ಮಹಿಳೆಯರಿಗೆ ಸಿಗಲಿದೆ ಉಚಿತ 6,000 ರೂಪಾಯಿ, ಕೇಂದ್ರ ಸರ್ಕಾರದ ಘೋಷಣೆ! ಅರ್ಜಿ ಸಲ್ಲಿಸಿ

ಸಾಮಾನ್ಯವಾಗಿ ಪುರುಷರು ದುಡಿಯುವುದು, ಹಣ ಗಳಿಸುವುದು (Earning) ತಮ್ಮ ಸಂಸಾರ ನೋಡಿಕೊಳ್ಳುವುದು ಇದೆಲ್ಲವೂ ಸಹಜ. ಆದರೆ ಇದೇ ಕೆಲಸವನ್ನು ಮಹಿಳೆಯರು ಕೂಡ ಮಾಡಬಹುದು
ಅದಕ್ಕಾಗಿ ಮುಖ್ಯವಾಗಿ ಮಹಿಳೆಯರ ಸಬಲೀಕರಣಕ್ಕಾಗಿ (women empowerment) ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಇದರಿಂದಾಗಿ ಮಹಿಳೆಯರು ಸ್ವಾವಲಂಬನೆಯಿಂದ ಬದುಕಲು ಸಾಧ್ಯವಾಗುತ್ತದೆ
ದೇಶದಲ್ಲಿ ಇರುವ ಸಾಕಷ್ಟು ಬಡ ಮಹಿಳೆಯರು ಗರ್ಭಾವಸ್ಥೆಯಲ್ಲಿ ಇರುವಾಗ ಪೌಷ್ಟಿಕಾಂಶ ಕೊರತೆ ಅನುಭವಿಸುವ ಸಾಧ್ಯತೆಗಳು ಇರುತ್ತದೆ, ಇದನ್ನು ಮನಗಂಡ ಕೇಂದ್ರ ಸರ್ಕಾರ ಅಂತಹ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು (Scheme) ಜಾರಿಗೆ ತಂದಿದೆ.
ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ; ಕೂಡಲೆ ಅರ್ಜಿ ಸಲ್ಲಿಸಿ
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ
2014 ರಿಂದ ಅಧಿಕಾರಕ್ಕೆ ಬಂದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi) ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ
ಅದರಲ್ಲೂ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಮಹಿಳೆಯರ ಆರೋಗ್ಯಕ್ಕಾಗಿ (women health) ಬೇಕಾಗಿರುವ ಯೋಜನೆಗಳನ್ನು ಕೂಡ ಜಾರಿಗೊಳಿಸಿದ್ದಾರೆ. ಅಂತಹ ಯೋಜನೆಗಳಲ್ಲಿ ಪ್ರಧಾನಮಂತ್ರಿ ಮಾತ್ರ ವಂದನ ಯೋಜನೆ ಕೂಡ ಒಂದು. ಈ ಯೋಜನೆಯ ಲಾಭ ಯಾರು ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಬೆಳ್ಳಂಬೆಳಗ್ಗೆ ATM ಕಾರ್ಡ್ ಬಗ್ಗೆ ನಿಯಮವನ್ನು ಬದಲಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಗರ್ಭಿಣಿಯವರಿಗಾಗಿಯೇ ಜಾರಿಗೆ ತರಲಾದ ಯೋಜನೆ!

ಯೋಜನೆಯ ಅಡಿಯಲ್ಲಿ ಗರ್ಭಿಣಿ ಸ್ತ್ರೀಯರಿಗೆ (pregnant women) 6000 ರೂ.ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಮೂರು ಕಂತಿನಲ್ಲಿ ಆರು ಸಾವಿರ ರೂಪಾಯಿಗಳನ್ನು ನೀಡಲಾಗುವುದು. ಮಗು ಜನನ ಪೂರ್ವದಲ್ಲಿ ಎರಡು ಕಂತಿನಲ್ಲಿ ಹಾಗೂ ಮಗು ಜನನದ ನಂತರ ಒಂದು ಕಂತಿನಲ್ಲಿ ಹಣ ನೀಡಲಾಗುತ್ತದೆ.
ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್, ಪೋಸ್ಟ್ ಆಫೀಸ್ ಹೊಸ ಸ್ಕೀಮ್, ಉತ್ಸುಕದಲ್ಲಿ ಜನರು
ಯೋಜನೆಗೆ ಯಾರು ಅರ್ಹರು?
19 ವರ್ಷ ಮೇಲ್ಪಟ್ಟ ಗರ್ಭಿಣಿ ಸ್ತ್ರೀಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಮೊದಲು 5,000ಗಳನ್ನು ಹಾಗೂ ಮಗುವಿನ ಜನನದ ನಂತರ 1,000ಗಳನ್ನು ನೀಡಲಾಗುತ್ತದೆ. ಆರ್ಥಿಕ ಸಹಾಯವನ್ನು ಪಡೆದುಕೊಂಡು ಗರ್ಭಿಣಿ ಸ್ತ್ರೀಯರು ಪೌಷ್ಟಿಕ ಯುಕ್ತ ಆಹಾರವನ್ನು ಸೇವಿಸಬೇಕು ಎನ್ನುವುದು ಸರ್ಕಾರದ ಉದ್ದೇಶ.
ಇನ್ನು ಎರಡನೇ ಮಗುವಿಗೂ ಕೂಡ ಯೋಜನೆ ವಿಸ್ತರಣೆ ಆಗಿದ್ದು, ಎರಡನೇ ಮಗುವಿನ ಗರ್ಭಿಣಿ ಆಗಿರುವ ಮಹಿಳೆ 6,000ಗಳನ್ನು ಒಂದೇ ಕಂತಿನಲ್ಲಿ ಪಡೆದುಕೊಳ್ಳುತ್ತಾರೆ.
ಈ ಯೋಜನೆಯಿಂದ 14,103 ಕೋಟಿ ಹಣವನ್ನು ಸುಮಾರು 3.11 ಕೋಟಿ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಯಶಸ್ವಿಯಾಗಿದ್ದು, ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಗರ್ಭಿಣಿ ಸ್ತ್ರೀಯರು ಹತ್ತಿರದ ಅಂಗನವಾಡಿ ಶಿಕ್ಷಕರು ಅಥವಾ ಕಾರ್ಯಕರ್ತರನ್ನು ಸಂಪರ್ಕಿಸಬಹುದು ಅಥವಾ ಸ್ಥಳೀಯ ಆಶಾ ಕಾರ್ಯಕರ್ತರು ಕೂಡ ಈ ಬಗ್ಗೆ ಮಾಹಿತಿ ನೀಡುತ್ತಾರೆ.
ಮನೆ ಕಟ್ಟಬೇಕೆಂದಿರುವ ಬಡವರಿಗೆ ಸಿಹಿಸುದ್ದಿ, ಊಹಿಸದ ದರದಲ್ಲಿ ಸಾಧ್ಯ 2BHK ಮನೆ
ನೀವು ಗರ್ಭಿಣಿ ಆಗಿರುವುದಕ್ಕೆ ದಾಖಲೆಗಳನ್ನು ನೀಡಿ ಹೆಲ್ತ್ ಚೆಕಪ್ (health checkup) ಮಾಡಿಸಿಕೊಂಡಿರುವ ಬಗ್ಗೆಯೂ ದಾಖಲೆ ನೀಡಿದರೆ ನೀವು ಸರ್ಕಾರದಿಂದ ಸಿಗುವ ಉಚಿತ ಆರು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.
Women will get free 6,000 rupees, central government announcement







