ಬಾವಿಗೆ ಬಿದ್ದ ಅತ್ತೆ ಕಾರ್ ಗಿಫ್ಟ್ ಮಾಡಿದ ಮಾವ – ಸೂಪರ್ ಜೋಕ್ಸ್

Car Gift-Intelligent Husband-Jokes Fun Haasya

ಬಾವಿಗೆ ಬಿದ್ದ ಅತ್ತೆ ಕಾರ್ ಗಿಫ್ಟ್ ಮಾಡಿದ ಮಾವ

ಅತ್ತೆಯೊಬ್ಬಳಿಗೆ ತನ್ನ ಅಳಿಯಂದಿರಿಗೆ ತನ್ನ ಮೇಲಿರುವ ಪ್ರೀತಿ ಎಷ್ಟು ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು.

ಕೂಡಲೇ ಆಕೆ ಮನೆಯ ಪಕ್ಕದಲ್ಲಿದ್ದ ಬಾವಿಗೆ ಜಿಗಿದು ಬಿಟ್ಟಳು. ಅಲ್ಲೇ ಕುಳಿತು ಹರಟೆ ಹೊಡೆಯುತ್ತಿದ್ದ ಅಳಿಯಂದಿರು ಓಡಿ ಬಂದರು.

ಮೊದಲನೆಯ ಅಳಿಯ ಬಾವಿಗೆ ಹಾರಿ ಆಕೆಯನ್ನು ಕಾಪಾಡಿದ.  ಹಿರಿಹಿರಿ ಹಿಗ್ಗಿದ ಅತ್ತೆಮ್ಮ, ಅವನಿಗೆ ತನ್ನ ಕಾರ್ ಕೊಟ್ಟುಬಿಟ್ಟಳು.

ಬಾವಿಗೆ ಬಿದ್ದ ಅತ್ತೆ ಕಾರ್ ಗಿಫ್ಟ್ ಮಾಡಿದ ಮಾವ - ಸೂಪರ್ ಜೋಕ್ಸ್ - Kannada News

ಎರಡನೆಯ ದಿನ ಮತ್ತೆ ಬಾವಿಗೆ ಹಾರಿದಳು. ಎರಡನೆಯ ಅಳಿಯ ಜಿಗಿದು ಆಕೆಯನ್ನು ಬದುಕುಳಿಸಿದ. ಅವನಿಗೆ ಬೈಕ್ ಕೊಟ್ಟಳು.

ಮೂರನೆಯ ಅಳಿಯನನ್ನು ಪರೀಕ್ಷಿಸಬೇಕೆಂದು ಮೂರನೇ ದಿನವೂ ಬಾವಿಯಲ್ಲಿ ಜಿಗಿದಳು. ಮೂರನೇ ಅಳಿಯ ಇನ್ನೇನು ಆಕೆಯನ್ನು ಉಳಿಸುವವನಿದ್ದ, ಅಷ್ಟರಲ್ಲೇ ಅವನು ಅಂದುಕೊಂಡ: ‘ಇನ್ನೇನು ಮನೆಯಲ್ಲಿ ಹಳೆಯ ಸೈಕಲ್ ಅಷ್ಟೇ ಉಳಿದಿರೋದು. ಆ ಡಬ್ಬಾ ಸೈಕಲ್‌ಗಾಗಿ ಯಾಕೆ ಕಷ್ಟ ಪಡಬೇಕು? ಹೀಗೆ ಯೋಚಿಸಿದವನೇ. ಸುಮ್ಮನಾಗಿಬಿಟ್ಟ. ಅತ್ತೆ ಸತ್ತೇಹೋದಳು.

ಆದರೂ ಮರುದಿನ ಈ ಮೂರನೇ ಅಳಿಯನಿಗೆ ಮರ್ಸಿಡಿಸ್ ಕಾರು ಸಿಕ್ಕಿತು. ಹೇಗೆ ಗೊತ್ತಾ?
ಮಾವ ತಂದು ಕೊಟ್ಟ!!


ಮಾಸ್ತರ್ – ಯಾಕೋ ಗುಂಡಾ ನಾ ಎಷ್ಟ ಬ್ಯೆದರೂ ಸಿಟ್ಟು ಮಾಡಿಕೊಳ್ಳುವದಿಲ್ಲ? ಎದರು ಮಾತಾಡುದಿಲ್ಲ? ಯಾಕಲೇ?

ಗುಂಡ – ಸರ್ ನೀವು ಹೇಳಿದ ವೇದವಾಕ್ಯ ನನ್ನ ಕಿವ್ಯಾಗ ಇನ್ನೂ ಗುಂಯ್ ಗುಡತ್ತ ……

ಮಾಸ್ತರ್ – ಎಷ್ಟ ಒಳ್ಳೆಯ ಶಿಷ್ಯಾಲೆ ನೀನು, ಯಾವದಲೇ ಆ ವೇದವಾಕ್ಯ ಅದು?
ಗುಂಡ – ನೀವೇ ಹೇಳಿದ್ದು ಸರ್, ” ನಾಯಿ ಬೊಗಳಿದ್ರ ದೇವಲೋಕ ಹಾಳಾಗತೈತೇನು?”


ಇಂಟೆಲಿಜೆಂಟ್ ಹಸ್ಬೆಂಡ್

ಪತ್ನಿ,  ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡವಲ್ಲಿ  ನಿರತಳಾಗಿದ್ದಳು.

.ಗಂಡ – ನೀನು ಎಲ್ಲಿಗೆ ಹೋಗುತ್ತಿರುವೆ?
.ಹೆಂಡತಿ – ನಾನು ನನ್ನ ತಾಯಿ ಮನೆಗೆ ಹೋಗುತ್ತಿದ್ದೇನೆ..
.ಗಂಡ ಕೂಡ ತನ್ನ ಬಟ್ಟೆಗಳ ಪ್ಯಾಕಿಂಗ್ ಪ್ರಾರಂಭಿಸುತ್ತಾನೆ.
.ಪತ್ನಿ – ಈಗ ನೀನು ಎಲ್ಲಿಗೆ ಹೋಗುತ್ತಿರುವೆ?
.ಗಂಡ – ನಾನು ನನ್ನ ತಾಯಿ ಮನೆಗೆ ಹೋಗುತ್ತಿರುವೆ.
.ಹೆಂಡತಿ – ಮಕ್ಕಳ ಗತಿ ಏನು?
.
ಗಂಡ – ಆಲೋಚಿಸಿ … ನಿಮ್ಮ ತಾಯಿ ಮನೆಗೆ ನೀನು ಮತ್ತು ನನ್ನ ತಾಯಿ ಮನೆಗೆ ನಾನು ಹೋಗುತ್ತಿದ್ದೇವೆ … ಅವರು ತಮ್ಮ ತಾಯಿ ಮನೆಗೆ ಹೋಗಲಿ …….
ಹೆಂಡತಿ ಬಟ್ಟೆ ಪ್ಯಾಕ್ ಮಾಡುವುದನ್ನು ನಿಲ್ಲಿಸುತ್ತಾಳೆ. ////

WebTitle : ಬಾವಿಗೆ ಬಿದ್ದ ಅತ್ತೆ ಕಾರ್ ಗಿಫ್ಟ್ ಮಾಡಿದ ಮಾವ – ಸೂಪರ್ ಜೋಕ್ಸ್-Car Gift-Intelligent Husband-Jokes Fun Haasya

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Latest Kannada JokesKannada Jokes 

Follow us On

FaceBook Google News