ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಪಡೆಯಲು ನೀವು ಮಾಡಬೇಕಾದ್ದು ಇಷ್ಟೇ!

ಈ ಹೊಸ ಯೋಜನೆಯ ಮೂಲಕ ದೇಶದ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದೆ. ಇದರಿಂದ ಹೆಣ್ಣುಮಕ್ಕಳು ಸ್ವಯಂ ಉದ್ಯೋಗದಿಂದ ಮನೆಯಲ್ಲೇ ಕೂತು ಹಣ ಸಂಪಾದನೆ ಮಾಡಬಹುದು.

Bengaluru, Karnataka, India
Edited By: Satish Raj Goravigere

ದೇಶದಲ್ಲಿ ಎಲ್ಲಾ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು, ಸ್ವಯಂ ಉದ್ಯೋಗ (Self Employment) ಸೃಷ್ಟಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.

ಈ ಯೋಜನೆಗಳಿಂದ ದೇಶದ ಮಹಿಳೆಯರು ಆರ್ಥಿಕವಾಗಿ ಸಹಾಯ ಪಡೆಯುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಹಾಯ ಮಾಡುವುದಕ್ಕೆ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ..

If you have this document, you will also get a free sewing machine

ಈ ಹೊಸ ಯೋಜನೆಯ ಮೂಲಕ ದೇಶದ ಹೆಣ್ಣುಮಕ್ಕಳಿಗೆ ಹೊಲಿಗೆ ಯಂತ್ರಗಳನ್ನು (free sewing machine) ನೀಡಲಾಗುತ್ತಿದೆ. ಇದರಿಂದ ಹೆಣ್ಣುಮಕ್ಕಳು ಸ್ವಯಂ ಉದ್ಯೋಗದಿಂದ ಮನೆಯಲ್ಲೇ ಕೂತು ಹಣ ಸಂಪಾದನೆ ಮಾಡಬಹುದು.

ಡೈರಿ ಫಾರ್ಮ್ ಸ್ಥಾಪಿಸಲು ಸರ್ಕಾರದ ಸಹಾಯ ಧನ! 90% ಸಬ್ಸಿಡಿ ಸಿಗುವ ಯೋಜನೆಗೆ ಇಂದೇ ಅಪ್ಲೈ ಮಾಡಿ

ಈ ಯೋಜನೆಯ ಪ್ರಯೋಜನ ಪಡೆಯಲು ಹೆಣ್ಣುಮಕ್ಕಳು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ, ಇದರ ಪ್ರಯೋಜನ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಮತ್ತು ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

*ಯೋಜನೆಗೆ ಅರ್ಜಿ ಸಲ್ಲಿಸುವವರಲ್ಲಿ ಅರ್ಹತೆ ಹೊಂದಿರುವ ಮಹಿಳೆಯರು ಪ್ರಯೋಜನ ಪಡೆಯುತ್ತಾರೆ.

*ಹೊಲಿಗೆ ಯಂತ್ರದ ಪ್ರಯೋಜನ ಪಡೆಯುವ ಮಹಿಳೆಯರ ವಯಸ್ಸು 18 ವರ್ಷದಿಂದ 40 ವರ್ಷಗಳ ಒಳಗೆ ಇರಬೇಕು.

*ಹಣಕಾಸಿನ ವಿಷಯದಲ್ಲಿ ಇವರು ಬಡತನದಲ್ಲಿ ಇರಬೇಕು.

*ಅರ್ಜಿ ಹಾಕುವ ಮಹಿಳೆಯ ವಾರ್ಷಿಕ ಆದಾಯ ₹12,00,000ಕ್ಕಿಂತ ಜಾಸ್ತಿ ಇರಬಾರದು.

*ವಿಧವೆ ಮಹಿಳೆಯರು ಅಂಗವಿಕಲ ಮಹಿಳೆಯರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದು.

*ಭಾರತದ ಎಲ್ಲಾ ರಾಜ್ಯಗಳಲ್ಲಿ 50,000 ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತದೆ.

ಸಿಹಿ ಸುದ್ದಿ! ಮಳೆಯಿಂದ ಬೆಳೆ ನಾಶ ಆಗಿರುವ ರೈತರಿಗೆ ಸರ್ಕಾರದಿಂದ ₹15,000 ಪರಿಹಾರ, ಇಂದೇ ಅರ್ಜಿ ಸಲ್ಲಿಸಿ

free sewing machine from central governmentಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

*ಬ್ಯಾಂಕ್ ಪಾಸ್ ಬುಕ್
*ಆಧಾರ್ ಕಾರ್ಡ್
*ಏಜ್ ಪ್ರೂಫ್
*ಪಾಸ್ ಪೋರ್ಟ್ ಸೈಜ್ ಫೋಟೋ

ಈ ಯೋಜನೆಗೆ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ

*ಮೊದಲಿಗೆ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು

*ಇಲ್ಲಿ ಅಪ್ಲಿಕೇಶನ್ ಫಾರ್ಮ್ ಡೌನ್ಲೋಡ್ ಮಾಡಿ

*ಇಲ್ಲಿ ಅರ್ಜಿ ಹಾಕುವವರ ಹೆಸರು, ಅಡ್ರೆಸ್, ಹಾಗೂ ಇನ್ನಿತರ ಮಾಹಿತಿಗಳನ್ನು ಸರಿಯಾಗಿ ಫಿಲ್ ಮಾಡಿ.

*ಅಪ್ಲಿಕೇಶನ್ ಜೊತೆಗೆ ಆಧಾರ್ ಕಾರ್ಡ್, ಏಜ್ ಪ್ರೂಫ್, ಐಡೆಂಟಿಟಿ ಪ್ರೂಫ್, ಇನ್ಕಮ್ ಸರ್ಟಿಫಿಕೇಟ್ ಹಾಗೂ ಇನ್ನಿತರ ದಾಖಲೆಗಳನ್ನು ಜೊತೆಗೆ ಕೊಡಿ.

*ಬಳಿಕ ಅರ್ಜಿಯನ್ನು ಸಂಬಂಧಪಟ್ಟ ಕಚೇರಿಗೆ ಸಲ್ಲಿಸಿ.

*ಇನ್ನಿತರ ವಿವರ ಪಡೆಯಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಇದೇ ಅಪ್ಲಿಕೇಶನ್ ಅನ್ನು ನೀವು ಪಿಡಿಎಫ್ ಫಾರ್ಮ್ ನಲ್ಲಿ ಕೂಡ ಡೌನ್ಲೋಡ್ ಮಾಡಬಹುದು. ಮೊದಲಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಬಳಿಕ ಉಚಿತ ಹೊಲಿಗೆ ಯಂತ್ರ ಪಡೆಯುವ ಲಿಂಕ್ ಗೆ ಭೇಟಿ ನೀಡಿ, ಅಲ್ಲಿಂದ ಅರ್ಜಿಯ ಪಿಡಿಎಫ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ. ಪ್ರಿಂಟ್ ಔಟ್ ತೆಗೆದುಕೊಂಡು, ಫಾರ್ಮ್ ಫಿಲ್ ಮಾಡಿ, ಬೇಕಿರುವ ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಿ, ಇದನ್ನು ಗ್ರಾಮ ಪಂಚಯಿತಿಯಲ್ಲಿ ಸಲ್ಲಿಸಿ.

Women’s will get free sewing machine from central government