Kannada Flag: ತಮಿಳುನಾಡಿನಲ್ಲಿ ಹಾರಿದ ಕನ್ನಡ ಬಾವುಟ! ಕಿಚ್ಚ ಸುದೀಪ್ ಖಡಕ್ ಪ್ರತಿಕ್ರಿಯೆ

Kannada Flag: ಸಿಸಿಎಲ್ 2026 ಟೂರ್ನಿಯಲ್ಲಿ ತಮಿಳುನಾಡಿನ ನೆಲದಲ್ಲಿ ಕರ್ನಾಟಕ ಬುಲ್ಡೋಜರ್ಸ್ ನಾಯಕ ಕಿಚ್ಚ ಸುದೀಪ್ ಕನ್ನಡ ಬಾವುಟ ಹಾರಿಸಿ ಹಿಂದಿನ ಅವಮಾನಗಳಿಗೆ ಖಡಕ್ ಉತ್ತರ ನೀಡಿದ್ದು ಕನ್ನಡಿಗರ ಸ್ವಾಭಿಮಾನಕ್ಕೆ ಹೊಸ ಉತ್ಸಾಹ ತುಂಬಿದೆ

  • ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾರಾಟ
  • ಕರ್ನಾಟಕ ಬುಲ್ಡೋಜರ್ಸ್ ನಾಯಕ ಕಿಚ್ಚ ಸುದೀಪ್
  • ಕನ್ನಡ ಅವಮಾನಕ್ಕೆ ಮೈದಾನದಲ್ಲೇ ಸಿಕ್ಕ ಉತ್ತರ

Kannada Flag: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2026ರ ಪಂದ್ಯಗಳು ಅಭಿಮಾನಿಗಳಿಗೆ ರೋಚಕತೆಯ ಜೊತೆಗೆ ಭಾವನಾತ್ಮಕ ಕ್ಷಣಗಳನ್ನೂ ನೀಡುತ್ತಿವೆ. ಅದರಲ್ಲೂ ತಮಿಳುನಾಡಿನ ನೆಲದಲ್ಲಿ ಕನ್ನಡ ಬಾವುಟ ಹಾರಿದ ಕ್ಷಣ, ಕನ್ನಡಿಗರ ಮನಸಲ್ಲಿ ವಿಶೇಷ ಸ್ಥಾನ ಪಡೆದಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ (Kiccha Sudeep) ಈ ಮೂಲಕ ಕನ್ನಡ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ.

ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಈ ಬಾರಿ ಅಸಾಧಾರಣ ಪ್ರದರ್ಶನ ನೀಡುತ್ತಿದೆ. ಆಡಿದ ಮೂರು ಪಂದ್ಯಗಳನ್ನೂ ಗೆದ್ದಿರುವ ತಂಡ ಸೆಮಿಫೈನಲ್ ಪ್ರವೇಶಿಸಿದೆ. 12 ವರ್ಷಗಳ ಬಳಿಕ ಕಪ್ ಗೆಲ್ಲುವ ಕನಸಿನೊಂದಿಗೆ ತಂಡ ಮುನ್ನಡೆಯುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಾಗಿದೆ.

ಅವಮಾನವಾದ ನೆಲದಲ್ಲೇ ಪ್ರತಿಕ್ರಿಯೆ

ಭಾನುವಾರ ಕೊಯಂಬತ್ತೂರಿನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭೋಜಪುರಿ ದಬಾಂಗ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಜಯ ಸಾಧಿಸಿತು. ಗೆಲುವಿನ ನಂತರ ಮೈದಾನದಲ್ಲಿ ಸಂಭ್ರಮಾಚರಣೆ ನಡೆಯುವ ವೇಳೆ, ಸುದೀಪ್ ಕನ್ನಡ ಬಾವುಟವನ್ನು ಎತ್ತಿ ಹಿಡಿದು ಹಾರಿಸಿದರು. ಕೆಲ ದಿನಗಳ ಹಿಂದೆ ಕನ್ನಡ ಬಾವುಟಕ್ಕೆ ಅವಮಾನವಾದ ಘಟನೆಗಳ ಹಿನ್ನೆಲೆ ಈ ಕ್ಷಣಕ್ಕೆ ವಿಶೇಷ ಅರ್ಥ ನೀಡಿತು.

ಕಳೆದ ವಾರಗಳಲ್ಲಿ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಭಕ್ತರ ವಾಹನಗಳ ಮೇಲೆ ಹಾರಿಸಿದ್ದ ಕನ್ನಡ ಧ್ವಜಗಳನ್ನು ತೆಗೆಸಿದ ಘಟನೆಗಳು ವಿವಾದಕ್ಕೆ ಕಾರಣವಾಗಿದ್ದವು. ವಿಶೇಷವಾಗಿ ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ನಡೆದ ಘಟನೆಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದವು. ಇಂತಹ ಸಂದರ್ಭದಲ್ಲಿ ಅದೇ ನೆಲದಲ್ಲಿ ನಿಂತು ಕನ್ನಡ ಬಾವುಟ ಹಾರಿಸಿರುವುದು ವಿರೋಧಿಗಳಿಗೆ ಖಡಕ್ ಸಂದೇಶವಾಗಿದೆ.

ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಕನ್ನಡಾಭಿಮಾನಿಗಳು ಸುದೀಪ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸೆಮಿಫೈನಲ್ ಎದುರಾಳಿ ಯಾರು?

ಜನವರಿ 31ರಂದು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ಚೆನ್ನೈ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಅದೇ ದಿನ ಸಂಜೆ 6 ಗಂಟೆಗೆ ಬೆಂಗಾಲ್ ಟೈಗರ್ಸ್ ಮತ್ತು ಕೇರಳ ಸ್ಟ್ರೈಕರ್ಸ್ ನಡುವಿನ ಎರಡನೇ ಸೆಮಿಫೈನಲ್ ನಡೆಯಲಿದೆ. ಈ ಎರಡೂ ಪಂದ್ಯಗಳಲ್ಲಿ ಗೆದ್ದ ತಂಡಗಳು ಫೆಬ್ರವರಿ 1ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories