ಸ್ವಂತ ಮನೆ ಇಲ್ಲದ ಬಡವರಿಗೆ ಉಚಿತ ಮನೆ ಯೋಜನೆ! ಅರ್ಜಿ ಆಹ್ವಾನ
ಪ್ರಧಾನಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಅಡಿಯಲ್ಲಿ ಹೊಸ ಸಮೀಕ್ಷೆ ಆರಂಭ! ವಸತಿ ರಹಿತರು, ನಿವೇಶನ ಇಲ್ಲದವರಿಗೆ ಮನೆ ಮಂಜೂರಾತಿಗೆ ಅವಕಾಶ. ಆನ್‌ಲೈನ್ ಮೂಲಕ ಅಥವಾ ಗ್ರಾಮ ಪಂಚಾಯಿತಿ ಮೂಲಕ ಅರ್ಜಿ ಸಲ್ಲಿಸಿ.
- ವಸತಿ ರಹಿತರು ಹಾಗೂ ನಿವೇಶನ ರಹಿತರಿಗೆ ಮನೆ ಮಂಜೂರಾತಿ
- ಆಧಾರ್, ಬ್ಯಾಂಕ್ ಖಾತೆ, ಆದಾಯ ಪ್ರಮಾಣ ಪತ್ರ ಅಗತ್ಯ
- ಆನ್‌ಲೈನ್ ಅಥವಾ ಗ್ರಾಮ ಪಂಚಾಯಿತಿ ಸಮೀಕ್ಷೆ ಮೂಲಕ ನೋಂದಣಿ
Housing Scheme: ಗ್ರಾಮೀಣ ಪ್ರದೇಶದ ಜನತೆಗೆ ಶಾಶ್ವತ ವಸತಿ ಕನಸು ಸಾಕಾರಗೊಳ್ಳಲು ಮತ್ತೊಂದು ಅವಕಾಶ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಅಡಿಯಲ್ಲಿ ಹೊಸ ಸಮೀಕ್ಷೆ ಆರಂಭಗೊಂಡಿದ್ದು, ವಸತಿ ರಹಿತರು ಹಾಗೂ ನಿವೇಶನ ರಹಿತರು ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿ ಅರ್ಹ ಫಲಾನುಭವಿಗಳು ತಾವು ಮನೆಯ ಅಗತ್ಯವಿರುವುದನ್ನು ದಾಖಲಿಸಿಕೊಂಡು, ಸರ್ಕಾರದಿಂದ ಸಹಾಯ ಪಡೆಯಬಹುದು.
ಇದನ್ನೂ ಓದಿ: ಬರೀ 60 ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್! ವಾಹ್ವ್ 100 ಕಿ.ಮೀ ಮೈಲೇಜ್
ಯಾರು ಅರ್ಹರು?
ಈ ಯೋಜನೆಯಡಿ ಕೆಳಗಿನ ವರ್ಗದ ಜನರು ಮನೆ (Own House) ಪಡೆಯಲು ಅರ್ಹರಾಗಿರುತ್ತಾರೆ:
- ತಮ್ಮ ಸ್ವಂತ ಮನೆ ಇಲ್ಲದವರು (ವಸತಿ ರಹಿತರು)
- ಸ್ವಂತ ಜಾಗ ಹೊಂದಿಲ್ಲದವರು (ನಿವೇಶನ ರಹಿತರು)
- ಗುಡಿಸಲು ಅಥವಾ ಕಚ್ಚಾ ಮನೆ ಹೊಂದಿರುವವರು
- ವಾರ್ಷಿಕ ಆದಾಯ ₹1.80 ಲಕ್ಷಕ್ಕಿಂತ ಕಡಿಮೆಯಾದ ಕುಟುಂಬಗಳು
- ರಾಜ್ಯ ಸರ್ಕಾರದ ಹೊಸ ಸಮೀಕ್ಷೆಯಲ್ಲಿ ಹೆಸರು ನೋಂದಾಯಿಸಿಕೊಂಡವರು
ಯಾವ ದಾಖಲೆಗಳು ಅಗತ್ಯ?
ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಾಖಲೆಗಳು ಅಗತ್ಯವಾಗಿದ್ದು, ಅವು ಈ ರೀತಿಯಾಗಿದೆ:
ಇದನ್ನೂ ಓದಿ: ಹೊಸ ಮನೆ ಕಟ್ಟೋರಿಗೆ ಬಿಗ್ ಶಾಕ್, ಸಿಮೆಂಟ್ ಬೆಲೆ ಭಾರೀ ಏರಿಕೆ
- ಆಧಾರ್ ಕಾರ್ಡ್ (ಗುರುತು ಪ್ರಮಾಣಕ್ಕಾಗಿ)
- ಆದಾಯ ಪ್ರಮಾಣ ಪತ್ರ (ಅರ್ಹತಾ ದೃಢೀಕರಣಕ್ಕೆ)
- ಬ್ಯಾಂಕ್ ಖಾತೆಯ ವಿವರಗಳು (ಹಣ ಪಾವತಿ ಪ್ರಕ್ರಿಯೆಗಾಗಿ)
- ನರೇಗಾ (MGNREGA) ಜಾಬ್ ಕಾರ್ಡ್ (ಪ್ರಾಮಾಣಿಕತೆಗಾಗಿ)
ಸಮೀಕ್ಷೆಯಲ್ಲಿ ಹೇಗೆ ಪಾಲ್ಗೊಳ್ಳಬಹುದು?
ಈ ಯೋಜನೆಗೆ ಹೆಸರು ನೋಂದಾಯಿಸಲು ಎರಡು ವಿಧಾನಗಳಿವೆ – 1) ಗ್ರಾಮ ಪಂಚಾಯಿತಿ ಸಮೀಕ್ಷೆ 2) ಆನ್‌ಲೈನ್ ನೋಂದಣಿ.
ಇದನ್ನೂ ಓದಿ: ಒಂದು ಲಕ್ಷಕ್ಕೆ ₹7,100 ಬಡ್ಡಿ ಸಿಗೋ ಎಸ್‌ಬಿಐ ಯೋಜನೆ! ಮಾರ್ಚ್ 31 ಕೊನೆ
1️⃣ ಗ್ರಾಮ ಪಂಚಾಯಿತಿ ಸಮೀಕ್ಷೆ:
ಸಮೀಕ್ಷಾಧಿಕಾರಿಗಳು ಮನೆಗೆ ಬೇಟಿ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸುತ್ತಾರೆ.
ದಾಖಲೆ ಪರಿಶೀಲನೆಯ ನಂತರ, ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗುತ್ತದೆ.
2️⃣ ಸ್ವಯಂ ಆನ್‌ಲೈನ್ ನೋಂದಣಿ:
- Google Play Store ಗೆ ಹೋಗಿ
- “Awaas Plus 224” ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
- ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ಪ್ರಗತಿಯನ್ನು ಟ್ರ್ಯಾಕ್ ಮಾಡಿ
ಅಧಿಕೃತ ವೆಬ್‌ಸೈಟ್ ಲಿಂಕ್:
🔹 https://pmayg.nic.in/netiayHome
🔹 https://ashraya.karnataka.gov.in
ಈ ಯೋಜನೆಯ ಲಾಭಗಳು:
ಉಚಿತ ಅಥವಾ ಕಡಿಮೆ ಬಜೆಟ್‌ನಲ್ಲಿ ಮನೆ ಮಂಜೂರಾತಿ
ಸರ್ಕಾರದ ಆರ್ಥಿಕ ಸಹಾಯ
ಬಡಕುಟುಂಬಗಳಿಗೆ ಶಾಶ್ವತ ವಸತಿ ವ್ಯವಸ್ಥೆ
ಸುಲಭ ಅರ್ಜಿ ಪ್ರಕ್ರಿಯೆ, ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಸಲ್ಲಿಸಲು ಅವಕಾಶ
ಇದನ್ನೂ ಓದಿ: ನಿಮ್ಮ ಹಣ ಮೂರು ಪಟ್ಟು ಹೆಚ್ಚಾಗೋ ಪೋಸ್ಟ್ ಆಫೀಸ್ ಯೋಜನೆ ಇದು
ಹೀಗಾಗಿ, ನೀವು ಗ್ರಾಮೀಣ ಪ್ರದೇಶದಲ್ಲಿ ವಸತಿ ಇಲ್ಲದವರು ಅಥವಾ ನಿವೇಶನ ಇಲ್ಲದವರು ಆದರೆ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಸರ್ಕಾರಿ ತಾಣದಲ್ಲಿ ಅರ್ಜಿ ಸಲ್ಲಿಸಿ, ಸ್ವಂತ ಮನೆಗೆ ಮಾಲೀಕರಾಗುವ ಕನಸು ಸಾಕಾರಗೊಳಿಸಿಕೊಳ್ಳಿ!
Golden Opportunity for Rural Residents to Own a Home