ಮನೆಯಲ್ಲಿ ನಾಯಿ ಸಾಕಿರೋರಿಗೂ ಬಂತು ಹೊಸ ರೂಲ್ಸ್; ಕಟ್ಟಬೇಕು 10,000 ರೂ. ದಂಡ

Story Highlights

ಮನೆಯಲ್ಲಿ ಸಾಕಿದ ನಾಯಿ ಚುಚ್ಚುಮದ್ದು ಹಾಕದೆ ಇದ್ದು, ಯಾರಿಗಾದರೂ ಕಚ್ಚಿ ಸಮಸ್ಯೆ (Dog Bite) ಆದರೆ ನಾಯಿಯ ಮಾಲೀಕ ಭಾರಿ ಪ್ರಮಾಣದ ದಂಡ ತರಬೇಕಾಗುತ್ತದೆ.

ಸಾಕು ಪ್ರಾಣಿಗಳಲ್ಲಿ ಎಲ್ಲರಿಗೂ ಅಚ್ಚುಮೆಚ್ಚು ನಾಯಿ (Dog) ಇಂದು ನಗರ ಭಾಗಗಳಲ್ಲಿ ಇರಬಹುದು ಅಥವಾ ಗ್ರಾಮೀಣ ಪ್ರದೇಶದಲ್ಲಿ ಕೂಡ ನಾಯಿ ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಬೇರೆ ಬೇರೆ ಬ್ರೀಡ್ (different dog breeds) ನ ನಾಯಿಗಳನ್ನು ಮನೆಯಲ್ಲಿ ಸಾಕಲಾಗುತ್ತದೆ.

ಅದೇ ರೀತಿ ಬೀದಿ ನಾಯಿಗಳ ಸಂಖ್ಯೆಯು ಕೂಡ ಕಡಿಮೆ ಇಲ್ಲ, ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡಿರುವ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿವೆ.

ಗ್ಯಾಸ್ ಸಿಲಿಂಡರ್ Expiry ಡೇಟ್ ತಿಳಿಯೋದು ಹೇಗೆ? ಅಷ್ಟಕ್ಕೂ ಎಕ್ಸ್ಪೈರಿ ಆಗಿದ್ರೆ ಏನಾಗುತ್ತೆ ಗೊತ್ತಾ?

ದೇಶದಲ್ಲಿ ಹೆಚ್ಚುತ್ತಿದೆ ನಾಯಿ ಕಡಿತ ಪ್ರಕರಣಗಳು! (Dog bite cases increased)

ಬೀದಿ ನಾಯಿಗಳನ್ನು (Street dogs) ಕೂಡ ಕರೆದುಕೊಂಡು ಹೋಗಿ ಚುಚ್ಚು ಮದ್ದು(injection) ಹಾಕಿಸುವ ಬಗ್ಗೆ ಸರ್ಕಾರ ಗಮನ ಹರಿಸಿದೆ, ಸಂಬಂಧ ಪಟ್ಟ ಪಶು ಇಲಾಖೆಗೆ ಈ ಕೆಲಸ ಮಾಡಲು ಸರ್ಕಾರ ಆದೇಶ ನೀಡಿದೆ

ಅದೇ ರೀತಿ ಮನೆಯಲ್ಲಿ ಸಾಕಿರುವ ನಾಯಿಯ ಬಗ್ಗೆಯೂ ಕೂಡ ಹೆಚ್ಚಿನ ಕಾಳಜಿ ಮಾಡಬೇಕು, ಮನೆಯಲ್ಲಿ ಸಾಕಿದ ನಾಯಿ ಎನ್ನುವ ಕಾರಣಕ್ಕೆ ನಿರ್ಲಕ್ಷ ಮಾಡಿ ಅದಕ್ಕೆ ಚುಚ್ಚುಮದ್ದು ಹಾಕದೆ ಇದ್ದು, ಆ ನಾಯಿ ಯಾರಿಗಾದರೂ ಕಚ್ಚಿ ಸಮಸ್ಯೆ (Dog Bite) ಆದರೆ ನಾಯಿಯ ಮಾಲೀಕ ಭಾರಿ ಪ್ರಮಾಣದ ದಂಡ ತರಬೇಕಾಗುತ್ತದೆ.

ರೈತರಿಗೆ ಸಿಹಿ ಸುದ್ದಿ, ರಕ್ತ ಚಂದನ ಬೆಳೆಯಲು ಮತ್ತು ಮಾರಲು ಸರ್ಕಾರದ ಗ್ರೀನ್ ಸಿಗ್ನಲ್!

ಹೈಕೋರ್ಟ್ ಆದೇಶ ಏನು? (High court order)

Dog Biteದೇಶದಲ್ಲಿ ಪ್ರತಿದಿನ ಐದೂವರೆ ಸಾವಿರ ಪ್ರಕರಣಗಳು ನಾಯಿ ಕಡಿತದ ಕಾರಣಕ್ಕೆ ದಾಖಲೆಯಾಗುತ್ತಿವೆ. ಇವುಗಳಲ್ಲಿ ಅದೆಷ್ಟೋ ಪ್ರಕರಣಗಳು ರೆಬಿಸ್ (rabies) ರೋಗಕ್ಕೂ ಒಳಗಾಗಿದ್ದು ಇದೆ.

ಈ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ (Punjab and Haryana High court) ನಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಯಾವುದೇ ಸಾಕು ನಾಯಿಯ ಕಡಿತಕ್ಕೆ ಒಳಗಾಗಿದ್ದರೆ ಆತನಿಗೆ 10,000 ವರೆಗೂ ಪರಿಹಾರವನ್ನು ನೀಡಬೇಕು.

ನಾಯಿ ಕಡಿತದಿಂದ ಹಲ್ಲಿನ ಗುರುತು ಮನುಷ್ಯನ ದೇಹದ ಮೇಲೆ ಕಂಡುಬಂದರೆ ಅಂತಹ ಪ್ರತಿ ಗುರುತಿಗೆ 10,000ಗಳನ್ನು ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಅಷ್ಟೇ ಅಲ್ಲದೆ 0.2 ಸೆಂಟಿಮೀಟರ್ ಮಾಂಸ ಹರಿದು ಗಾಯವಾಗಿದ್ದರೆ ಅಂತಹ ಪ್ರಕರಣದಲ್ಲಿ 20 ಸಾವಿರ ರೂಪಾಯಿಗಳನ್ನು ದಂಡವಾಗಿ (penalty) ನೀಡಬೇಕು ಎಂದು ಹೈಕೋರ್ಟ್ ತೀರ್ಮಾನ ನೀಡಿದೆ.

8 ಕೋಟಿ ರೈತರಿಗೆ ಸಿಹಿ ಸುದ್ದಿ, ಮೋದಿ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ₹2000 ಜಮೆ

ನಾಯಿ ಕಚ್ಚಿದ ಪ್ರಕರಣಗಳಲ್ಲಿ ಪರಿಹಾರ ನೀಡಲು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ, ಈಗಾಗಲೇ ಪಂಜಾಬ್, ಹರಿಯಾಣ ಭಾಗದಲ್ಲಿ ಬಾಕಿ ಉಳಿದ 193 ಪ್ರಕರಣಗಳನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ಚಂಡಿಗಢ, ಹರಿಯಾಣ ಪಂಜಾಬ್ ಕೇಂದ್ರಾಡಳಿತ ಪ್ರದೇಶಗಳು ನಾಯಿ ಕಡಿತ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಹಣದ ಪರಿಹಾರವನ್ನು ಆಯಾ ಉಪ ವಿಭಾಗೀಯ ಕಚೇರಿಯಲ್ಲಿ ಸಮಿತಿ ರಚನೆ ಮಾಡಿ ನಿರ್ಧರಿಸಲು ತಿಳಿಸಲಾಗಿದೆ.

ನಾಯಿ ಕಚ್ಚಿದ ಪ್ರಕರಣದಲ್ಲಿ ಯಾರೇ ಆಗಿದ್ದರು ಸರಿಯಾದ ದಾಖಲೆಗಳ ಜೊತೆಗೆ ಪ್ರಕರಣ ದಾಖಲಿಸಿದರೆ ಅಂತ ಕೇಸ್ ಮೊದಲು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಅಷ್ಟೇ ಅಲ್ಲದೆ ಈ ಪ್ರಕರಣದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಕೇವಲ ನಾಲ್ಕು ತಿಂಗಳಲ್ಲಿ ಮುಕ್ತಾಯಗೊಳಿಸಬೇಕು ಎಂದು ತಿಳಿಸಲಾಗಿದೆ. ಒಟ್ಟಿನಲ್ಲಿ ನಾಯಿ ಕಡಿತಕ್ಕೆ ಒಳಗಾದವರಿಗೆ ಪರಿಹಾರ ಸಿಕ್ಕರೆ, ನಾಯಿ ಸಾಕುವವರು ಚುಚ್ಚುಮದ್ದು ಹಾಗೂ ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಾಯಿ ಸಾಕಬಹುದು ಇಲ್ಲವಾದರೆ, ಹೈ ಕೋರ್ಟ್ ಸೂಚನೆಯಂತೆ ಬಾರಿ ಮೊತ್ತದ ದಂಡ ತರಬೇಕಾಗುತ್ತದೆ.

new rules for those who keep dogs at home, 10,000 fine to be paid for Dog Bite

Related Stories