ಕೇಂದ್ರ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಇರುವ ಇಂಥವರಿಗೆ ಸಿಗಲಿದೆ ಪ್ರತಿ ತಿಂಗಳು ₹500 ರೂಪಾಯಿ
ರೈತರಿಗೆ, ಹೆಂಗಸರಿಗೆ, ಮಕ್ಕಳಿಗೆ, ಹಿರಿಯರಿಗೂ ಕೂಡ ಉಪಯುಕ್ತ ಅಗುವಂಥ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಅಂಥ ಯೋಜನೆಗಳಲ್ಲಿ ಒಂದು ನಿಕ್ಷಯ ಪೋಷಕ ಯೋಜನೆ ಆಗಿದೆ.
Govt Scheme : ನಮ್ಮ ದೇಶದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎರಡು ಕೂಡ ಜನರಿಗೆ ಪ್ರಯೋಜನಕಾರಿಯಾಗುವ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಿಂದ ನಮ್ಮ ದೇಶದಲ್ಲಿ ಕಷ್ಟ ಪಡುತ್ತಿರುವ ಜನರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ.
ರೈತರಿಗೆ, ಹೆಂಗಸರಿಗೆ, ಮಕ್ಕಳಿಗೆ, ಹಿರಿಯರಿಗೂ ಕೂಡ ಉಪಯುಕ್ತ ಅಗುವಂಥ ಯೋಜನೆಗಳನ್ನು (Schemes) ಜಾರಿಗೆ ತರಲಾಗುತ್ತಿದ್ದು, ಅಂಥ ಯೋಜನೆಗಳಲ್ಲಿ ಒಂದು ನಿಕ್ಷಯ ಪೋಷಕ ಯೋಜನೆ ಆಗಿದೆ. ಈ ಯೋಜನೆ ಯಾವುದು? ಇದರಿಂದ ಯಾರಿಗೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..
ನಮ್ಮ ಸರ್ಕಾರವು ಭಾರತ ನಾಗರೀಕರಿಗೆ ಹಲವು ವಿಭಾಗಳಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳಿಂದ ಜನರಿಗೆ ಬಹಳಷ್ಟು ಉಪಯೋಗ ಇದ್ದರು ಸಹ, ಈ ಯೋಜನೆಗಳು ಇದೆ ಎನ್ನುವ ವಿಷಯವೇ ಜನರಿಗೆ ಸರಿಯಾಗಿ ಗೊತ್ತಿರುವುದಿಲ್ಲ..
ಟ್ರಾಕ್ಟರ್ ಖರೀದಿಗೆ ಹೊಸ ಸಬ್ಸಿಡಿ ಯೋಜನೆ! ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಯಾಕೆಂದರೆ ಅಂಥ ಯೋಜನೆಗಳ ಬಗ್ಗೆ ಜನರಿಗೆ ಯಾರು ತಿಳಿಸಿರುವುದಿಲ್ಲ. ಹೀಗೆ ಹೆಚ್ಬು ಪ್ರಖ್ಯಾತಿ ಪಡೆದಿರುವ ಯೋಜನೆಗಳಲ್ಲಿ ಒಂದು, ನಿಕ್ಷಯ ಪೋಷಕ ಯೋಜನೆ ಆಗಿದೆ. ಈ ಯೋಜನೆಯನ್ನು ಜಾರಿಗೆ ತಂದಿರುವುದು ಟಿಬಿ ಖಾಯಿಲೆ ಹೊಂದಿರುವ ಜನರಿಗಾಗಿ ಎಂದು ಮಾಹಿತಿ ಸಿಕ್ಕಿದೆ.
ಒಬ್ಬ ವ್ಯಕ್ತಿಗೆ ಟಿಬಿ ಖಾಯಿಲೆ ಇದ್ದು, ಅವರಿಗೆ ಇರುವ ಈ ಸಮಸ್ಯೆ ಇದ್ದು ಜೊತೆಗೆ ಹಣಕಾಸಿನ ವಿಷಯದಲ್ಲಿ ಕಷ್ಟದಲ್ಲಿದ್ದಾರೆ ಎಂದರೆ, ಅವರಿಗೆ ನಿಕ್ಷಯ ಯೋಜನೆಯ ಲಾಭ ಸಿಗುತ್ತದೆ. ಟಿಬಿ ಖಾಯಿಲೆ ಇರುವವರು ವೈದ್ಯರು ಹೇಳುವ ಎಲ್ಲಾ ಔಷಧಿಗಳ ಸೇವನೆ ಮಾಡಬೇಕು, ಹಾಗೆಯೇ ಆಹಾರದ ವಿಚಾರದಲ್ಲಿ ಸಹ, ಪಥ್ಯ ಇರಬೇಕಾಗುತ್ತದೆ.
ಇದೆಲ್ಲಾ ಮಾಡಲು ಆರ್ಥಿಕ ಸಹಾಯ (Financial Support) ಇಲ್ಲದೆ ಹೋದರೆ, ಕಷ್ಟ ಆಗುತ್ತದೆ ಎನ್ನುವ ಕಾರಣಕ್ಕೆ, ಕೇಂದ್ರ ಸರ್ಕಾರವು ಟಿಬಿ ರೋಗಿಗಳಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ.
ಟಿಬಿ ಎನ್ನುವ ಈ ಖಾಯಿಲೆ ಹಲವು ವರ್ಷಗಳಿಂದ ನಮ್ಮ ದೇಶದಲ್ಲಿದೆ, ನಮ್ಮ ದೇಶವನ್ನು ಟಿಬಿ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಸರ್ಕಾರ ಬಹಳ ಕಷ್ಟಪಡುತ್ತಿದೆ, ಹಲವು ಸೂಚನೆಗಳನ್ನು ನೀಡಿ ಕ್ರಮಗಳನ್ನು ತೆಗೆದುಕೊಂಡಿದೆ.
ಹಾಗೆಯೇ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡ ಮಾಡುತ್ತಿದೆ. ಆದರೆ ನಮ್ಮ ದೇಶದಲ್ಲಿ ಟಿಬಿ ಖಾಯಿಲೆ ಇನ್ನು ಪೂರ್ತಿಯಾಗಿ ಮುಕ್ತವಾಗಿಲ್ಲ. ಈ ಖಾಯಿಲೆ ಇರುವವರಿಗೆ ಪೌಷ್ಟಿಕ ಆಹಾರ ಬಹಳ ಮುಖ್ಯ.
ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಕ್ಕೂ ಮುಂಚೆಯೇ ಅರ್ಜಿ ಹಾಕಿರುವವರಿಗೆ ಹೊಸ ಸೂಚನೆ ತಂದ ಸರ್ಕಾರ!
ಕಷ್ಟದಲ್ಲಿದ್ದು, ಜಾಸ್ತಿ ಹಣ ಇಲ್ಲದೆ ಇರುವವರಿಗೆ ಪೌಷ್ಟಿಕ ಆಹಾರ ಪಡೆದು, ಅಡುಗೆ ಮಾಡಿ ಅದನ್ನು ಸೇವಿಸುವುದು ಕೂಡ ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಬಡವರಿಗೆ ಟಿಬಿ ಇದ್ದರೆ, ಅವರಿಗೆ ಈ ಯೋಜನೆ ಇಂದ ಸಹಾಯ ಆಗಬೇಕು, ಪೌಷ್ಟಿಕ ಆಹಾರ ಸಿಗಬೇಕು ಎಂದು ಸರ್ಕಾರವು ನಿಕ್ಷಯ ಪೋಷಣ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ಪೌಷ್ಟಿಕ ಆಹಾರ ಸಿಗುವ ಸೇವೆಯನ್ನು ಮಾಡಲಾಗುತ್ತಿದೆ..
ಪ್ರಸ್ತುತ ನಮ್ಮ ದೇಶದಲ್ಲಿ ಸುಮಾರು 13 ಲಕ್ಷ ಟಿಬಿ ರೋಗಿಗಳು ಇದ್ದು, ಅವರಿಗೆಲ್ಲಾ ಪೌಷ್ಠಿಕ ಆಹಾರ ಸಿಗಬೇಕು ಎಂದು ಸರ್ಕಾರವು ನಿಕ್ಷಯ ಪೋಷಣ ಯೋಜನೆಯ ಮೂಲಕ ಅವರಿಗೆ ತಿಂಗಳಿಗೆ, ₹500 ರೂಪಾಯಿ ಧನ ಸಹಾಯ ಮಾಡುತ್ತಿದೆ..
ಕ್ಷಯ ರೋಗ ಇರುವವರಿಗೆ ಉತ್ತಮವಾದ ಪೌಷ್ಟಿಕ ಆಹಾರ ಸಿಕ್ಕಿ, ಅದನ್ನು ಅವರು ಸೇವಿಸುತ್ತಾ ಬಂದರೆ, ಅವರಲ್ಲಿ ಮರಣ ಪ್ರಮಾಣ ಕಡಿಮೆ ಆಗುತ್ತದೆ. ಇದರಿಂದ ಕ್ಷಯ ರೋಗ ಇರುವವರು ಹಣಕಾಸಿನ ವಿಷಯದಲ್ಲಿ ಕಷ್ಟದಲ್ಲಿ ಇರುವವರು ಈ ಯೋಜನೆಯ ಲಾಭ ಪಡೆಯಬಹುದು.
ಟ್ರಾಕ್ಟರ್ ಖರೀದಿಗೆ ಹೊಸ ಸಬ್ಸಿಡಿ ಯೋಜನೆ! ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಈ ನಿಕ್ಷಯ ಯೋಜನೆಯ ಪ್ರಯೋಜನ ಪಡೆಯಲು ಟಿಬಿ ರೋಗಿಗಳ ಹತ್ತಿರ ಬಿಪಿಎಲ್ ಕಾರ್ಡ್ (BPL Card) ಇರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಲು, ನಿಕ್ಷಯ ಪೋರ್ಟಲ್ ಗೆ ಭೇಟಿ ನೀಡಿ, ರಿಜಿಸ್ಟರ್ ಮಾಡಿಕೊಳ್ಳಬಹುದು..
ಇದಕ್ಕಾಗಿ ರೋಗಿಗಳ ಬಳಿ ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details) ಮತ್ತು ಟಿಬಿ ಇರುವ ಬಗ್ಗೆ ಡಾಕ್ಟರ್ ಕೊಟ್ಟಿರುವ ಪ್ರಮಾಣ ಪತ್ರದ ಅವಶ್ಯಕತೆ ಇರುತ್ತದೆ. ಹಾಗೆಯೇ ನಿಮ್ಮ ಡಯೆಟ್ ಚಾರ್ಟ್ ಬೇಕಾಗುತ್ತದೆ, ಇದೆಲ್ಲವೂ ಇದ್ದರೆ PHC ಅಥವಾ CHC ಕಚೇರಿಗೆ ಭೇಟಿ ನೀಡಿ, ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Those who have BPL card will get Rs 500 per month from central government