ಚಿನ್ನದ ಖರೀದಿಗೂ ಬಿತ್ತು ಕಡಿವಾಣ; ಇದಕ್ಕಿಂತ ಹೆಚ್ಚು ಹಣ ಕೊಟ್ಟು ಚಿನ್ನ ಖರೀದಿಸುವ ಹಾಗಿಲ್ಲ
ಈಗಂತೂ ಹಬ್ಬದ ಸೀಸನ್ (festival season) ಹಾಗಾಗಿ ಭಾರತೀಯರು ಹೆಚ್ಚು ಚಿನ್ನ ಖರೀದಿಯತ್ತ ಒಲವು ತೋರಿಸುತ್ತಿದ್ದಾರೆ. ಚಿನ್ನದ ಬೆಲೆಯಲ್ಲಿ (gold rate fluctuation) ಎಷ್ಟೇ ವ್ಯತ್ಯಾಸವಾಗುತ್ತಿದ್ದರು ಎಷ್ಟೇ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದರು ಕಷ್ಟಪಟ್ಟಾದರೂ ಬಂಗಾರ ಖರೀದಿ ಮಾಡುವುದನ್ನ ಭಾರತೀಯರು ಬಿಡುವುದಿಲ್ಲ
ಹಾಗಾಗಿ ಚಿನ್ನದ ಅಂಗಡಿಗಳು ಕೂಡ ಸದಾ ತುಂಬಿ ತುಳುಕುತ್ತದೆ ಎನ್ನಬಹುದು. ಹಾಗೆ ನೀವು ಕೂಡ ಚಿನ್ನ ಖರೀದಿಸಲು (Buy Gold) ಬಯಸಿದರೆ ಈ ಹೊಸ ನಿಯಮವನ್ನು (new rules for gold purchase) ತಿಳಿದುಕೊಳ್ಳಲೇಬೇಕು
ಚಿನ್ನ ಖರೀದಿಯ ಮೇಲೆ ಸರ್ಕಾರ ಹೊಸ ನಿಯಮ ಹೇರಿಕೆ ಮಾಡಿದ್ದು, ಇನ್ನು ಮುಂದೆ ಇಷ್ಟು ಹಣಕ್ಕಿಂತ ಹೆಚ್ಚು ಹಣವನ್ನು ಕೊಟ್ಟು ಚಿನ್ನ ಖರೀದಿ ಮಾಡುವ ಹಾಗಿಲ್ಲ!
ನವೆಂಬರ್ 1ರಿಂದ ದೇಶಾದ್ಯಂತ ಹೊಸ ರೂಲ್ಸ್! ಹೊಸ ನಿಯಮಗಳನ್ನು ತಿಳಿದುಕೊಳ್ಳಿ
ಚಿನ್ನ ಖರೀದಿಗೆ ಹೊಸ ನಿಯಮ; (new rules for gold purchase)
ಚಿನ್ನ ಖರೀದಿ ಮಾಡಲು ಹೋಗುವುದಾದರೆ ಸರ್ಕಾರ ವಿಧಿಸಿರುವ ಈ ಹೊಸ ನಿಯಮಗಳನ್ನು ತಿಳಿದುಕೊಳ್ಳಲೇಬೇಕು. ನಾವು ನಗದು ರೂಪದಲ್ಲಿ (cash payment) ಎಷ್ಟು ಹಣ ಕೊಟ್ಟು ಚಿನ್ನ ಖರೀದಿಸಬಹುದು? ಚಿನ್ನ ಖರೀದಿಯ ಮೇಲಿನ ಮಿತಿ ಎಷ್ಟು ಎನ್ನುವ ಕುತೂಹಲ ನಿಮ್ಮಲ್ಲಿ ಇದ್ದರೆ ಈ ಲೇಖನದಲ್ಲಿ ಉತ್ತರ ನೀಡುತ್ತಿದ್ದೇವೆ.
ಎರಡು ಲಕ್ಷಕ್ಕಿಂತ ಅಧಿಕ ಹಣ ನೀಡುವ ಹಾಗಿಲ್ಲ!
ನಿಜವಾಗಿ ಚಿನ್ನ ಖರೀದಿಯ ಮೇಲೆ ಮಿತಿ (limitation for gold purchase) ಇದೆಯಾ ಎಂದು ನೋಡುವುದಾದರೆ ಖಂಡಿತವಾಗಿಯೂ ಇಲ್ಲ.. ನೀವು ಎಷ್ಟು ಚಿನ್ನವನ್ನ ಬೇಕಾದರೂ ಖರೀದಿ ಮಾಡಬಹುದು, ಆದರೆ ಚಿನ್ನದ ಅಂಗಡಿಯವನ ಬಳಿ ಅಥವಾ ಒಂದು ವಹಿವಾಟಿನಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣವನ್ನು ಮಾರಾಟಗಾರರು ತೆಗೆದುಕೊಳ್ಳುವಂತಿಲ್ಲ.
ಒಂದು ವೇಳೆ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಮಾರಾಟಗಾರರು ತೆಗೆದುಕೊಂಡರೆ ಅವರ ಮೇಲೆ ವಿಶೇಷವಾದ ತನಿಖೆ ನಡೆಸಬಹುದು. ಆದಾಯ ಇಲಾಖೆಯಿಂದ ದಂಡ ಕೂಡ ಬೀಳಬಹುದು.
ಹಾಗಾಗಿ ಮಾರಾಟಗಾರರು ( sellers) 2 ಲಕ್ಷಕ್ಕಿಂತ ಹೆಚ್ಚಿನ ನಗದು ತೆಗೆದುಕೊಂಡು ಚಿನ್ನ ಮಾರಾಟ ಮಾಡುವ ಹಾಗಿಲ್ಲ. ಅಲ್ಲಿಗೆ ಚಿನ್ನ ಖರೀದಿ ಮಾಡುವವರು ಕೂಡ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣವನ್ನು ಕೊಟ್ಟು ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಅರ್ಥ.
ಗೂಗಲ್ ಪೇ ನಿಂದ ಪಡೆಯಿರಿ ₹15,000 ಸಾಲ, ಯಾವುದೇ ಗ್ಯಾರಂಟಿ ಕೊಡುವ ಅಗತ್ಯವಿಲ್ಲ
ಮಿತಿಗಿಂತ ಹೆಚ್ಚಿನ ಖರೀದಿ ಮಾಡಿದ್ರೆ ದಾಖಲೆ ಕೊಡಬೇಕು!
ಇನ್ನು ಚಿನ್ನ ಖರೀದಿ ಮಾಡುವಾಗ 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣವನ್ನು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಆದಾಯ ತೆರಿಗೆ ಕಾಯ್ದೆಯ (income tax) ಅಡಿಯಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣವನ್ನು ತೆಗೆದುಕೊಂಡು ಮಾರಾಟಗಾರರು ದಂಡ ಪಾವತಿಸಬೇಕಾಗುತ್ತದೆ.
ಇನ್ನು ಒಂದು ವೇಳೆ ನೀವು ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಕೊಟ್ಟು ಚಿನ್ನ ಖರೀದಿ ಮಾಡುವುದೇ ಆಗಿದ್ದರೆ, ನಿಮ್ಮ ಆಧಾರ್ ಕಾರ್ಡ್ (Aadhaar card) ಪ್ಯಾನ್ ಕಾರ್ಡ್ (PAN card) ಸೇರಿದಂತೆ ಗುರುತಿನ ಪುರಾವೆಯನ್ನು ನೀಡಬೇಕು.
ಗಂಡ-ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 9 ಸಾವಿರ ರೂ.! ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಆದರೆ ಒಂದು ವಹಿವಾಟಿನಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೊತ್ತದ ನಗದು ವ್ಯವಹಾರ ಮಾಡುವುದಾದರೆ ಮಾರಾಟಗಾರರಿಗಾಗಲಿ ನಿಮಗಾಗಲಿ ಯಾವುದೇ ಸಮಸ್ಯೆ ಇಲ್ಲ. ಪುರಾವೆಗಳನ್ನು ಒದಗಿಸುವ ಅಗತ್ಯವಿಲ್ಲ. ಹಾಗಾಗಿ ಹಬ್ಬಕ್ಕೆ ಚಿನ್ನ ಖರೀದಿಸುವ ಸಂಭ್ರಮದಲ್ಲಿ ಇದ್ರೆ ಆದಾಯ ತೆರಿಗೆಯ ಈ ನಿಯಮವನ್ನು ತಿಳಿದುಕೊಳ್ಳಿ.
Gold should not be bought for more than this amount