ಎಲ್ಲಾ ಹುಡುಗಿಯರು ದೆವ್ವಗಳು, ಆದರೆ ನನ್ನ ಹೆಂಡತಿ ಅವರ ರಾಣಿ

All the girls are devils, but my wife is her queen

Online News Today Team

ಎಲ್ಲಾ ಹುಡುಗಿಯರು ದೆವ್ವಗಳು, ಆದರೆ ನನ್ನ ಹೆಂಡತಿ ಅವರ ರಾಣಿ

ಹೆಂಡತಿ: “ನೀವು ಇಷ್ಟು ಬೇಗನೆ ಮನೆಗೆ ಬಂದಿದ್ದೀರಿ ?”

ಗಂಡ : “ನನ್ನ ಬಾಸ್ ನರಕಕ್ಕೆ ಹೋಗಿ ಎಂದರು!”


ಗಂಡನ ಟಿ ಶರ್ಟ್ ಮೇಲೆ ತಮಾಷೆಯ ಉಲ್ಲೇಖ:

ಎಲ್ಲಾ ಹುಡುಗಿಯರು ದೆವ್ವಗಳು,
ಆದರೆ ನನ್ನ ಹೆಂಡತಿ ಅವರ ರಾಣಿ.


ರಾತ್ರಿ ೨ ಗಂಟೆಗೆ ಕುಡಿದು ಬಂದ ಗಂಡನನ್ನು ನೋಡಿದ ಹೆಂಡತಿ ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲತ್ತಾಳೆ.

ಆಗ ಗಂಡ-ಎಷ್ಟು ಅಂತ ಕೆಲಸ ಮಾಡ್ತೀಯೆ ಸಾಕು ಮಲಗು ಹೋಗು ಅಂದ.


ಬಾಯ್ : ಹಲೋ, ಪಮ್ಮಿ ಡಾರ್ಲಿಂಗ್ … ಹೇಗಿದ್ದೀಯಾ ? …………………………
ಗರ್ಲ್ : ಯಾರಿದು .
ಬಾಯ್ : ನಾನು ನಿನ್  ಪ್ರಣಯಕಾಂತ!!………………
ಗರ್ಲ್ : ನೀನು ದಿವ್ಯರಾಜ್ ತಾನೆ…
ಬಾಯ್ : ಹೌದು, ನಿನಗೇಗೆ ಗೊತ್ತು ?
ಗರ್ಲ್ : ನೀನು ನಾರಾಯಣ ಹೆಗ್ಡೆ ಮಗ ತಾನೆ……,??
ಬಾಯ್ : ನಿನಗೆ ಹೆಗೋತ್ತು ??
ಗರ್ಲ್ : ನೀನು ರಂಗ ನ ಮೊಮ್ಮಗ ತಾನೆ….?
ಬಾಯ್ : ಯಸ್ !! ಆದರೆ ಜಾನು , ನಿಂಗೆ ಏಗೆ ನನ್ನ ಬಗ್ಗೆ ಇಷ್ಟೆಲ್ಲ ಗೊತ್ತಾಯ್ತು….?
ಗರ್ಲ್ : ಕಚ್ಡಾ ನನ್ನ ಮಗನೇ…. ನಿನ್ನಮ್ಮ ಕಣೋ ನಾನು !!..
ನೀನು ಕುಡಿದು ‘ಪಮ್ಮಿ’ ಗೆ ಅಲ್ಲ, ‘ಮಮ್ಮಿ’ ಗೆ ಫೋನ್ ಮಾಡಿದಿಯಾ


ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ ಎಂದರು. ಗುಂಡಾ: ನಾವು ಆದಷ್ಟು ಬೇಗ ಆ ಮಹಿಳೆಯನ್ನು ಕಂಡುಹಿಡಿಯಬೇಕು ಸಾರ್ ಎಂದ.


ಮೇಷ್ಟ್ರು : ಗುಂಡನ  ಕಾಲಿನ ಮೇಲೆ ಆಕಸ್ಮಾತ್ ಕಾರೊಂದು ಹೋಗಿಬಿಡ್ತು. ಅವನು ಮೊದಲು ಏನು ಮಾಡಬೇಕು ಗೊತ್ತೆ? ಕಾರಿನ ನಂಬರನ್ನು ಗುರ್ತು ಮಾಡ್ಕೊಳ್ಳಬೇಕು..!


ಗುಂಡಣ್ಣ: ಡಾಕ್ಟರ್ ಯಾಕೋ ನನಗೆ ತುಂಬಾ ಹೊಟ್ಟೆ ನೋವು.
ಡಾಕ್ಟರ್: ಓಹ್‌! ಗ್ಯಾಸ್ ಪ್ರಾಬ್ಲಮ್ ಆಗಿರಬೇಕು.
ಗುಂಡಣ್ಣ: ಹೌದು ಡಾಕ್ಟರ್, ಗ್ಯಾಸ್ ಬುಕ್‌ ಮಾಡಿ ಒಂದು ತಿಂಗಳಾಯಿತು ಇನ್ನೂ ಬಂದಿಲ್ಲ.


ಪ್ರಿಯಕರ: ಅಯ್ಯೋ ಮಳೆ ಜೋರಾಯ್ತು. ತಗೋ ನನ್ನ ಕೋಟ್‌ ನೀನು ಹಾಕು.
ಪ್ರಿಯತಮೆ: ಆಗ ನೀನು ನೆನೆಯುವುದಿಲ್ವಾ?
ಪ್ರಿಯಕರ: ನನ್ನ ಬಳಿ ಕೊಡೆ ಇದೆ.
****
ಗುಂಡಣ್ಣ: ವೈದ್ಯರೇ ನನಗೆ ಜ್ಞಾಪಕಶಕ್ತಿ ಪೂರ್ಣ ಹೋಗಿದೆ, ಈಗ ಹೇಳಿದ್ದನ್ನು ಈಗಲೇ ಮರೆಯುತ್ತೇನೆ.
ವೈದ್ಯ: ಹೌದಾ? ಕುಳಿತುಕೊಳ್ಳಿ, ಯಾವಾಗಿನಿಂದ ಈ ಸಮಸ್ಯೆ?
ಗುಂಡಣ್ಣ: ಯಾವ ಸಮಸ್ಯೆ?

ಈಗ ಹೇಳಿದ್ದನ್ನು ಈಗಲೇ ಮರೆಯುತ್ತೇನೆ ಡಾಕ್ಟ್ರೇ ////

WebTitle : ಎಲ್ಲಾ ಹುಡುಗಿಯರು ದೆವ್ವಗಳು, ಆದರೆ ನನ್ನ ಹೆಂಡತಿ ಅವರ ರಾಣಿ-All the girls are devils, but my wife is her queen

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Latest Kannada JokesKannada Jokes 

Follow Us on : Google News | Facebook | Twitter | YouTube