ಮಂತ್ರಿಗಳನ್ನು ಭೇಟಿ ಮಾಡಿದ ಗುಂಡ, ಸಕತ್ ಜೋಕ್ಸ್

Gunda visited minister, Sakath Jokes

ಮಂತ್ರಿಗಳನ್ನು ಭೇಟಿ ಮಾಡಿದ ಗುಂಡ

ಗುಂಡ : ನಾನು ಮಂತ್ರಿಗಳನ್ನ ಹತ್ತಿರದಿಂದ ಮಾತನಾಡಿಸಿದೆ.

ಹನುಮ : ಹೌದ, ಆಮೇಲೆ ಏನಾಯ್ತು.

ಗುಂಡ : ನನ್ನ ಸಮಸ್ಯೆ,ನಮ್ಮಊರಿನ ಸಮಸ್ಯೆ ಹೇಳಿಕೊಂಡೆ, ಅವರು ಅಲ್ಲೇ ತಕ್ಷಣ ಎಲ್ಲಾ ಸಮಸ್ಯೆ ತೀರಿಸೋಕೆ ಅಧಿಕಾರಿಗಳಿಗೆ ಸೂಚಿಸಿದ್ರು, ಏನೇನು ಸೌಲಭ್ಯ ಬೇಕೋ ಅಲ್ಲೇ ಕೂತಲ್ಲೇ ಜಾರಿಮಾಡಿದ್ರು.

ಮಂತ್ರಿಗಳನ್ನು ಭೇಟಿ ಮಾಡಿದ ಗುಂಡ, ಸಕತ್ ಜೋಕ್ಸ್ - Kannada News

ಹನುಮ : ಭೇಷ್ , ಸೂಪರ್ ಕಣೋ ನೀನು, ಆಮೇಲೆ ಏನಾಯ್ತು….

ಗುಂಡ : ಏನ್ ಮಾಡ್ಲಿ,ಅಷ್ಟೊತ್ತಿಗೆನಿದ್ದೆಯಿಂದಎಚ್ಚರಆಯ್ತು,ಕನಸುಅರ್ಧಕ್ಕೆನಿಂತೋಯ್ತು…

ಕನ್ನಡದ ಕೋಟ್ಯಾಧಿಪತಿ

ಕನ್ನಡದ ಕೋಟ್ಯಾಧಿಪತಿಯಲ್ಲಿ ಪ್ರಶ್ನೆಗೆ ಉತ್ತರ ಕೊಟ್ಟು ಆಮೇಲೆ ಕೋಟಿ ಸಂಪಾಧನೆ ಮಾಡ್ತೀವಿ.

ರಾಜಕಾರಣಿಗಳು ಮೊದಲು ಕೋಟಿ ಸಂಪಾದನೆ ಮಾಡಿ ಆಮೇಲೆ ಉತ್ತರ ಕೊಡ್ತಾರೆ.

ಫೇಸ್ ಬುಕ್ ಪೋಸ್ಟ್

ತಂದೆ ಮಗನಿಗೆ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡ್ತಾರೆ,  ” ಮಗನೆ, ಟೈಮ್ 10 ಘಂಟೆ ಆಯ್ತು ಇವತ್ತಾದ್ರು ಕಂಪ್ಯೂಟರ್ ಆಪ್ ಮಾಡಿ, ರೂಮಿಂದ ಹೊರಗೆ ಬಾ , ಒಟ್ಟಿಗೆ ಊಟ ಮಾಡೋಣ, ನಿನ್ನ ನೋಡಿ 3 ದಿನ ಆಯ್ತು. ( ಮಗನಿಗೆ ಮೆಸೇಜ್ ನೋಡಿ, ಬೇಸರ ಆಯ್ತು ).

ಮಗ ಆ ಮೆಸೇಜ್ ಗೆ ಒಂದು ಲೈಕ್ ಕೊಟ್ಟು , ಬ್ರೌಸಿಂಗ್ ಮುಂದು ವರಿಸಿದ.

ಮುದುಕಿಗೆ ಬದುಕುವ ಆಸೆKannada Jokes - Jokes in Kannada

ಎಪ್ಪತ್ತು ವರ್ಷದ ಮುದುಕಿ, ದೇವರನ್ನು ಪ್ರಾರ್ಥಿಸುತ್ತಾಳೆ.

ಮುದುಕಿಯ ಪ್ರಾರ್ಥನೆ ಕೇಳಿದ ದೇವರು ಪ್ರತ್ಯಕ್ಷವಾಗಿ, ಏನು ವಾರ ಬೇಕೆಂದು ಕೇಳುತ್ತಾನೆ.

ಮುದುಕಿ, ” ದೇವರೇ ನನ್ನನ್ನು, ಇನ್ನೂ ಹೆಚ್ಚು ದಿನಗಳು ಬದುಕುವಂತೆ ಮಾಡು ಎಂಬ ವರ ಕೇಳುತ್ತಾಳೆ.

ಅದಕ್ಕೆ ದೇವರು ತಥಾಸ್ತು , ನೀನಿನ್ನೂ 30 ವರ್ಷಗಳು ಬದುಕು ಎಂದು ವಾರ ನೀಡಿ ಅದೃಶ್ಯನಾಗುತ್ತಾನೆ.

ವರ ಸಿಕ್ಕಿದ ದಿನದಿಂದ ಮುದುಕಿ ಬಿಗಿ ಹೋಗುತ್ತಾಳೆ, ದಿನವೂ ಮೇಕಪ್ ಮಾಡಿಕೊಂಡು ಅಡ್ಡಾಡಲು ಶುರುಮಾಡುತ್ತಾಳೆ, ಆದರೆ ಒಂದೇ ತಿಂಗಳಿಗೆ ಸಾವನ್ನಪ್ಪುತ್ತಾಳೆ.

ಸತ್ತ ಮುದುಕಿ ಸ್ವರ್ಗದಲ್ಲಿ ಕೋಪದಿಂದ ದೇವರನ್ನು ಕೇಳುತ್ತಾಳೆ, ದೇವರೇ ನಾನಿನ್ನು ಬದುಕುತ್ತೇನೆ ಎಂದು ವರ ನೀಡಿ, ಈಗ ನಾನು ಸಾಯುವಂತೆ ಮಾಡಿದ್ದಿಯ ” ಎನ್ನುತ್ತಾಳೆ.

ಅದಕ್ಕೆ ದೇವರು ” ತಾಯಿ , ನಿನ್ನ ಅತಿಯಾದ ಮೇಕಪ್ ನಿಂದ ನಿನ್ನ ಗುರುತು ನಮಗೆ ಸಿಗಲಿಲ್ಲ” ಎನ್ನುತ್ತಾನೆ.

ಡಾಕ್ಟರ್ ಮತ್ತು ರೋಗಿ

ಡಾಕ್ಟರ್ :  ಸಿಕ್ಸ್ಟಿ, ನೈನ್ಟಿ ಅಂತ ಕುಡಿತಾ ಇದ್ರೆ , ಪ್ರತಿ ಪೆಗ್ ಕುಡಿದಾಗು ನಿನ್ನ ಆಯಸ್ಸು 5 ನಿಮಿಷ ಕಡಿಮೆ ಆಗುತ್ತದೆ.

ರೋಗಿ : ಅದಕ್ಕೆ ಡಾಕ್ಟ್ರೇ,ನಾನುಪ್ರತಿಪೆಗ್ ಆದ ಮೇಲೆ ಐದೈದು ನಿಮಿಷ ನಗ್ತಾ ಇರ್ತೀನಿ ….

ಗಂಡ ಹೆಂಡತಿ

ಕೆಲವೊಬ್ಬರು ಜಾತಿ,ಮತ ಎಂದು ಜಗಳ ಮಾಡುತ್ತಾರೆ. ಇನ್ನೂ ಕೆಲವೊಬ್ಬರು ದುಡ್ಡಿಗಾಗಿ ಜಗಳ ಮಾಡ್ತಾರೆ, ಮಿಕ್ಕವರು ಖುರ್ಚಿಗಾಗಿ. ಆದರೆ ಗಂಡ ಹೆಂಡತಿ ಇಬ್ಬರೇ ಯಾವುದೇ ಕಾರಣ ಇಲ್ಲದೆ ನಿಸ್ವಾರ್ಥವಾಗಿ ಜಗಳ ಮಾಡ್ತಾರೆ.

Follow us On

FaceBook Google News

Advertisement

ಮಂತ್ರಿಗಳನ್ನು ಭೇಟಿ ಮಾಡಿದ ಗುಂಡ, ಸಕತ್ ಜೋಕ್ಸ್ - Kannada News

Read More News Today