Story Highlights
ಗಂಡ ಹೆಂಡಿತಿಯರ ವಿಷಯದಲ್ಲಿ ಹೈಕೋರ್ಟ್ ಹೊಸ ಕಾನೂನು ಜಾರಿಗೆ ತಂದಿದೆ. ಗಂಡ ಹೆಂಡತಿಯ ಈ ಅನ್ಯೋನ್ಯತೆ ಅಧಿಕಾರಕ್ಕೆ ವಿರುದ್ಧ ದಿಕ್ಕಿನಲ್ಲೇ ತೀರ್ಪು ನೀಡಿದೆ.
ಸಾಮಾನ್ಯವಾಗಿ ದಂಪತಿಗಳು ಎಂದರೆ ಬಹಳ ಅನ್ಯೋನ್ಯವಾಗಿ ಅತ್ಯುತ್ತಮವಾಗಿ ಇರುತ್ತಾರೆ. ಗಂಡ ಹೆಂಡತಿಯ (Married Couple) ನಡುವೆ ಯಾವುದೇ ಮುಚ್ಚುಮರೆ ಇರುವುದಿಲ್ಲ.. ಇಬ್ಬರು ಕೂಡ ತಮ್ಮ ವಸ್ತುಗಳು ಇಬ್ಬರಿಗೂ ಸೇರಿದ್ದು, ನಾವಿಬ್ಬರು ಒಂದು ಎಂದುಕೊಂಡು ಜೀವನ ನಡೆಸುತ್ತಾರೆ. ಗಂಡನ ಹತ್ತಿರ ಇರುವ ವಸ್ತುಗಳ ಮೇಲೆ ಹೆಂಡತಿಗೆ ಎಲ್ಲಾ ಹಕ್ಕುಗಳು ಇರುತ್ತದೆ, ಅದೇ ರೀತಿ ಗಂಡನಿಗೂ ಕೂಡ.. ಇಬ್ಬರ ನಡುವೆ ಬೇಧ ಭಾವ ಇರುವುದಿಲ್ಲ ಎನ್ನುವುದು ಸಾಮಾನ್ಯವಾಗಿ ಎಲ್ಲರ ನಂಬಿಕೆ..
ಆದರೆ ಗಂಡ ಹೆಂಡಿತಿಯರ ವಿಷಯದಲ್ಲಿ ಹೈಕೋರ್ಟ್ (High court Judgement) ಈಗ ಹೊಸ ಕಾನೂನು (High Court Law) ಒಂದನ್ನು ಜಾರಿಗೆ ತಂದಿದೆ. ಗಂಡ ಹೆಂಡತಿಯ ಈ ಅನ್ಯೋನ್ಯತೆ ಅಧಿಕಾರಕ್ಕೆ ವಿರುದ್ಧ ದಿಕ್ಕಿನಲ್ಲೇ ತೀರ್ಪು ನೀಡಿದೆ.
ಹುಡುಗ ಹುಡುಗಿ ಮದುವೆ ನಡೆದಾಗ, ಹಲವಾರು ಜನರು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುತ್ತಾರೆ, ಮದುವೆಗೆ ನೂರಾರು ಜನರಿಗೆ ಆಮಂತ್ರಣ ನೀಡುತ್ತಾರೆ, ಹಾಗೆಯೇ ಮದುವೆಗೆ ಬರುವವರು ಹುಡುಗ ಹುಡುಗಿಗೆ ಗಿಫ್ಟ್ಸ್ (Marriage Gifts) ನೀಡುವುದು ಕೂಡ ಉಂಟು.. ಒಂದು ವೇಳೆ ಹುಡುಗಿಗೆ ಮದುವೆಯಲ್ಲಿ ಸಿಗುವ ಗಿಫ್ಟ್ ಮೇಲೆ ಅವಳಿಗೆ ಮಾತ್ರ ಹಕ್ಕು ಇರುತ್ತದೆಯೇ? ಅಥವಾ ಗಂಡ ಮತ್ತು ಗಂಡನ ಮ ಮನೆಯವರಿಗು ಹಕ್ಕು ಇರುತ್ತಾ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಈ ವಿಚಾರದ ಬಗ್ಗೆ ಈಗ ಹೈಕೋರ್ಟ್ ತೀರ್ಪು ಕೊಟ್ಟಿದೆ.
ಇನ್ಮುಂದೆ ಕೇವಲ ₹500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ಬಿಪಿಎಲ್ ಕಾರ್ಡ್ ಇರೋರಿಗೆ ಮಾತ್ರ!
ಈ ವಿಚಾರದ ಬಗ್ಗೆ ಕೂಡ ಕೋರ್ಟ್ ತೀರ್ಪು ಕೊಡುವುದಕ್ಕೆ ಮುಖ್ಯ ಕಾರಣ, ಈಗ ಗಂಡ ಹೆಂಡತಿಯ ನಡುವೆ ಸಾಮರಸ್ಯ ಇರುವುದು ಕಡಿಮೆ ಆಗುತ್ತಾ ಹೋಗುತ್ತಿದೆ. ಸಣ್ಣಪುಟ್ಟ ವಿಚಾರಗಳ ನಡುವೆ ಆಗಾಗ ಜಗಳ ಅಡುತ್ತಲೇ ಇರುತ್ತಾರೆ.
ತಮ್ಮಿಬ್ಬರ ಹತ್ತಿರ ಇರುವ ಸಣ್ಣ ಪುಟ್ಟ ವಸ್ತುಗಳ ವಿಷಯಕ್ಕೂ ಈ ವಸ್ತು ನಿನ್ನದು, ಈ ವಸ್ತು ನನ್ನದು ಎನ್ನುವ ಚರ್ಚೆ ಶುರುವಾಗಿ, ಅದು ಜಗಳದಲ್ಲಿ ಕೊನೆಯಾಗುತ್ತಿದೆ. ಹಣದ ವಿಚಾರಕ್ಕೆ ಕೂಡ ಯಾರ ಹಣ ಏನು ಎನ್ನುವ ಬಗ್ಗೆ ಚರ್ಚೆ ನಡೆಯುತ್ತದೆ. ಇದೇ ಸಣ್ಣ ಪುಟ್ಟ ಕಾರಣಕ್ಕೆ ಜಗಳಗಳು ಶುರುವಾಗಿ, ಅದು ಸರಿಹೋಗದೆ ಬೆಳೆದು, ಗಂಡ ಹೆಂಡತಿ ನಡುವೆ ಮನಸ್ತಾಪ ಶುರುವಾಗಿ, ಅದು ಬಗೆಹರಿಯದೆ ವಿಚ್ಛೇದನ (Divorce) ಪಡೆಯಲು ಕೋರ್ಟ್ ಮೆಟ್ಟಿಲೇರುವುದು ಕೂಡ ಉಂಟು..
ಈ ಥರದ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದಲೇ ಕೋರ್ಟ್ ಇಂದ ಮುಖ್ಯವಾದ ತೀರ್ಪು ನೀಡಿದೆ. ಹೆಣ್ಣುಮಕ್ಕಳ ಈ ವಿಚಾರದ ಬಗ್ಗೆ ಕೋರ್ಟ್ ನೀಡಿರುವ ತೀರ್ಪು ಏನು ಎಂದರೆ, ಮದುವೆ ಸಮಯದಲ್ಲಿ ವಧುವಿಗೆ ಕೊಡುವ ಎಲ್ಲಾ ವಸ್ತುಗಳು, ಆಸ್ತಿ, ಹಣ, ಗಿಫ್ಟ್ ಇದೆಲ್ಲವು ಕೂಡ ಹುಡುಗಿಗೆ ಮಾತ್ರ ಸೇರಿದ್ದು, ತನ್ನ ವಸ್ತುಗಳನ್ನು ತನಗೆ ಸಿಕ್ಕ ಉಡುಗೊರೆಗಳನ್ನು ಆಕೆ ಯಾವಾಗ ಬೇಕಾದರು, ಹೇಗೆ ಬೇಕಾದರು ಬಳಸಿಕೊಳ್ಳಬಹುದು. ಅದರ ಮೇಲೆ ಗಂಡನಿಗೆ ಯಾವುದೇ ಹಕ್ಕು ಇರುವುದಿಲ್ಲ (Couple Law) ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ.
ಈ ವಿಷಯವಾಗಿ ತೀರ್ಪು ನೀಡಿರುವುದು ಛತ್ತೀಸ್ ಘಡದ ಹೈಕೋರ್ಟ್ (Chathisghad Court), ಸಾಮಾನ್ಯವಾಗಿ ಹೆಣ್ಣುಮಕ್ಕಳು ಬೇರೆ ಬೇರೆ ಸಂದರ್ಭಗಳಲ್ಲಿ ಸಾಕಷ್ಟು ಉಡುಗೊರೆಗಳನ್ನು ಪಡೆದಿರುತ್ತಾರೆ.
ನಿಮ್ಮ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬ ಇದೆಯಾ? ಹಾಗಿದ್ರೆ ಸರ್ಕಾರ ನಿಮಗೆ ಕೊಡುತ್ತೆ ಕೈತುಂಬಾ ಹಣ
ಅದು ಮದುವೆಗಿಂತ ಮೊದಲು, ಮದುವೆ ಸಂದರ್ಭದಲ್ಲಿ ಅಥವಾ ಮದುವೆ ನಂತರ ಯಾವಾಗಲೇ ಆದರೂ ಇರಬಹುದು.. ಸಂದರ್ಭ ಯಾವುದೇ ಇರಲಿ, ಆ ಗಿಫ್ಟ್ ಗಳು ಹೆಣ್ಣುಮಕ್ಕಳಿಗೆ ಮಕ್ಕಳಿಗೆ ಮಾತ್ರ ಸೇರುತ್ತದೆ, ಈ ಬಗ್ಗೆ ಕೋರ್ಟ್ ಸ್ತ್ರೀಧಾನ್ (Streedhan) ಪ್ರಕರಣದಲ್ಲಿ ಮುಖ್ಯವಾದ ನಿರ್ಧಾರ ತೆಗೆದುಕೊಂಡಿದೆ.
ಈ ತೀರ್ಪು ಮತ್ತು ನಿರ್ಧಾರದ ಪ್ರಕಾರ, ವಧುವಿಗೆ ಎಂಗೇಜ್ಮೆಂಟ್ ಸಮಯದಲ್ಲಿ, ಮದುವೆ ಸಮಯದಲ್ಲಿ ಅಥವಾ ಮದುವೆಯಾದ ನಂತರ ಹುಡುಗಿಗೆ ಸಿಗುವ ಆಸ್ತಿ (Girls Property), ಅಥವಾ ಹಣಕಾಸಿನ ಉಡುಗೊರೆಗಳ ವಿಷಯದಲ್ಲಿ ಅದರ ಸಂಪೂರ್ಣ ಹಕ್ಕು ಆಕೆಗೆ ಮಾತ್ರ ಇರುತ್ತದೆ, ಆಕೆಯ ವಸ್ತುಗಳ ಮೇಲೆ ಗಂಡನಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಛತ್ತೀಸ್ ಘಡ್ ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
High court judgement about couples right