ಧೂಮಪಾನ ಪ್ರಿಯರಿಗೆ ಶಾಕ್, ಶೀಘ್ರವೇ ಸಿಗರೇಟ್ ಬೆಲೆ ಭಾರೀ ಏರಿಕೆ!
ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಶೇಕಡಾ 40ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಚನೆ ನಡೆಸುತ್ತಿದೆ. ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
- ಸಿಗರೇಟ್ ಬೆಲೆಯಲ್ಲಿ ಶೀಘ್ರವೇ ಭಾರಿ ಏರಿಕೆ ಸಾಧ್ಯತೆ.
- ಜಿಎಸ್‌ಟಿ ಶೇಕಡಾ 40ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜನೆ.
- ತಂಬಾಕು ಉತ್ಪನ್ನಗಳ ಬಳಕೆಯನ್ನು ತಗ್ಗಿಸಲು ತೆರಿಗೆ ಹೆಚ್ಚಳ ನಿರ್ಧಾರ.
ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬಳಕೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಭಾರಿ ತೆರಿಗೆ (Tax) ಹೆಚ್ಚಳದತ್ತ ಕಾಲಿಟ್ಟಿದೆ. ಆರೋಗ್ಯಕ್ಕೆ ಹಾನಿಕಾರಕವಾಗಿರುವ ಈ ಉತ್ಪನ್ನಗಳ ಬಳಕೆ ಕಡಿಮೆಯಾಗಬೇಕೆಂಬ ಉದ್ದೇಶದಿಂದ ಜಿಎಸ್‌ಟಿಯನ್ನು ಶೇಕಡಾ 40ಕ್ಕೆ ಹೆಚ್ಚಿಸುವ ಯೋಜನೆ ನಡೆಸಲಾಗುತ್ತಿದೆ. ಜತೆಗೆ, ಪ್ರತ್ಯೇಕ ಅಬಕಾರಿ ಸುಂಕವನ್ನು ವಿಧಿಸುವ ಸಾಧ್ಯತೆ ಇದೆ.
ಪ್ರಸ್ತುತ, ಸಿಗರೇಟ್‌ಗಳ (Cigarette) ಮೇಲೆ ಶೇಕಡಾ 28ರಷ್ಟು ಜಿಎಸ್‌ಟಿ (GST) ಮತ್ತು ಇತರ ಶುಲ್ಕಗಳು ವಿಧಿಸಲಾಗುತ್ತಿದ್ದು, ಒಟ್ಟು ತೆರಿಗೆ ಶೇಕಡಾ 53ಕ್ಕೆ ತಲುಪುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಶೇಕಡಾ 75ರ ಗುರಿಗೆ ಇದು ಇನ್ನೂ ತೀರಾ ಕಡಿಮೆ.
ತಂಬಾಕು ಉತ್ಪನ್ನಗಳ ಮೇಲೆ ಇರುವ ಪರಿಹಾರ ಸೆಸ್ ಅವಧಿ ಮುಗಿಯುತ್ತಿದ್ದಂತೆ, ಕೇಂದ್ರ ಸರ್ಕಾರ ಹೊಸ ತೆರಿಗೆ ದರಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ. ಇದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಸಿಗರೇಟ್ ಬಳಕೆಯನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ.
ಇನ್ನೊಂದೆಡೆ, ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳು ಸರ್ಕಾರಕ್ಕೆ ಭಾರಿ ತೆರಿಗೆ ಆದಾಯವನ್ನು ನೀಡುತ್ತವೆ. ಆದ್ದರಿಂದ, ಈ ಬೆಳವಣಿಗೆಯು ದೇಶದ ಆರ್ಥಿಕತೆಗೆ ಸಹ ಪ್ರಭಾವ ಬೀರುವ ನಿರೀಕ್ಷೆ ಇದೆ.
Cigarette Prices Likely to Rise Soon
Our Whatsapp Channel is Live Now 👇