ಇಲ್ಲಿ ಸೂಸು ಮಾಡಿದ್ರೆ ಇಡ್ಕೊಂಡ್ ಹೋಗ್ತೀನಿ . . ! ಮಸ್ತ್ ಕನ್ನಡ ಜೋಕ್ಸ್

illi Susu Madidre idkond Hogtini-Mast Kannada Jokes

ಇಲ್ಲಿ ಸೂಸು ಮಾಡಿದ್ರೆ ಇಡ್ಕೊಂಡ್ ಹೋಗ್ತೀನಿ . . ! ಮಸ್ತ್ ಕನ್ನಡ ಜೋಕ್ಸ್

ಪೊಲೀಸ್ ಸ್ಟೇಷನ್ ಮುಂದೆ ನಿಂತು ಗುಂಡ ಸೂಸು ಮಾಡುತ್ತಿದ್ದ.

ಪೊಲೀಸ್ : ಹೇ ಹುಡುಗ ಇಲ್ಲಿ ಸೂಸು ಮಾಡಬಾರದು , ಮಾಡಿದ್ರೆ ಇಡ್ಕೊಂಡ್ ಹೋಗ್ತೀನಿ.

ಗುಂಡ : ಇಡ್ಕೊಂಡು ಹೋಗಿ ಸಾರ್ , ಸುಮ್ಮನೆ ವೇಸ್ಟ್ ಆಗ್ತಾ ಇದೆ . ನಿಮಗೇನುಕ್ಕಾದರೂ ಉಪಯೋಗವಾಗಬಹುದು.

********************

ಪೊಲೀಸ್ : ಯಾಕಯ್ಯ ಯಾವಾಗಲೂ ಅದೇ ಮನೆಗೆ ಹೋಗಿ ಕಳ್ಳತನ ಮಾಡಿ ಸಿಕ್ಕಿಬೀಳ್ತಿಯ.

ಕಳ್ಳ : ಸಾರ್ , ಫ್ಯಾಮಿಲಿ ಡಾಕ್ಟಾರ್ , ಫ್ಯಾಮಿಲಿ ಲಾಯರ್ ತರ ನಾನು ಅವರ ಫ್ಯಾಮಿಲಿ ಕಳ್ಳ……

********************

ಪೊಲೀಸ್ : ಹೇ ಏನಯ್ಯ ರಾತ್ರಿ 12 ಘಂಟೆ ಆದರು ಓಡಾಡ್ತಾ ಇದ್ದಿಯಾ , ಏನು ಏರೋಪ್ಲೇನ್ ಹತ್ತಿಸಬೇಕಾ ..

ದಾರಿಹೋಕ : ಅಯ್ಯೋ ಬೇಡ ಸಾರ್ , ನಿಮಗೇಕೆ ಅಷ್ಟು ಶ್ರಮ , ಏರೋಪ್ಲೇನ್ ಬೇಡ ಯಾವುದಾದರೂ ಆಟೋ ಹತ್ತಿಸಿ ಸಾಕು.

********************

ಹುಡುಗ : ನಿನಗೆ ಎಷ್ಟು ಮಾರ್ಕ್ಸ್ ಬಂದಿದೆ….

ಹುಡುಗಿ : 99% ಬಂದಿದೆ… ಪಸ್ಟ್ ಕ್ಲಾಸ್

ಹುಡುಗ : ಅಬ್ಬಾ , ಇದರಲ್ಲಿ ನನ್ನಂತಹ 3 ಜನ ಹುಡುಗರು ಜಸ್ಟ್ ಪಾಸ್ ಆಗಬಹುದುತ್ತು.

*******************

ಹುಡುಗಿ : ನೀನು ನನ್ನ ಎಷ್ಟು ಪ್ರೀತಿ ಮಾಡುತ್ತೀಯಾ . . .

ಹುಡುಗ : ಅದು ಹೇಳಲು ಸಾಧ್ಯವಿಲ್ಲ , ಷಾಜಹಾನ್ ಅಷ್ಟು ಪ್ರೀತಿಸ್ತಿನಿ..

ಹುಡುಗಿ : ಆಗಾದ್ರೆ ತಾಜ್ ಮಹಲ್ ಯಾವಾಗ ಕಟ್ಟಿಸ್ತೀಯಾ ?

ಹುಡುಗ : ಲ್ಯಾನ್ಡ್ ರೆಡಿಯಿದೆ , ಆದರೆ ನಿನ್ನ ಸೇವಿಗೆ  ಕಾಯ್ತಾ ಇದ್ದೀನಿ . . .

*******************

ಮಂತ್ರಿ : ಪ್ರಭು , ಯುದ್ಧಕ್ಕೆ ಈ ಕೂಡಲೇ ರೆಡಿಯಾಗಿ ಅಂತ ಪಕ್ಕದ ರಾಜ್ಯದ ರಾಜ ಮೆಸೇಜ್ ಕಳಿಸಿದ್ದಾನೆ , ಈಗ ಏನ್ ಮಾಡೋದು ಪ್ರಭು.

ರಾಜ : ಹೌದೇ , ಆಗಾದರೆ , ಮೆಸೇಜ್ , ಸೆಂಡಿಂಗ್ ಫೇಲ್ ಅಂತ ಮೆಸ್ಸೇಜ್ ಕಳುಹಿಸು.

*******************

ಮಗ : ಅಪ್ಪಾ , ನಾನು ಗಾಂಧೀಜಿ ತರ ಆಗಬೇಕು ಅಂತ ಇದ್ದೀನಿ . . .

ತಂದೆ : ವೆರಿ ಗುಡ್ , ಆಗು . .

ಮಗ : ಆಗಾದರೆ ಗಾಂಧೀಜಿ 12 ನೇ ವರ್ಷಕ್ಕೆ ಮದುವೆ ಆದ್ರಂತೆ , ನನಗೂ ಮಾಡಿಸಪ್ಪಾ . .  .

******************

ಸೇಲ್ಸ್ ಮೆನ್ : ಸಾರ್ , ನಿಮಗೆ ಪೌಡರ್ ಕೊಡಲಾ….

ಗುಂಡ : ಇದು ಯಾವುದಕ್ಕೆ ,

ಸೇಲ್ಸ್ ಮೆನ್ : ಇದು ಇಲಿಗಳಿಗೆ ಉಪಯೋಗಿಸೋ ಪೌಡರ್ . . .

ಗುಂಡ : ಬೇಡ ಬೇಡ , ಇವತ್ತು ಪೌಡರ್ ಕೊಟ್ರೆ ನಾಳೆ ಲಿಪ್ ಸ್ಟಿಕ್ ಕೇಳ್ತಾವೆ ./////

WebTitle : ಇಲ್ಲಿ ಸೂಸು ಮಾಡಿದ್ರೆ ಇಡ್ಕೊಂಡ್ ಹೋಗ್ತೀನಿ . . ! ಮಸ್ತ್ ಕನ್ನಡ ಜೋಕ್ಸ್-illi Susu Madidre idkond Hogtini-Mast Kannada Jokes 

Follow us On

FaceBook Google News