ಅಡುಗೆ ಮನೆಗೆ ಕಳ್ಳ ನುಗ್ಗಿ ಬಿರಿಯಾನಿ ತಿಂದ – ಕನ್ನಡ ಸೂಪರ್ ಜೋಕ್ಸ್

thief eaten Biryani in kitchen - Kannada super jokes

ಅಡುಗೆ ಮನೆಗೆ ಕಳ್ಳ ನುಗ್ಗಿ ಬಿರಿಯಾನಿ ತಿಂದ – ಕನ್ನಡ ಸೂಪರ್ ಜೋಕ್ಸ್

೧. ಪ್ರಯಾಣಿಕ : ನೀನು ನನ್ನ ಜೇಬಿನಲ್ಲಿ ಯಾಕೆ ಕೈ ಹಾಕಿದ್ದು ,

ಸಹ ಪ್ರಯಾಣಿಕ : ಏನೂ ಇಲ್ಲ, ಬೆಂಕಿ ಪೆಟ್ಟಿ ತಗೋಳೋದಕ್ಕೆ ಅಷ್ಟೇ . .

ಪ್ರಯಾಣಿಕ : ಅದನ್ನು ನನ್ನ ಬಳಿ ಕೇಳಿ ತಗೋಬಹುದಲ್ಲ…

ಸಹ ಪ್ರಯಾಣಿಕ : ಹೌದು , ಆದರೆ ನಾನು ಅಪರಿಚಿತರ ಬಳಿ ಮಾತನಾಡುವುದಿಲ್ಲ . .

****************************************************************

೨. ಗಂಡ : ಡಾರ್ಲಿಂಗ್ ನಾವು ಮದುವೆಗೆ ತಡವಾಗಿ ಹೋಗ್ತಾ ಇದ್ದೀವಿ ಅಂತ ಕಾಣುತ್ತೆ .

ಹೆಂಡತಿ : ಅದು ಹೇಗೆ ಹೇಳ್ತಿರಿ ?

ಗಂಡ : ನೋಡು , ಮದುವೆಗೆ ಹೋದವರೆಲ್ಲಾ ಎದುರು ಬರ್ತಾ ಇದ್ದಾರೆ…

ಹೆಂಡತಿ : ನಿಮ್ಮ ಮುಖ , ಮೊದಲು ಕಾರ್ ರಾಂಗ್ ವೇ ನಲ್ಲಿ ಹೊಡಿಸೋದು ನಿಲ್ಲಿಸಿ….

*****************************************************************

೩.ಟೀಚರ್ : ನನ್ನ ಪ್ರಶ್ನೆಗೆ ಯಾರು ಸರಿಯಾದ ಉತ್ತರ ಕೊಡ್ತಾರೋ ಅವರು ಮನೆಗೆ ಹೋಗಬಹುದು.

(ಅಷ್ಟರಲ್ಲಿ ಜೋರಾಗಿ ಕಿರುಚಿದ ಶಬ್ದ ಕೇಳಿ ಬರುತ್ತದೆ,)

ಟೀಚರ್ : ಯಾರದು ಶಬ್ದ ಮಾಡಿದ್ದು ಹೇಳಿ , ಇಲ್ಲಾ ಅಂದ್ರೆ ಏಟು ತಿಂತಿರಾ ?

ಗುಂಡ : ಅದು ನಾನೇ ಟೀಚರ್ , ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟೆ , ನಾನಿನ್ನು ಮನೆಗೆ ಹೋಗಬಹುದಾ . . . .

********************************************************************

೪.ಶ್ಯಾಮರಾವ್ : ನ್ಯಾಯಾಧೀಶರೇ , ನನ್ನ ಹೆಂಡತಿಯಿಂದ ನನಗೆ ವಿಚ್ಛೇದನ ಬೇಕು .

ನ್ಯಾಯಾಧೀಶರು : ಏಕೆ , ಕಾರಣವೇನು ?

ಶ್ಯಾಮರಾವ್ : ವರ್ಷದಿಂದ ಅವಳು ನನ್ನ ಜೊತೆ ಮಾತನಾಡುತ್ತಿಲ್ಲ.

ನ್ಯಾಯಾಧೀಶರು : ಅಯ್ಯೋ ಮಂಕೆ , ಇನ್ನೊಮ್ಮೆ ಯೋಚಿಸು , ಅಷ್ಟು ನೆಮ್ಮದಿಯ ಜೀವನ ಇನ್ನೆಲ್ಲೂ ಸಿಗೋಲ್ಲ…

***********************************************************************

೫.ಹೆಂಡತಿ : ಏನಂದ್ರೆ , ನಮ್ಮ ಅಡುಗೆ ಮನೆಗೆ ಯಾರೋ ಕಳ್ಳ ನುಗ್ಗಿ ,ನಾನು ಮಾಡಿದ ಬಿರಿಯಾನಿ ತಿಂದಿದ್ದಾನೆ.

ಗಂಡ : ಹೌದಾ , ಹಾಗಾದ್ರೆ ಈಗ ನಾನು ಪೊಲೀಸರನ್ನ ಕರೆಯಬೇಕಾ ಅಥವಾ ಆಂಬುಲೆನ್ಸ್ ಕರೆಯಬೇಕು.

************************************************************************

೬.ಶಿಕ್ಷಕರು :- ಗಾಳಿಪಟ ಎಷ್ಟೇ ದೂರಕ್ಕೆ ಹೊದ್ರೂ ದಾರ ನಮ್ಮ ಕೈಯಲ್ಲೇ ಇರುತ್ತೆ..
ಇದಕ್ಕೆ ಒಂದು ಉದಾಹರಣೆ ಕೊಡು?

ವಿದ್ಯಾರ್ಥಿ :- ಮೆಸೇಜ್ ಎಷ್ಟೇ ದೂರ ಹೊದ್ರೂ ಮೊಬೈಲ್ ನಮ್ಮ ಕೈಯಲ್ಲೇ ಇರುತ್ತೆ..‌..

************************************************************************

೭. ಹೆಡ್ಮಾಸ್ಟರ್ : ಐನ್ ಸ್ಟೀನ್ ಯಾರು ?
ಸ್ಟೂಡೆಂಟ್: ಗೊತ್ತಿಲ್ಲ ಸರ್ .
ಹೆಡ್ಮಾಸ್ಟರ್ : ಗಮನ ಸ್ಟಡೀಸ್ ಕಡೆ ಇರ್ಲಿ, ಆಗ ಎಲ್ಲಾ ಗೊತ್ತಾಗುತ್ತೆ .
ಸ್ಟೂಡೆಂಟ್ : ನಿಮಗೆ ರಮೇಶ ಯಾರು ಅಂತ ಗೊತ್ತಾ ?
ಹೆಡ್ಮಾಸ್ಟರ್ : ಗೊತ್ತಿಲ್ಲ .
ಸ್ಟೂಡೆಂಟ್ : ಗಮನ ನಿಮ್ಮ ಮಗಳ ಕಡೆನೂ ಇರ್ಲಿ. ಆಗ ಎಲ್ಲಾ ಗೊತ್ತಾಗುತ್ತೆ //////

WebTitle :  ಅಡುಗೆ ಮನೆಗೆ ಕಳ್ಳ ನುಗ್ಗಿ ಬಿರಿಯಾನಿ ತಿಂದ – ಕನ್ನಡ ಸೂಪರ್ ಜೋಕ್ಸ್-thief eaten Biryani in kitchen – Kannada super jokes

Follow us On

FaceBook Google News