, ಕೋಳಿ ಸಾಕಾಣಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಕ್ರಮಗಳು ಮತ್ತು ಸಾರ್ವಜನಿಕ ಜಾಗೃತಿಯೊಂದಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Chicken and Egg Prices Drop Amid Bird Flu Scare
Our Whatsapp Channel is Live Now 👇