ಗಿಡಕ್ಕೆ ಮಳೆಯಲ್ಲೂ ನೀರು
ಗುಂಡನ ಹೆಂಡತಿ : ಏನ್ಮಾಡ್ತಾ ಇದ್ದೀರಾ ಅಲ್ಲಿ ?
ಗುಂಡ : ಗಿಡಕ್ಕೆ ನೀರಾಕ್ತಾ ಇದ್ದೀನಿ ಕಣೆ…!
ಗುಂಡನ ಹೆಂಡತಿ : ಮಳೆ ಬೀಳ್ತಾ ಇದ್ದೀಯಲ್ಲಾ ?
ಗುಂಡ : ಪರವಾಗಿಲ್ಲ ಕಣೆ, ಛತ್ರಿ ಇಡ್ಕೊಂಡು ಹಾಕ್ತಿನಿ.
ಮಿಠಾಯಿ ಕಳ್ಳ ಗುಂಡ
ತಾಯಿ : ಹೇ ಗುಂಡ ಡಬ್ಬಿಯಲ್ಲಿ ನಾಲ್ಕು ಮಿಠಾಯಿ ಇರಬೇಕು, ಒಂದೇ ಇದೆಯಲ್ಲಾ ?
ಗುಂಡ : ಅರೆರೆ , ಇನ್ನೂ ಒಂದು ಇದಿಯಾ ? ನಾನು ನೋಡ್ಲೆ ಇಲ್ಲ.
ಗುಂಡನ ಕಿಲಾಡಿ ಉತ್ತರ
ಟೀಚರ್ : ನ್ಯೂಟನ್ ಮರದ ಕೆಳಗೆ ಕೂತು ಗುರುತ್ವಾಕರ್ಷಣೆ ಶಕ್ತಿಯನ್ನು ಕಂಡು ಹಿಡಿದನು, ಇದರ ಬಗ್ಗೆ ನಿಮಗೆ ಏನನ್ನಿಸುತ್ತದೆ, ಮಕ್ಕಳೇ ?
ಗುಂಡ : ಸುಮ್ಮನೆ ಕ್ಲಾಸಲ್ಲೇ ಇದ್ರೆ ನಾವು ಏನನ್ನೂ ಕಂಡು ಹಿಡಿಯಲು ಸಾಧ್ಯವಿಲ್ಲ, ಅನ್ನಿಸುತ್ತದೆ, ಟೀಚರ್.
ಜನ್ಮದಲ್ಲಿ ತೀರಿಸೋಕಾಗದ ಋಣ
ಗುಂಡ : ( ಕಷ್ಟದಲ್ಲಿದ್ದ ಗುಂಡ ಸ್ನೇಹಿತನ ಬಳಿ ಸಾಲ ಕೇಳಲು ಹೋಗಿ , ಈಗೆನ್ನುತ್ತಾನೆ ) ಒಂದು ಲಕ್ಷ ಸಾಲವಾಗಿ ಕೊಟ್ರೆ, ನಿನ್ನ ಋಣ ಈ ಜನ್ಮದಲ್ಲಿ ತೀರಿಸೋಕಾಗೊಲ್ಲ ಅನ್ಕೋತೀನಿ.
ಹನುಮ : ಅದೇ ಅಲ್ವ ನನ್ನ ಭಯ, ಈ ಜನ್ಮದಲ್ಲಿ ತೀರಿಸೋಕಾಗೊಲ್ಲ ಅಂದ್ರೆ ಮುಂದಿನ ಜನ್ಮದ ತನಕ ನಾನೇನು ಕಡಲೇಕಾಯಿ ಜಗೀತಾ ಕೂರಬೇಕಾ.
ಪಕ್ಕದ ಮನೆ ಸುನಿತಾಗೆ ಗುಂಡ ಏನಂದ ಗೊತ್ತಾ
ಹೆಂಡತಿ : ಏನ್ರೀ , ಪಕ್ಕದ ಮನೆ ಸುನಿತಾಗೆ ನೀವು ಏನಂದ್ರೀ..?
ಗಂಡ : ಏನ್ , ಅಂದೇ,ಮರ್ಯಾದೆ ಕೊಟ್ಟು ಮಾತನಾಡಿಸಿದೆ. ಈಗ ಬೆಳಿಗ್ಗೆ ಟಿಫನ್ ಸಮಯಕ್ಕೆ ಯಾರಾದ್ರೂ ಬಂದ್ರೆ ಏನಂತೀವಿ ?
ಹೆಂಡತಿ : ಬನ್ನಿ , ಟಿಫನ್ ಮಾಡಿ ಅಂತೀವಿ.
ಗಂಡ : ಹಾಗೆ ಊಟದ ಸಮಯಕ್ಕೆ ಯಾರಾದ್ರೂ ಬಂದ್ರೆ ಏನಂತೀವಿ..?
ಹೆಂಡತಿ : ಇನ್ನೇನಂತೀವಿ , ಬನ್ನಿ ಊಟ ಮಾಡೋಣ ಅಂತೀವಿ.
ಗಂಡ : ಹಾಗೆ , ಪಕ್ಕದ ಮನೆ ಸುನೀತಾ, ಮಲಗುವ ಸಮಯಕ್ಕೆ ಬಂದ್ರು, ಬನ್ನಿ ಮಲಗೋಣ ಅಂದೇ……
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.