ಮಗನ ಆಸ್ತಿಯಲ್ಲಿ ಹೆಂಡತಿಗೆ ಮಾತ್ರವಲ್ಲ ತಾಯಿಗೂ ಇದೆ ಸಮಪಾಲು! ಹೊಸ ಕಾನೂನು
ಮಗನ ಮಕ್ಕಳಾಗಲಿ ಮಡದಿ ಆಗಲಿ ಆಕೆಗೆ ಆಸ್ತಿ ಪಾಲು (Property Share) ಕೊಡುವುದಿಲ್ಲ ಎಂದು ಹೇಳುವಂತಿಲ್ಲ, ಮಗನ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿಯೂ ಕೂಡ ತಾಯಿಗೆ ಸಂಪೂರ್ಣವಾದ ಹಕ್ಕು ಇರುತ್ತದೆ.
ಭಾರತದಲ್ಲಿ ಆಸ್ತಿ (property) ಬಗ್ಗೆ ಸಂಬಂಧಪಟ್ಟಹಾಗೆ ಸಾಕಷ್ಟು ಕಾಯ್ದೆ ಕಾನೂನುಗಳು (Law) ಇವೆ. ಹಿಂದೂ ಉತ್ತರಾಧಿಕಾರತ್ವ ಕಾಯ್ದೆಯ ಅನುಸಾರ ತಂದೆಯ ಆಸ್ತಿಯಲ್ಲಿ ಯಾರಿಗೆ ಹಕ್ಕಿದೆ ಎನ್ನುವ ಬಗ್ಗೆ ಹೇಳಲಾಗಿದೆ.
ಇದರ ಜೊತೆಗೆ ಆಸ್ತಿ ಹಂಚಿಕೆ ವಿಚಾರ ಬಂದಾಗ ಒಬ್ಬ ವ್ಯಕ್ತಿಯ ಹೆಂಡತಿ ಹಾಗೂ ಮಕ್ಕಳಿಗೆ ಎಷ್ಟು ಹಕ್ಕಿದೆಯೋ ತಾಯಿಗೂ ಕೂಡ ಅಷ್ಟೇ ಹಕ್ಕಿದೆ (Rights) ಎನ್ನುವ ಬಗ್ಗೆ ಕಾನೂನು ಕೂಡ ಇದೆ.
ಈ ನೀಲಿ ಬಣ್ಣದ ಮೊಟ್ಟೆ ಇಡೋ ಕೋಳಿ ಸಾಕಾಣಿಕೆ ಮಾಡಿದ್ರೆ ವರ್ಷಪೂರ್ತಿ ಲಕ್ಷಾಂತರ ಆದಾಯ
ತಾಯಿಯೇ ಪ್ರಮುಖ ಹಕ್ಕುದಾರಳು! (Mother rights in son’s property)
ಇತ್ತೀಚೆಗೆ ಹೈಕೋರ್ಟ್ (High court) ಗೆ ಪ್ರಕರಣ ಒಂದು ದಾಖಲಾಗಿದ್ದು ಅದರ ಬಗ್ಗೆ ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ (H. P sandesh) ಅವರ ಏಕ ಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ ತೀರ್ಮಾನ ನೀಡಿದ್ದಾರೆ.
ವಿಚಾರಣೆಯ ಹಿನ್ನೆಲೆ:
ಇನ್ನು ಘಟನೆಯ ಹಿನ್ನೆಲೆ ನೋಡುವುದಾದರೆ ಸುಶೀಲಮ್ಮ ಎನ್ನುವವರು ತನ್ನ ಮೃತ ಮಗ ಸಂತೋಷ ಅವರ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆಕೆಯ ಪತಿ ಬದುಕಿದ್ದರು ಕೂಡ ಮಗ ತೀರಿಕೊಂಡಾಗ ಮಗನ ಆಸ್ತಿಯಲ್ಲಿ ಹಕ್ಕಿದೆಯೋ ಇಲ್ಲವೋ ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗಿತ್ತು.
ಇನ್ನು ಕೋರ್ಟ್ ನಲ್ಲಿ ಈ ಕೇಸ್ ವಿಚಾರಣೆ (case investigation) ಆಗುವ ಹಂತದಲ್ಲಿಯೇ ಸುಶೀಲಮ್ಮ ಕೂಡ ಮರಣ ಹೊಂದಿದ್ದಾರೆ. ಆದರೆ ಮಗನ ಆಸ್ತಿಯಲ್ಲಿ ತಾಯಿಗೆ ಎಷ್ಟು ಹಕ್ಕಿದೆ ಎನ್ನುವುದರ ಬಗ್ಗೆ ಕೋರ್ಟ್ ತೀರ್ಮಾನ ನೀಡಿದೆ.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಹಬ್ಬದ ಬಂಪರ್ ಆಫರ್! ಡಿಸ್ಕೌಂಟ್ ಬೆಲೆ
ತಾಯಿ ಕೂಡ ಹಕ್ಕುದಾರಳು!
ಪುತ್ರನ ಆಸ್ತಿಯಲ್ಲಿ ಹೆಂಡತಿ ಹಾಗೂ ಮಕ್ಕಳಂತೆ ತಾಯಿ ಕೂಡ ಮೊದಲನೇ ವರ್ಗದ ವಾರಸುದಾರಳು ಆಗಲಿದ್ದಾಳೆ. ಆಕೆಗೂ ಆತನ ಆಸ್ತಿಯಲ್ಲಿ (Property) ಸಮಾನವಾದ ಪಾಲು ಸಿಗಬೇಕು ಎಂದು ತೀರ್ಮಾನ ನೀಡಿದೆ ನ್ಯಾಯಾಲಯ.
ಇತ್ತೀಚಿನ ದಿನಗಳಲ್ಲಿ ಆಸ್ತಿ ಹಕ್ಕಿನ ಬಗ್ಗೆ ಸಾಕಷ್ಟು ತಕರಾರುಗಳು ಕೂಡ ನಡೆಯುತ್ತವೆ, ಒಬ್ಬ ಮಗ ಮದುವೆಯಾದ ನಂತರ ಆತನ ಆಸ್ತಿಯಲ್ಲಿ ತಾಯಿಗೆ ಪಾಲು ಕೊಡಬೇಕು ಬೇಡವೋ ಎನ್ನುವುದರ ಬಗ್ಗೆ ಚರ್ಚೆಗಳು ಕೂಡ ನಡೆದಿದೆ
ತಾಯಿಯ ಗಂಡ ಅಂದರೆ ಮಗನ ಅಪ್ಪ ಬದುಕಿದ್ದರೆ ಆ ತಾಯಿಗೆ ಮಗನ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ಹಲವರು ಭಾವಿಸಿದ್ದರು, ಆದರೆ ಈಗ ಕೋರ್ಟ್ ನೀಡಿರುವ ಆದೇಶದ ಪ್ರಕಾರ ಮಗನ ಆಸ್ತಿಯಲ್ಲಿ ಪ್ರಥಮ ದರ್ಜೆಯ ವಾರಸುದಾರಳಾಗಿ ತಾಯಿಗೆ ಸಂಪೂರ್ಣ ಹಕ್ಕು ಇದೆ.
ಆಕೆಯ ಮಗನ ಮಕ್ಕಳಾಗಲಿ ಮಡದಿ ಆಗಲಿ ಆಕೆಗೆ ಆಸ್ತಿ ಪಾಲು (Property Share) ಕೊಡುವುದಿಲ್ಲ ಎಂದು ಹೇಳುವಂತಿಲ್ಲ, ಮಗನ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯಲ್ಲಿಯೂ ಕೂಡ ತಾಯಿಗೆ ಸಂಪೂರ್ಣವಾದ ಹಕ್ಕು ಇರುತ್ತದೆ.
ಚಿನ್ನದ ಖರೀದಿಗೂ ಬಿತ್ತು ಕಡಿವಾಣ; ಇದಕ್ಕಿಂತ ಹೆಚ್ಚು ಹಣ ಕೊಟ್ಟು ಚಿನ್ನ ಖರೀದಿಸುವ ಹಾಗಿಲ್ಲ
ಸಂತೋಷ್ ಅವರ ಪ್ರಕರಣವನ್ನು ತೆಗೆದುಕೊಂಡರೆ ಮೂಲ ಅರ್ಜಿದಾರರಾಗಿರುವ ಸುಶೀಲಮ್ಮ ಅವರಿಗೆ ಹಕ್ಕಿದೆ ಎಂಬುದನ್ನು ನ್ಯಾಯಪೀಠ ವಿವರಿಸಿದೆ. ಹಾಗೂ ಮೊದಲ ಹಂತದ ವಿಚಾರಣೆ ಸಂಪೂರ್ಣ ದೋಷಪೂರಿತವಾದದ್ದು ಎಂದು ಹೇಳಲಾಗಿದೆ.
ಸಂತೋಷ್ ಅವರು ತನ್ನ ತಾಯಿ ಹೆಂಡತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಆತ ಉಯಿಲು (will) ಬರೆದು ಇಡದೇ ಇದ್ದರೂ ಕೂಡ ಹೆಂಡತಿ ಮತ್ತು ಮಕ್ಕಳಿಗೆ ಮಾತ್ರವಲ್ಲದೇ ತಾಯಿ ಪ್ರಥಮ ದರ್ಜೆಯ ಆಸ್ತಿಯಲ್ಲಿ ಪಾಲು ನೀಡಬೇಕಾಗುತ್ತದೆ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.
Not only the wife but also the mother has an equal share in the son’s property